Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಣ್ಣನವರ ತತ್ವಾದರ್ಶ ತಿರಸ್ಕರಿಸುವವರು ಮನುಷ್ಯತ್ವ ವಿರೋಧಿಗಳು: ಮೈತ್ರೇಯಿನಿ ಗದಿಗೆಪ್ಪಗೌಡರ



ಬೆಳಗಾವಿ: ಬಸವಣ್ಣನವರ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳನ್ನು ತಿರಸ್ಕರಿಸುವ ಮನಸ್ಥಿತಿಯ ವ್ಯಕ್ತಿ ಸಮಾಜದಲ್ಲಿ ಯಾರನ್ನೂ ಪ್ರೀತಿಸಲಾರ ಎಂದು ಮೈತ್ರೇಯಿನಿ ಗದಿಗೆಪ್ಪಗೌಡರ ಅಭಿಪ್ರಾಯಪಟ್ಟರು.

ಮಹಾಂತೇಶ ನಗರದ ಮಹಾಂತ ಭವನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ " ಬಸವ ಸಂಸ್ಕೃತಿ ಅಭಿಯಾನ - ಒಂದು ವಿಶ್ಲೇಷಣೆ "ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು,

ಸಾಹಿತಿ ಶರಣೆ ಮೈತ್ರೇಯಿನಿ ಗದಿಗೆಪ್ಪಗೌಡರ ಅವರು ಮೇಲಿನಂತೆ ಹೇಳಿದರು.  ಬಸವಾದಿ ಶರಣರ ತತ್ವ ಆದರ್ಶಗಳನ್ನು ಅಪಪ್ರಚಾರ ಮಾಡುವವರು  ಮನುಷ್ಯತ್ವದ ವಿರೋಧಿಗಳು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರ ತತ್ವ ಆದರ್ಶ ವಿಶ್ವಕ್ಕೆ ನೀಡಿದ ಒಂದು ಅಮೂಲ್ಯ ಕೊಡುಗೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ  ಬಸವರಾಜ ರೊಟ್ಟಿ ಇತ್ತೀಚಿಗೆ ಕೆಲವು ರಾಜಕಾರಣಿಗಳು ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕರ ಹೇಳಿಕೆಯನ್ನು ಕೊಡುತ್ತಿದ್ದು ದುರದೃಷ್ಟಕರ ಎಂದು ಹೇಳಿದರು. ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಅವರು ಬಸವಣ್ಣನವರು "ಲಿಂಗಾಯತ ಧರ್ಮದ ಸ್ಥಾಪನೆ ಮಾಡಿಲ್ಲ" ಅಂತಾ ಹೇಳಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾವು ಉಗ್ರವಾಗಿ ಖಂಡಿಸುತ್ತದೆ. ಎಲ್ಲಾ ಲಿಂಗಾಯತ ಒಳ ಪಂಗಡದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ " ಲಿಂಗಾಯತ " ಅಂತಾ ಬರೆಸಬೇಕು.ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಜಾತಿಯ ಹೆಸರನ್ನು ಬರೆಸಬೇಕೆಂದು ಕರೆಕೊಟ್ಟರು.

ಪಾವನ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿ ಅವರು ನಮ್ಮ ಮುಂದಿನ ಪೀಳಿಗೆಗೆ ಬಸವಾದಿ ಶರಣರ ತತ್ವಾದರ್ಶಗಳನ್ನು ಕೊಡಬೇಕಾದ ಹೊಣೆಗಾರಿಕೆ ನಮ್ಮ ತಾಯಂದಿರ ಮೇಲಿದೆ.ಇಂತಹ ಗೋಷ್ಠಿ, ಉಪನ್ಯಾಸಗಳಿಗೆ ತಮ್ಮತಮ್ಮ ಮಕ್ಕಳನ್ನು ಕರೆತರಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಪ್ರಸಾದ ದಾಹೋಹಿಗಳಾದ  ಎಸ್.ಜಿ.ಸಿದ್ನಾಳ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಸದಸ್ಯರಾದ ಶೈಲಜಾ ಭಿಂಗೆ ಇದ್ದರು.

ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಬಸವರಾಜ ರೊಟ್ಟಿ,ಅಶೋಕ ಮಳಗಲಿ,ಪ್ರವೀಣ ಚಿಕಲಿ,ಚಂದ್ರು ಬೂದಿಹಾಳ,ಮುರಿಗೆಪ್ಪ ಬಾಳಿ,ಶರಣೆ ರತ್ನಾ ಬೆಣಚಮರ್ಡಿ,ಸುಜಾತಾ ಮತ್ತಿಕಟ್ಟಿ,ಅನಿತಾ ಚಟ್ಟರ ನಯನಾ ಗಿರಿಗೌಡರ,ಕಾವೇರಿ ಕಿಲಾರಿ ಅವರನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಶೋಭಾ ಶಿವಳ್ಳಿ ಅವರು ನಿರೂಪಣೆ ಮಾಡಿದರು.ರತ್ನಾ ಬೆಣಚಮರ್ಡಿ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು.ಸುಜಾತಾ ಮತ್ತಿಕಟ್ಟಿ ಶರಣು ಸಮರ್ಪಣೆ ಮಾಡಿದರು.

ಅಶೋಕ ಮಳಗಲಿ, ಅರವಿಂದ ಪರುಶೆಟ್ಟಿ,ಎಫ್ ಆರ್ ಪಾಟೀಲ, ಈರಣ್ಣ ಚಿನಗುಡಿ,ಗಂಗಪ್ಪ ಗುರುವನ್ನನವರ,ಶಂಕರ ಶೆಟ್ಟಿ, ಮೋಹನ ಗುಂಡ್ಲೂರ,ಭಾಗ್ಶಬೆಣಚಮರ್ಡಿ,ನೇತ್ರಾ ರಾಮಾಪುರಿ,ಕೆಂಪಣ್ಣ ರಾಮಾಪುರಿ,ಕುಲಗೋಡಿ,ಚಂದ್ರಪ್ಪ ನಾವಲಗಟ್ಟಿ,ನಯನಾGBG ಗಿರಿಗೌಡರ,ಕಾವೇರಿ ಕಿಲಾರಿ,ಸದಾನಂದ ಬಶೆಟ್ಟಿ,ಬಸವರಾಜ ಮತ್ತಿಕಟ್ಟಿ,ಸುಲೋಚನಾ ವಸ್ತ್ರದ, ಹೇಮಾ ಕಾಜಗಾರ ಅಲ್ಲದೇ ವಿವಿಧ ಬಡವಣೆಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ