ಬಳ್ಳಾರಿ. ( ಸಿರುಗುಪ್ಪ ) ಏ. 19..: ಗ್ರಾಮೀಣ ಭಾಗದ ಜಾನಪದ ಕಲೆಗಳು ಎಂದೆಂದಿಗೂ ಜೀವಂತವಾಗಿರಲು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ, ಹಳ್ಳಿ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಎಂದರೆ ಇಂತಹ ಸಂಘ ಸಂಸ್ಥೆಗಳು ಮತ್ತು ಕಲಾವಿದರೇ ಕಾರಣರಾಗಿದ್ದಾರೆ ಹಾಗಾಗಿ ಬಯಲಾಟ ಭಜನೆ ಸಂಪ್ರದಾಯ ಗೀತೆಗಳು ಹಂತಿ ಪದಗಳು ಡೊಳ್ಳು ಕುಣಿತ ವೀರಗಾಸೆ ಇನ್ನು ಮುಂತಾದ ಕಲೆಗಳು ಉಳಿಯಲು ಸರ್ಕಾರ ಅನುದಾನವನ್ನು ನೀಡಿ ಇಂತಹ ಕಲೆಗಳನ್ನು ಪ್ರೋತ್ಸಾಹಿಸುತ್ತಿದೆ ಇದು ಸರ್ಕಾರದ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಬಲಕುಂದಿ ಗ್ರಾಮ ಪಂಚಾಯಿತಿಯ ಪಿ ಡಿ ಓ ಟಿ ಈರಣ್ಣ ಹೇಳಿದರು.
ಅವರು ತಾಲೂಕಿನ ಬಲಕುಂದಿ ಗ್ರಾಮದಲ್ಲಿ
ಶಿಲಾಬೃಂದಾ ಟ್ರಸ್ಟ್ ಸಿರುಗುಪ್ಪ (ಅರಳಿಗನೂರು ) ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಧನಸಹಾಯ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ ನಮ್ಮ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜನಪದ ಕಲಾವಿದರಾದ ಎಚ್ಎಸ್ ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಯುವಕರು ಜಾನಪದ ಮತ್ತು ಸಾಂಸ್ಕೃತಿಕ ಕಲೆಗಳ ಬಗ್ಗೆ ಆಸಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.