Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಣ್ಣ ಮನುಕುಲದ ಉದ್ಧಾರಕ, ಸಮ ಸಮಾಜದ ಹರಿಕಾರ : ಸುನಂದಾ ಎಮ್ಮಿ

ನಾಗನೂರು: ಮೃದು ಹೃದಯಿ ಬಸವಣ್ಣನವರು ಸಮಾಜದಲ್ಲಿ ತುಂಬಿರುವ ಮೂಡಾಚಾಗಳನ್ನು ಕಿತ್ತೆಸೆಯಲು ತಾವೆ ಕೆಳಗಿಳಿದು ಎನಗಿಂತ ಕಿರಿಯರಿಲ್ಲ ಎಂದು ಸಮಾಜವನ್ನು ಮೇಲೆತ್ತಿದ ಮನುಕುಲೋಧ್ಧಾರಕರು ಎಂದು ಸುನಂದಾ ಎಮ್ಮಿ ಹೇಳಿದರು.

ಶ್ರೀ ಶಿವಬಸವೇಶ್ವರ ಟ್ರಸ್ಟ್ , ಚಿನ್ನಮ್ಮ ,ಬ, ಹಿರೇಮಠ ವೃಧ್ಧಾಶ್ರಮ ದೇವರಾಜ್ ಅರಸ ಬಡಾವಣೆ ಬಸವನ ಕುಡಚಿ ಬೆಳಗಾವಿ ಆಶ್ರಮದಲ್ಲಿ  ಬುಧವಾರ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರು ಶ್ರಾವಣ ಮಾಸದ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಕಾರ್ಯಕ್ರಮದ ನಿಮಿತ್ತವಾಗಿ ಶರಣೆ ಪ್ರೇಮಾ ಪುರಾಣಿಕ ಮಠ ಮತ್ತು ಶರಣ ಡಾ, ಆನಂದ ಪುರಾಣಿಕ ಮಠ ಇವರು ಇಲ್ಲಿ ಉಪನ್ಯಾಸ ಮತ್ತು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು.

ಷಟಸ್ಥಲ ಧ್ವಜಾರೋಹಣದ ನಂತರ ಇಂದಿನ ಉಪನ್ಯಾಸವನ್ನು ಶರಣೆ ಸುನಂದಾ ಎಮ್ಮಿ ಅವರು ಅಪ್ಪ ಬಸವಣ್ಣನವರ ಸಾಮಾಜಿಕ ಕಳಕಳಿ ಕುರಿತು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಪರಿಸ್ಥಿತಿಗಳು ತುಂಬಾ ಚಿಂತಾಜನಕ ವಾಗಿದ್ದವು. ಅಸ್ಪೃಶ್ಯತೆ , ಲಿಂಗ ಭೇದ, ವೃತ್ತಿ ಭೇದ, ಮೇಲು ಕಿಳುಗಳ ತಾರತಮ್ಯವನ್ನು ಕಂಡು, ಮೃದು ಹೃದಯಿ ಬಸವಣ್ಣನವರು ಸಮಾಜದಲ್ಲಿ ತುಂಬಿರುವ ಮೂಡಾಚಾಗಳನ್ನು ಕಿತ್ತೆಸೆಯಲು ತಾವೆ ಕೆಳಗಿಳಿದು ಎನಗಿಂತ ಕಿರಿಯರಿಲ್ಲ ಎಂದು ಸಮಾಜವನ್ನು ಮೇಲೆತ್ತಿದ ಮನುಕುಲೋಧ್ಧಾರಕರು, ಅಪ್ಪನೂ ನಮ್ಮ ಮಾದಾರ ಚೆನ್ನಯ್ಯ ಬೊಪ್ಪನು ನಮ್ಮ ಡೊಹರ ಕಕ್ಕಯ್ಯನು ಎಂದು ಸಾಮರಸ್ಯ ಮೇರದವರು, ಅಂತಃಕರಣವಳ್ಳ ಬಸವಣ್ಣನವರು ಜಾತಿ ಕುಲ, ಸೂತಕಗಳ ತೊಡೆದು ಹಾಕಿ ಸರ್ವರಿಗೂ ಸಮಬಾಳು ಕೊಟ್ಟವರು ಮಹಾ ಮಾನವತಾವಾದಿ ಬಸಣ್ಣನವರಿಗೆ ಬಸವಣ್ಣವರೆ ಸಾಟಿ. ಅವರ ಹೃದಯ ಸದಾ ಸಮಾಜಕ್ಕಾಗಿ ಮಿಡಿಯುತ್ತಿತ್ತೆಂದು ಎಳೆ ಎಳೆಯಾಗಿ ವಚಗನಳ ವಿಶ್ಲೇಷಣೆ ಮಾಡುತ್ತಾ ತುಂಬಾ ಸುಂದರವಾಗಿ ಮಾತನಾಡಿದರು.

ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿದರು ಜಾಗತಿಕ ಲಿಂಗಾಯತದ ಅಧ್ಯಕ್ಷರು ಬಸವರಾಜ ರೊಟ್ಟಿ ಅವರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ಚಂದಾಗಿ ಸಾಮಾಜಿಕ ಕೆಲಸಗಳನ್ನು ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.

ಶರಣರಾದ ಅಶೋಕ್ ಮಳಗಲಿ, ಬೆಂಡಿಗೇರಿ ಅವರು ಉಪಸ್ಥಿತರಿದ್ದರು ಶರಣ ಕಟ್ಟಿಮನಿ ಅವರು ನಿರೂಪಣೆ ಮಾಡಿದರು, ಶರಣೆಯರಾದ ಶೈಲೇಜಾ ಮುನವಳ್ಳಿ ಮತ್ತು ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು, ಕಾರ್ಯದರ್ಶಿ ಶಂಕರ ಶೆಟ್ಟಿ ಹಾಗೂ ಎಲ್ಲ ಶರಣ ಶರಣೆಯರು ಆಶ್ರಮದ ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ