ಬಳ್ಳಾರಿ. ಜೂನ್. 03; ಜಿಲ್ಲಾ ಮಹಿಳಾ ಕ್ರಿಕೆಟ್ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ದಿನಗಳ ಕಾಲ ನಗರದ ವಿಮ್ಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಸುಮಾರು ನಾಲ್ಕರಿಂದ ಆರು ತಂಡಗಳು ಭಾಗವಹಿಸಿ ಕ್ರೀಡಾ ಮನೋಭಾವ ಮರಿದಿದ್ದವು . ಫೈನಲ್ ಪಂದ್ಯದಲ್ಲಿ ಬಿಜಾಪುರ ಮತ್ತು ಬಳ್ಳಾರಿ ಮುಖಾಮುಖಿಯಾಗಿ ಫೈನಲ್ ಪಂದ್ಯವನ್ನು ಬಿಜಾಪುರ ವರ್ಸಸ್ ಬಳ್ಳಾರಿ ನಡುವೆ ನಡೆಯಿತು ಬಿಜಾಪುರ ತಂಡ ವಿನ್ನರ್ ತಂಡವಾಗಿ ಹೊರಹೊಮ್ಮಿತು ಬಳ್ಳಾರಿ ತಂಡ ರನ್ನರ್ ಅಪ್ ತಂಡಕ್ಕೆ ತೃಪ್ತಿಪಟ್ಟಿಕೊಂಡಿದ್ದು ಎರಡನೇ ಸ್ಥಾನ ಪಡೆದುಕೊಂಡರು ಈ ಪ್ರಶಸ್ತಿಯನ್ನು ಬಳ್ಳಾರಿಯ ಮಹಾನಗರ ಪಾಲಿಕೆಯ ಮಹಾ ಪೌರರಾದ ಗಾದೆಪ್ಪ ನವರು ಮತ್ತು ಜಿಲ್ಲಾ ಅಕಾಡೆಮಿ ಅಧ್ಯಕ್ಷರಾದ ಬ್ರಹ್ಮಯ್ಯ ನಾಯ್ಡು ಮತ್ತು ಅನುರಾಧ ಮೇಡಂ ಕಾರ್ಯಧ್ಯಕ್ಷರಾದ ಅಶೋಕ್ ಚೌಹಾನ್ ಮತ್ತು ತುಳಸಿ ಮೇಡಂ ವಿತರಿಸಿದರು ಜೊತೆಯಲ್ಲಿ ಉಪಾಧ್ಯಕ್ಷರಾದ ಉಜ್ವಲ ಮಂಜುಳಾ ಗೌಡ ಶ್ರೇಷ್ಠ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಶಿವನ ಗೌಡ್ರು ಅಕಾಡೆಮಿಯ ಸಂಚಾಲಕ ಡಾಕ್ಟರ್ ವಿರೂಪಾಕ್ಷಯ್ಯ ಮತ್ತು ಕರಾಟೆ ಪ್ರಸಾದ್ ಸರ್ ಜಿಲಾನ್ ಉಪಸ್ಥಿತರಿದ್ದು ತಂಡದ ನಾಯಕಿ ಚಾರ‍್ವಿ ಮತ್ತು ದಿವ್ಯ ರನ್ನರ್ಸ್ ಕಪ್ಪನ್ನು ಮತ್ತು ಸರ್ಟಿಫಿಕೇಟ್ ಮೆಡಲ್ ಅನ್ನು ಪಡೆದುಕೊಂಡರು.
