ಬೈಲಹೊಂಗಲ: ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಯೋಗ ದಿನದ ನಿಮಿತ್ತ ಚಿ. ಶಿವಾನಂದ - ಚಿ. ಕು. ಸೌ. ಕಾ ಗಂಗಮ್ಮ ಅವರ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಚೈತನ್ಯ ಶಾಲೆಯ ನವೋದಯ, ಆಳ್ವಾಸ್ ವಿವಿಧ ವಸತಿ ಶಾಲೆ ಪರೀಕ್ಷೆಯ ಪರಿಣಿತ ತರಬೇತುದಾರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ(ಇಂಚಲ) ಅವರು ರಚಿಸಿದ *ಬಸವಪಥ ವಿಶೇಷ ಸಂಚಿಕೆ* ಅನೇಕ ಹಿರಿಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.
ಲೇಖಕ, ಶಿಕ್ಷಕ ಶಿವಾನಂದ ಪಟ್ಟಿಹಾಳ ಮಾತನಾಡಿ ಯೋಗವು ವಿಶ್ವಕ್ಕೆ ಭಾರತದ ಅಮೂಲ್ಯ ಕೊಡುಗೆ. ಜೂನ್ ತಿಂಗಳ 21ನೇ ದಿನ ಇಡೀ ವಿಶ್ವವೇ ಯೋಗದ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ದೀರ್ಘ ಆಯುಷ್ಯ ಸುಖೀ ಜೀವನ ಹೊಂದಲಿ ಎಂಬುದು ನಮ್ಮ ದೇಶದ ಗುರಿಯಾಗಿದೆ ಎಂದು ಹೇಳುತ್ತಾ. ಶರಣರು ಕಾಯಕ ಲಿಂಗಾರ್ಚನೆ ಮೂಲಕ ಯೋಗವನ್ನು ವಚನಗಳಲ್ಲಿ ಉಲ್ಲೇಖ ಮಾಡಿರುವುದು ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಬಸವ ಸಮಿತಿ ಹಿರಿಯ ನಿರ್ದೇಶಕರಾದ ಮೋಹನ ಪಾಟೀಲ ಮಾತನಾಡಿ ನಾವು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನವೀಯತೆ, ಪ್ರೀತಿ, ಸಮಾನತೆ ಮತ್ತು ಆತ್ಮಜಾಗೃತಿಯನ್ನು ಬೆಳೆಸಬೇಕಾಗಿದೆ. ಬಸವಾದಿ ಶರಣರ ವಚನಗಳು ವಿಶ್ವಶಾಂತಿಯ ದಾರಿದೀಪಗಳಾಗಿವೆ. ವಿಶ್ವದ ಸರ್ವರಿಗೂ ವಚನ ತತ್ವ ತಲುಪಿದರೆ, ಮಾನವಕುಲ ಶಾಂತಿಯುತವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ನಾವು ಬದುಕಿನುದ್ದಕ್ಕೂ ಸನ್ನಡತೆ, ಸದ್ವಿಚಾರಗಳ ಪಾಠ ಕೇಳಿಕೊಂಡು ಅದರಂತೆ ನಡೆಯುತ್ತಾ ಹೋದರೆ ನಮ್ಮ ಬದುಕು ಸಾರ್ಥಕ ಆಗುತ್ತದೆ.ಇಂತಹ ಮದುವೆ ಸಮಾರಂಭದಲ್ಲಿ ಬಸವ ಪಥ ಪುಸ್ತಕ ಬಿಡುಗಡೆ ಖುಷಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯ ಶಿವಾನಂದ ಬೆಟಗೇರಿ, ಶಿವಾನಂದ ರುದ್ರಪ್ಪ ಹಾವಣ್ಣವರ, ಗಂಗಮ್ಮ ಶಿವಾನಂದ ಹಾವಣ್ಣವರ,ಬಿಜೆಪಿ ಹಿರಿಯ ಮುಖಂಡ ಮಲ್ಲಿಕಾರ್ಜುನ ತುಬಾಕಿ, ಚನ್ನಮ್ಮನ ಕಿತ್ತೂರು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ತುಬಾಕಿ, ರುದ್ರವ್ವ ಬಸನಾಯ್ಕ ಪಟ್ಟಿಹಾಳ, ನೇಸರಗಿ ಭಾಗದ ಯುವ ಮುಖಂಡ ಸಚಿನ ಯಲ್ಲನಗೌಡ ಪಾಟೀಲ,ಡಾ. ಪ್ರಕಾಶ ಹಳ್ಯಾಳ, ಯುವ ಮುಖಂಡ ಪ್ರದೀಪ ದೊಡ್ಡಗೌಡರ,
ರುದ್ರಪ್ಪ ಶಿ. ಹಾವಣ್ಣವರ, ಪಾರ್ವತೆವ್ವ ರು. ಹಾವಣ್ಣವರ, ನಾಗರಾಜ ಮ. ತುಬಾಕಿ ಸೇರಿದಂತೆ ಅನೇಕರು ಇದ್ದರು.