Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಶಿಷ್ಟ ಪಂಗಡ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ  ಬಳ್ಳಾರಿ  ಪಾಲಿಕೆ ಸದಸ್ಯ ಕೆ ಹನುಮಂತಪ್ಪ ಭೇಟಿ, ಪರಿಶೀಲನೆ 





 ಬಳ್ಳಾರಿ ಜೂನ್ 13 : ನಗರದ 22ನೇ ವಾರ್ಡಿನ ಪರಿಶಿಷ್ಟ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ  ಇಂದು ಮುಂಜಾನೆ ಮಹಾನಗರ ಪಾಲಿಕೆ ಸದಸ್ಯ ಕೆ ಹನುಮಂತಪ್ಪ ದಿಡೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.


 ಊಟದಲ್ಲಿ ತರಕಾರಿ ಹಾಕುವುದಿಲ್ಲ ಊಟಕ್ಕೆ ಸಮಯ ನಿಗದಿಪಡಿಸಿದ್ದು ತಡವಾಗಿ ಬರುವ ವಿದ್ಯಾರ್ಥಿನಿಯರಿಗೆ ಊಟ ನೀಡುವುದಿಲ್ಲ ಅಡುಗೆದಾರರು ಊಟವನ್ನು ತಾವೇ ಡಬ್ಬಿಯಲ್ಲಿ ತುಂಬಿಕೊಂಡು  ಹೋಗುತ್ತಾರೆ ಇದರಿಂದ ನಮಗೆ ಊಟ ಸರಿಯಾಗಿ ಸಿಗದೇ ತೊಂದರೆಯಾಗುತ್ತದೆ, ಶೌಚಾಲಯ ಮತ್ತು ರೂಮ್ ಗಳನ್ನು ಸಮಯಕ್ಕೆ ಸರಿಯಾಗಿ ಶುಚಿಗೊಳಿಸುವುದು ಇಲ್ಲ ಎಂದು ತಮ್ಮ ಹವಾಲನ್ನು  ಪಾಲಿಕೆ ಸದಸ್ಯರಲ್ಲಿ ವಿದ್ಯಾರ್ಥಿನಿಯರು ಹೇಳಿಕೊಂಡರು.


 ಅಲ್ಲಿನ ವಿದ್ಯಾರ್ಥಿನಿಯರು  ಅನುಭವಿಸುತ್ತಿರುವ ಸಮಸ್ಯೆಯನ್ನು ತಿಳಿದುಕೊಂಡು  ಅಧಿಕಾರಿಗಳಿಗೆ ಎಲ್ಲಾ  ಸಮಸ್ಯೆಗಳನ್ನು ಪರಿಹರಿಸುವಂತೆ  ತಾಕೀತು  ಮಾಡಿದ ಹನುಮಂತಪ್ಪ.  ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ ಬಾಲಕಿಯರ ಆರೋಗ್ಯವನ್ನು  ಕಾಪಾಡಬೇಕೆಂದು  ಜಿಲ್ಲಾ ಅಧಿಕಾರಿ ಮತ್ತು ತಾಲೂಕ ಅಧಿಕಾರಿಗಳಿಗೆ ಸೂಚಿಸಿದರು. ಅಷ್ಟೇ ಅಲ್ಲದೆ ಸ್ಥಳದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಅಬ್ದುಲ್ಲಾ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಉಚಿತ ಆರೋಗ್ಯ  ತಪಾಸಣಾ ಶಿಬಿರವನ್ನು ಏರ್ಪಡಿಸಬೇಕೆಂದು ವಿನಂತಿಸಿದರು.  ಮತ್ತು ವಿದ್ಯಾರ್ಥಿನಿಯರಿಗೆ ನಿಲಯದಲ್ಲಿ ಸ್ವಚ್ಛ ಭಾರತ್ ಅಭಿಯಾನ ಅಳವಡಿಸಿಕೊಂಡು  ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಮತ್ತು ಬಳಸಿ ಬಿಸಾಡುವ ಪ್ಯಾಡ್‌ಗಳನ್ನು ಶೌಚಾಲಯಗಳಲ್ಲಿ ಎಸೆಯಬಾರದು ಇದರಿಂದ ಒಳಚರಂಡಿ ವ್ಯವಸ್ಥೆಗೆ ತೊಂದರೆಯಾಗುತ್ತದೆ ಎಂದು ಸಲಹೆ ನೀಡಿದರು.


ಫುಡ್ ಪಾಯಿಸನ್ ನಿಂದ ಮಹಾದೇವಿ, ಚಂದನ ಮತ್ತು ಅಶ್ವಿನಿ ಎಂಬ ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಮಟ್ಟದ ಆಹಾರ ಮತ್ತು ಶುದ್ಧವಾದ  ಕುಡಿಯುವ ನೀರನ್ನು ಒದಗಿಸಲು  ಇಲಾಖೆಯ ಜಿಲ್ಲಾ ಅಧಿಕಾರಿ   ದಿವಾಕರ್,  ತಾಲೂಕ ಅಧಿಕಾರಿ ಗಾದಿಲಿಂಗಪ್ಪ ಅವರಿಗೆ ಸೂಚಿಸಿದರು.


 ಫುಡ್ ಪಾಯಿಸನ್ ಕುರಿತು ವಾರ್ಡನ್ ಅವರಲ್ಲಿ ವಿಚಾರಿಸಿದಾಗ, ವಿದ್ಯಾರ್ಥಿ ನಿಲಯದಲ್ಲಿ ಸುಮಾರು 70 ಜನ ವಿದ್ಯಾರ್ಥಿನಿಯರಿದ್ದಾರೆ ಅವರಿಗೆಲ್ಲ ಬಿಟ್ಟು ಕೇವಲ ಮೂರು ಮಂದಿಗೆ ಮಾತ್ರ ಫುಡ್ ಪಾಯಿಸನ್ ಆಗಿದೆ, ಕೆಲವೊಬ್ಬ ವಿದ್ಯಾರ್ಥಿನಿಯರು ಎಷ್ಟು ಹೇಳಿದರು ಕೇಳದೆ ಜಂಕ್ ಫುಡ್ ಗಳನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ, ಬಳಸಿದ ಪ್ಯಾಡ್ ಗಳನ್ನು ಶೌಚಾಲಯದಲ್ಲಿ ಹಾಕಿ ಅವುಗಳನ್ನು ಬ್ಲಾಕ್ ಆಗುವಂತೆ ಮಾಡುತ್ತಾರೆ ಎಂದರು. ಏನೇ ಆಗಲಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ   ನೋಡಿಕೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ತಾಲೂಕ ಅಧಿಕಾರಿ ಗಾದಿಲಿಂಗಪ್ಪ ತಿಳಿಸಿದರು


 ಈ ಸಂದರ್ಭದಲ್ಲಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಅಧಿಕಾರಿ ದಿವಾಕರ್ ,  ಪಾಲಿಕೆ ಸದಸ್ಯ  ಹನುಮಂತಪ್ಪ,  ಗಡ್ಡಂ ತಿಮ್ಮಪ್ಪ, ಊಳೂರು  ಸಿದ್ದೇಶ್, ತಾಲೂಕ ಅಧಿಕಾರಿ ಗಾದಿಲಿಂಗಪ್ಪ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಸೇರಿದಂತೆ ಇತರರು ಇದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ