ಬಳ್ಳಾರಿ,13.. ನಗರದ ವಾರ್ಡ್ ಸಂಖ್ಯೆ 34ರ ವಿದ್ಯಾನಗರ 7ನೇ ಅಡ್ಡ ರಸ್ತೆಯ ಬಳಿ 81.93 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಪಾಲಿಕೆಯ ಸದಸ್ಯರು ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ, ಮಲ್ಲಿ, ಯೋಗಾನಂದ ರೆಡ್ಡಿ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ಯೋಗೇಂದ್ರ ಕಟ್ಟ, ಇಟ್ಟಾವರಂ ಮಲ್ಲಿಕಾರ್ಜುನ, ಲಾಲ್ ಮೋಹನ್, ಭತ್ರಿ ಮಂಜು, ರಘು ಕಟ್ಟ, ಹರ್ಷ, ಸತೀಶ್ ಮತ್ತಿತರರು ಹಾಜರಿದ್ದರು.
