Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ನಡೆದ ಆಧಿದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ರಥೋತ್ಸವಕ್ಕೆ ಚಾಲನೆ ನೀಡದ ಮಾಜಿ ಶಾಸಕ ಆರ್ ನರೇಂದ್ರ

ವರದಿ :ಬಂಗಾರಪ್ಪ ಸಿ
ಹನೂರು : ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ನೂತನ ರಥ ನಿರ್ಮಾಣ ಮಾಡಿದ್ದು ಲೋಕಾರ್ಪಣೆಯನ್ನು ಮಾಜಿ ಶಾಸಕರಾದ ಆರ್ ನರೇಂದ್ರ ಎಳೆಯುವ ಮೂಲಕ ಸ್ವಾಗತಿಸಿದರು .

ನಂತರ ಮಾತನಾಡಿದ ಅವರು ಹನೂರು ಪಟ್ಟಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರ ಅಪೇಕ್ಷೆ ಮೇರೆಗೆ ಹಾಗೂ ಗ್ರಾಮಸ್ಥರು ಎಲ್ಲಾರು ತಿರ್ಮಾನಿಸಿ ಹಲವಾರು ತಲೆಮಾರುಗಳಿಂದ ಇದ್ದ ತೇರು ನಿರ್ಮಾಣದ ಕನಸು ಇಂದು ನನಸಾಗಿದೆ .ಈ ರಥವು ಸುಮಾರು 14.5ಅಡಿಯ‌ ನೂತನ ರಥ ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿದೆ . ರಥ ಶಿಲ್ಪಿಗಳಿಂದ ವಿನೂತನ ಮಾದರಿಯ ಸುಂದರವಾದ 4ಚಕ್ರಗಳುಳ್ಳ ರಥವು ತಳಭಾಗದ ಅಚ್ಚುಗಡ್ಡಿ, ಕುದುರೆ,ಸಿಂಹ ಲಾಂಛನ ಸೇರಿ ಎಂಟು ಅಷ್ಟಕಂಬಗಳುಳ್ಳ 14.5ಅಡಿಯ‌ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿ ಕೆತ್ತಲ್ಪಟ್ಟಿದೆ ,ಈ ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವಿದೆ ಹೊಂದಿರುವ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ದಿನ ಕಳೆದಂತೆ ಪ್ರಖ್ಯಾತ ಹೊಂದುತ್ತಿದ್ದು ನೆರೆಯರಾಜ್ಯ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೂಡ ಭಕ್ತ ಸಮೂಹ ದೇವಾಯಲಯಕ್ಕೆ ಆಗಮಿಸುತ್ತಾರೆ ಇನ್ನೂ ವರ್ಷಕ್ಕೆ ಒಂದು ಭಾರಿ ನೆಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ ಅಲ್ಲದೆ ವಿಶೇಷ ಪೂಜಾ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅಲ್ಲದೆ ಪ್ರತಿ ಮಂಗಳವಾರ ಮದ್ಯಾಹ್ನ ಆಗಮಿಸುವ ಸಮಸ್ತ ಭಕ್ತರಿಗೆ ಹಲವು ವರ್ಷಗಳಿಂದ ದಾಸೋಹದ ವ್ಯವಸ್ಥೆಯನ್ನು ಸಮಿತಿವತಿಯಿಂದ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಲಿಂಗರಾಜು ಮಾತನಾಡಿ ಸೋಮವಾರ ರಾತ್ರಿಯಲ್ಲಿ ಜಾಗರ ಸಮರ್ಪಣೆ ಮಾಡಲಾಗಿದೆ, ಮಂಗಳವಾರ ಮದ್ಯಾಹ್ನ12ಘಂಟೆ ಸಮಯದಲ್ಲಿ ರಥೋತ್ಸವವು ಅದ್ದೂರಿಯಾಗಿ ಜರುಗಿತು ಇದೇ ದಿನ ತಂಪುಜ್ಯೋತಿಯನ್ನು ಬೆಳಗಲಾಯಿತು. ಬುಧವಾರದಂದು ಹರಕೆ ಹೂತ್ತಭಕ್ತರಿಂದ ಭಾಯಿಬೀಗ ಸೇರಿದಂತೆ ಏಪ್ರೀಲ್4ರಗುರುವಾರ ಮುಂಜಾನೆ ಆಗ್ನಿ‌ಕುಂಡ ಪ್ರದರ್ಶನ ಜರುಗಲಿದ್ದು ಇತಿಹಾಸದಲ್ಲಿ ಮೊದಲ ಭಾರಿಗೆ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಬಂದು ಭಾಗಿಯಾಗಿ ಹೊಸ ಅನುಭವ ಪಡೆದುಕೊಂಡರು ಎಂದು ತಿಳಿಸಿದರು.

ಶ್ರೀಬೆಟ್ಟಳ್ಳಿ ಮಾರಮ್ಮ ದೇವಿಯ ಸಾನ್ನಿಧ್ಯದಲ್ಲಿ ನೂತನ ದೇವಿಯ ರಥೋತ್ಸವನ್ನು ಕಣ್ತುಂಬಿಕೊಂಡು ಅಮ್ಮನವರ ಆರ್ಶೀವಾದದೊಂದಿಗೆ ಭಕ್ತರ ಬೇಡಿಕೆಗಳು ಹಾಗೂ ಇಷ್ಟಾರ್ಥಗಳು ನೇರವೇರಲಿ ಸರ್ವರಿಗೂ ಒಳಿತಾಗಲಿ ಎಂದು ಗ್ರಾಮಸ್ಥರು ಸೇರಿದಂತೆ ಆಡಳಿತ ಮಂಡಳಿಯವರು ತಿಳಿಸಿದರು. ಇದೇ ಸಮಯದಲ್ಲಿ ಪ್ರಧಾನ ಅರ್ಚಕರಾದ ರಾಜೂಜೀರಾವ್ ಕುಟುಂಬ ವರ್ಗ ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು .
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ