Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಷ್ಟ-ನಷ್ಟಗಳನ್ನು ಸಮನಾಗಿ ಸ್ವೀಕರಿಸಿದರೆ ಬಾಳೇ ಬಂಗಾರ - ಕೊಟ್ಟೂರು ಸ್ವಾಮೀಜಿ





ಬಳ್ಳಾರಿ26..: ಶಿವಶರಣರು ಬೋಧಿಸಿದ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಬಾಳು ಬಂಗಾರವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲವೆAದು ಬಳ್ಳಾರಿ-ಹೊಸಪೇಟೆ-ಹಾಲಕೆರೆ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ  ಸಂಸ್ಥಾನ ಮಠದ ಜಗದ್ಗುರು ಡಾ.ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.

ಜಗದ್ಗುರು ಶ್ರೀ ಕೊಟ್ಟೂರು ಸ್ವಾಮಿ ಮಠದ ಅಕ್ಕನ ಬಳಗದ ಸಹಯೋಗದಲ್ಲಿ ಇಲ್ಲಿನ ಶ್ರೀಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಸಂಪದ-೩ ರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣರು ಸಮಾಜಮುಖಿಯಾಗಿ ಎಲ್ಲ ಅನುಭವಗಳನ್ನು ವಚನಗಳ ಅಮೃತವಾಣಿಯಲ್ಲಿ ತಿಳಿಸಿದ್ದಾರೆ. ಜನರು ಶರಣರ ವಾಣಿಗಳನ್ನು ಆಲಿಸಿ ಬಾಳುವ ಕಲೆ ಕರಗತ ಮಾಡಿಕೊಳ್ಳಬೇಕು. ಬದುಕಿನಲ್ಲಿ ಬರುವ ಸಿಹಿ, ಕಹಿಗಳನ್ನು ಸಮನಾಗಿ ಹಂಚಿಕೊAಡು ಸನ್ಮಾರ್ಗದತ್ತ ಹೆಜ್ಜೆಯಿಟ್ಟಲ್ಲಿ ನೆಮ್ಮದಿ ತಾನಾಗಿಯೇ ಲಭಿಸುತ್ತದೆ ಎಂದರು.

ತೋರಣಗಲ್ಲಿನ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಡಾ.ಉಮಾ ಹೆಚ್.ಎಂ. ಅವರು `ವಚನಗಳಲ್ಲಿ ಮಹಿಳಾ ಸಬಲೀಕರಣ' ವಿಷಯವಾಗಿ ಉಪನ್ಯಾಸ ನೀಡುತ್ತ, ಶರಣರು ಕ್ರಿ.ಶ.೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಅಂದಿನ ಶರಣ ಸಾಹಿತ್ಯ ಕಾಲದಲ್ಲೇ ಮಹಿಳೆಗೆ ಸ್ವಾತಂತ್ರ‍್ಯ ದೊರಕಿಸಿಕೊಟ್ಟಿದ್ದರು. ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಇದನ್ನು ಬಸವಣ್ಣನವರೇ ಹೇಳಿದ್ದು, ಅಂದಿನ ಶರಣರೊಂದಿಗೆ ಶರಣೆಯರೂ ಸಾರಿ ಹೇಳಿದ್ದಾರೆ ಎಂದರು.

ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀವiನ್ ನಿರಂಜನ ಜಗದ್ಗುರು ಡಾ.ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನಬಳಗದ ಸಹಯೋಗದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಹೃದಯ ಸಂಬAಧಿ ಖಾಯಿಲೆಗಳು, ನರರೋಗ, ಎಲುಬು-ಕೀಲುಗಳ ತೊಂದರೆ, ಕಣ್ಣು, ಕಿಡ್ನಿಯಲ್ಲಿ ಕಲ್ಲು, ಕ್ಯಾನ್ಸರ್, ಮುಂತಾದ ಖಾಯಿಲೆಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಯಿತು.

ಸಂಗೀತ ಸೇವೆಯನ್ನು ದೊಡ್ಡಬಸವೇಶ ಗವಾಯಿಗಳು ಹಾಗೂ ಸಂಗಡಿಗರು ನಡೆಸಿಕೊಟ್ಟರು. ಬಳ್ಳಾರಿ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನಮಠದ ಅಡಿ, ಅಕ್ಕನ ಬಳಗದ ಸಹಯೋಗದೊಂದಿಗೆ ಕರ್ನಾಟಕ ಲೇಖಕಿಯರ ಸಂಘದ ಸಹಭಾಗಿತ್ವದಲ್ಲಿ ಬಳ್ಳಾರಿ ಲೇಖಕಿಯರ ಸಂಘದ ನೂತನ ಪದಗ್ರಹಣ ಸಮಾರಂಭವೂ ಜರುಗಿತು.

ಗೌರವಾಧ್ಯಕ್ಷರಾಗಿ ಡಾ. ಅಂಜನಾ ಕೃಷ್ಣಪ್ಪ, ಅಧ್ಯಕ್ಷರಾಗಿ ಮಧುಮತಿ ರಮೇಶ್ ಪಾಟೀಲ್, ಉಪಾಧ್ಯಕ್ಷರಾಗಿ ವೆಂಕಮ್ಮ, ಹಿರಿಯ ಸಲಹೆಗಾರರಾಗಿ ಸುಶೀಲಾ ಶಿರೂರು, ಕಾರ್ಯದರ್ಶಿಯಾಗಿ ಈರಮ್ಮ, ಕೋಶಾಧ್ಯಕ್ಷರಾಗಿ ಸಂಧ್ಯಾ ಶಾನ್ ಭಾಗ್, ಸಹ ಕಾರ್ಯದರ್ಶಿಯಾಗಿ ಮುಕ್ತಾ ವೇಣಿ ದೀಕ್ಷಿತ್, ಸಂಘಟನಾ ಕಾರ್ಯದರ್ಶಿಯಾಗಿ ಡಾ. ಭ್ರಮರಾಂಬಾ, ಸದಸ್ಯರಾಗಿ ಲಕ್ಷ್ಮೀ ಪವನ್ ಕುಮಾರ್, ಡಾ. ಸುಮ, ಲಲಿತಾ ಕಪ್ಪರಮಠ, ಲಕ್ಷ್ಮಿ, ಲತಾ ಏ, ಯು ನೀಲಮ್ಮ, ನೂರ್ ಜಹಾನ್, ಶಿವಲೀಲಾ ಅರವಿಂದ, ಭಾವನಾ ಹೊಟ್ಟೆಗೌಡ್ರು ಅವರು ಅಧಿಕಾರ ವಹಿಸಿಕೊಂಡರು.




ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಮಧುಮತಿ ಪಾಟೀಲ್ ನಿರ್ವಹಿಸಿದರೆ, ವಂದನಾರ್ಪಣೆಯನ್ನು ಅಕ್ಕನ ಬಳಗದ ಈರಮ್ಮ ನೆರವೇರಿಸಿದರು. ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನಬಳಗದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ