ಹೊಸಪೇಟೆ,ಮೇ,೩೦ : ಮುಸಲ್ಮಾನರು ದಾನ ಧರ್ಮಗಳನ್ನು ಮಾಡುವುದೇ ಬಕ್ರೀದ್?ನ ವಿಶೇಷ ಇಂದು ನಗರದಲ್ಲಿ. ಎಂದು ಅಂಜುಮನ್ ಕಮಿಟಿಯ ಮಾಜಿ ಅಧ್ಯಕ್ಷರು ಮತ್ತು ಚಿತ್ತವಾಡ್ಗಿ ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಬಕ್ರೀದ್ಹ ಹಬ್ಬವನ್ನು ಉದ್ದೇಶಿಸಿ ಮಾತನಾಡಿದರು.
ಬಕ್ರೀದ್ ಹಬ್ಬದ ಅಂಗವಾಗಿ ನಗರದ ವಿವಿಧ ಈದ್ಗಾ ಮೈದಾನ ಹಾಗೂ ಖಬರಾಸ್ತಾನ್ ಗಳಲ್ಲಿ ನಗರದ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಜನ ಒಟ್ಟಿಗೆ ಶಿಸ್ತಿನಿಂದ ಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡಿದರು.
ಮುಸ್ಲಿಂ ಧರ್ಮ ಗುರುಗಳು ಪ್ರವಚನ ನೀಡಿ ಹಬ್ಬದ ಶುಭ ಸಂದೇಶಗಳನ್ನು ನೀಡಿದರು. ಚಿತ್ತವಾಡ್ಗಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಯಲ್ಲಿ ಬಕ್ರೀದ್‌ನಲ್ಲಿ ಮುಖ್ಯವಾಗಿ ಭಗವಂತನ ಎಲ್ಲರಿಗೂ ಮಳೆ-ಬೆಳೆ ಚೆನ್ನಾಗಿ ಈ ಬಾರಿ ನೀಡಲಿ ಎಂದು ಕೋರಿದರು.
ಬಕ್ರೀದ್‌ನ ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ಕೋರಿದರು. ಚಿತ್ತವಾಡ್ಗಿಯ ಈದ್ಗಾ ಮೈದಾನದ ಪ್ರಾರ್ಥನೆಯಲ್ಲಿ ಚಿತ್ತವಾಡ್ಗಿ ಜಾಮೀಯ ಮಸೀದಿಯ ಕಾರ್ಯದರ್ಶಿ ಜಾಕೀರ್ ಹುಸೇನ್, ಜಂಟಿ ಕಾರ್ಯದರ್ಶಿ ಮಾಳಗಿ ಗೌಸ್ ಅಜಾಮ್, ಖಜಾಂಚಿಯಾದ ಚಾಂದ್ ಭಾಷ, ಸದ್ಯಸರಾದ ನಾಸೀರ್ ಅಲಿ, ಜೀಲಾನ್ ಭಾಷ, ಮನ್ಸೂರ್, ಮೆಹಬೂಬ್ ಸಾಬ್, ಮೆಹಬೂಬ್, ಮುಕ್ತಿಯಾರ್ ಹಾಗೂ ಜಾಮೀಯ ಮಸೀದಿಯ ಅಫೀಸಾಬ್ ಮೊಹಮ್ಮದ್ ಅನೀಫ್ ಹಾಗೂ ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು.
