Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೇಮರಡ್ಡಿ ಮಲ್ಲಮ್ಮ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು|ರಂಗಭೂಮಿಗೆ ಸಾವಿಲ್ಲ ಎಂದ ಬಸವರಾಜ ಜಗಜಂಪಿ








ಬೆಳಗಾವಿ: ರಂಗಸೃಷ್ಟಿ ತಂಡದವರಿಂದ ಬೆಳಗಾವಿಯಲ್ಲಿ ನಡೆದ ಇಳೆಯ ಬೆಳಕು (ಸಾಧ್ವಿ ಹೇಮರಡ್ಡಿ ಮಲ್ಲಮ್ಮ) ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ನೋಡಿದರೆ ರಂಗಭೂಮಿಗೆ ಸಾವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಹಿರಿಯ ವಿಧ್ವಾಂಸ, ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ.


ಶನಿವಾರ ಕನ್ನಡಭವನದಲ್ಲಿ ನಡೆದ ನಾಟಕದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾಂಗಣ ಪ್ರೇಕ್ಷಕರಿಂದ ತುಂಬಿ ಹೋಗಿದ್ದಲ್ಲದೆ, ಒಳಗಿರುವವರಿಗಿಂತ ಹೆಚ್ಚು ಜನರು ಕುಳಿತುಕೊಳ್ಳಲು ಅವಕಾಶ ಸಿಗದೆ ಮರಳಿ ಹೋಗುವಂತಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ನಾಟಕ ನೋಡಲು ಬರುತ್ತಾರೆಂದರೆ ರಂಗಭೂಮಿ ಇನ್ನೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ರಂಗಸೃಷ್ಟಿ ತಂಡದ ಕಲಾವಿದರು ಈ ಹಿಂದೆ ಅಭಿನಯಿಸಿದ ನಾಟಕಗಳಿಗೂ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.  ಕಲಾವಿದರು ಬಹಳ ಶ್ರಮಪಟ್ಟು ನಾಟಕ ಕಲಿತು ಅಭಿನಯಿಸಿದ್ದಾರೆ. ಈ ರೀತಿ ಮನಃಪೂರ್ವಕವಾಗಿ ತೊಡಗಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.

ನೀರಾವರಿ ಇಲಾಖೆಯ ಪ್ರಧಾನ ಅಭಿಯಂತರ ಅಶೋಕ ವಾಸನದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರಂಗಸೃಷ್ಟಿ ತಂಡದ ಕಲಾವಿದರು ಪ್ರದರ್ಶಿಸಿದ ನಾಟಕ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆಯಿತು. ಡಾ.ರಾಮಕೃಷ್ಣ ಮರಾಠೆ ರಚಿಸಿದ ನಾಟಕವನ್ನು ಶಿರೀಶ್ ಜೋಶಿ ನಿರ್ದೇಶಿಸಿದ್ದರು. ಲಿಂಗಾಯತ ಮಹಿಳಾ ಸಮಾಜ, ನಾವು ನಮ್ಮವರೊಂದಿಗೆ ಹಾಗೂ ಕನ್ನಡ ಭವನ ಸಹಯೋಗ ಒದಗಿಸಿತ್ತು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ನಾವು ನಮ್ಮವರೊಂದಿಗೆ ಸಂಘಟನೆಯ ಸರ್ವಮಂಗಳ ಅರಳಿಮಟ್ಟಿ, ಕನ್ನಡ ಭವನದ ಯ.ರು.ಪಾಟೀಲ ಮೊದಲಾದವರು ಇದ್ದರು.

ಶಾರದಾ ಭೋಜ, ಶರಣಯ್ಯ ಮಠಪತಿ, ವಿಶ್ವನಾಥ ದೇಸಾಯಿ, ಶರಣಗೌಡ ಪಾಟೀಲ, ಶಾಂತಾ ಆಚಾರ್ಯ, ಶ್ರದ್ಧಾ ಪಾಟೀಲ, ಜಯಶ್ರೀ ಕ್ಷೀರಸಾಗರ, ರಮೇಶ ಜಂಗಲ್, ಎ.ಎಂ.ಜಯಶ್ರೀ, ಶಾಂತಾ ಜಂಗಲ್, ಶೋಭಾ ಬನಶಂಕರಿ, ಪಿ.ಜಿ.ಕೆಂಪಣ್ಣವರ್, ಶೈಲಜಾ ಭಿಂಗೆ, ಲತಾ ಅರಕೇರಿ, ಜಯಶೀಲಾ ಬ್ಯಾಕೋಡ, ಪುಷ್ಪಾ ಮರಡೂರ, ಜ್ಯೋತಿ ಬದಾಮಿ, ಗಂಗಾ ತಿಮ್ಮನಾಯ್ಕರ್, ರಮೇಶ ಮಿರ್ಜಿ, ಸುರೇಖಾ ದೇಸಾಯಿ, ಸುಕಲ್ಪ ಮಠಪತಿ, ಶೋಭಾ ನ್ಯಾಮಗೌಡರ್, ಜ್ಯೋತಿ ಸೊನ್ನದ ಪಾತ್ರ ನಿರ್ವಹಿಸಿದರು.


ಮಂಜುಳಾ ಜೋಶಿ ಹಿನ್ನೆಲೆ ಗಾಯನ, ನಾರಾಯಣ ಗಣಾಚಾರಿ ತಬಲಾ, ರಮೇಶ ಮಿರ್ಜಿ ಸಂಗೀತ ನಿರ್ವಹಣೆ, ಗುರು ಪೆಡ್ನೇಕರ್ ಬೆಳಕಿನ ವಿನ್ಯಾಸ, ಶರಣಗೌಡ ಪಾಟೀಲ ರಂಗ ಸಜ್ಜಿಕೆ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ, ರಾಜಕುಮಾರ ಕುಂಬಾರ ರಂಗ ನಿರ್ವಹಣೆ ಮಾಡಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ