ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಟ ಕಮಲ್‌ಹಾಸನ ಹೇಳಿಕೆಗೆ ಖಂಡನೆ
ಬೆಳಗಾವಿ:೨೮-ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲಹಾಸನ ಅವರು ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ, ಅದಕ್ಕೆ ತಲೆಬಾಗಬೇಕು ಎಂಬ ಅಸಂಬದ್ಧ ಹೇಳಿಕೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಕನ್ನಡ, ತೆಲಗು, ತಮಿಳು, ಮಲೆಯಾಳಂ, ಕೊಡವ ಮುಂತಾದ ಅನೇಕ ಭಾಷೆಗಳು ದ್ರಾವಿಡ ಭಾಷೆಯಿಂದ ಬಂದವುಗಳಾಗಿವೆ. ಅವರೇನು ಭಾಷಾತಜ್ಞರು ಅಥವಾ ಇತಿಹಾಸಕಾರರು ಅಲ್ಲ. ಅವರು ಒಬ್ಬ ನಟ ಮಾತ್ರ ಎನ್ನುವುದನ್ನು ಮರೆಯಬಾರದು. ನಟರಾಗಿ ನಿಮ್ಮ ಏಳಿಗೆಗಾಗಿ ಪೂರಕವಾಗಿ ಕನ್ನಡಿಗರ ಪರೋಕ್ಷ ಕೊಡುಗೆಯೂ ಇದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಹೇಳಿಕೆಯನ್ನು ಎಲ್ಲ ಸಮಸ್ತ ಕನ್ನಡಿಗರ ಪರವಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಲವಾಗಿ ಖಂಡಿಸುತ್ತದೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.