Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ 

ಮಹಾಲಿಂಗಪುರ: ಸ್ಥಳೀಯ ಮುಸಲ್ಮಾನ ಬಾಂಧವರು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಗುರುವಾರ ಮುಂಜಾನೆ ಈದ್ಗಾ ಮೈದಾನದಲ್ಲಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಿ ದುವಾ ಬೇಡುವ ಮೂಲಕ ಆಚರಿಸಿದರು.
ಪಟ್ಟಣದ ಹಲವಾರು ಜಮಾತುಗಳ ಮುಖಂಡರು ಹಾಗೂ ಸಮುದಾಯದ ಜನರು ತಮ್ಮ ತಮ್ಮ ಭಾವುಟಗಳನ್ನು ತೆಗೆದುಕೊಂಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕವಾಗಿ ಈದ್ಗಾ ಸ್ಥಳಕ್ಕೆ ಆಗಮಿಸಿದರು.
ಮಹಾಲಿಂಗಪುರದ ದಾರೂಲ್ ಉಲೂಮ್ ಶಿಕ್ಷಣ ಸಂಸ್ಥೆಯ ಖಾರಿ ಜುಬೇರಸಾಬ ಬಕ್ರೀದ್ ಹಬ್ಬದ ವೈಶಿ? ಪೂರ್ಣ ಇತಿಹಾಸವನ್ನು ತಿಳಿಸುತ್ತ, ನಮಾಜ ಮತ್ತು ಪವಿತ್ರ ಕುತ್ಬಾ ಪಠಣ ಮಾಡಿ ನಂತರ ಕರುಣಾಮಯಿಯಾದ ಆ ದೇವರಲ್ಲಿ ಕ? ಸುಖಗಳ ಬಗ್ಗೆ ಕೋರಿಕೊಂಡರು.
ಇದರ ಮುಂಚೆ ಮೌಲಾನಾ ಝಕ್ರಿಯಾಸಾಹಬ ಮತ್ತು ನಜೀರ್ ಅತ್ತಾರ, ದಾವಲಸಾಬ ನಗಾರ್ಚಿ, ನಬಿಸಾಬ ಯಕ್ಸಂಬಿ,ಜಮೀರ್ ಯಕ್ಸಂಬಿ ಹಲವಾರು ವಿ?ಯಗಳು ಮತ್ತು ಕೇಂದ್ರ ಸರ್ಕಾರದ ಚುನಾವಣಾ ಆಯೋಗ ಹೊರಡಿಸಿರುವ ಎಸ್ ಆಯ್ ಆರ್ (ಗಣತಿ) ಬಗ್ಗೆ ಮುಸಲ್ಮಾನ ಬಾಂಧವರಲ್ಲಿ ಜಾಗೃತಿ ಮೂಡಿಸಿ,ಬರುವ ದಿನಗಳಲ್ಲಿಯೂ ಇದೆ ವಿ?ಯವಾಗಿ ತಮ್ಮೆಲ್ಲರ ಸಭೆ ಕರೆದು ತಜ್ಞರಿಂದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪೋಲೀಸ್ ಠಾಣಾಧಿಕಾರಿ ಕಿರಣ ಸತ್ತಿಗೇರಿ ಸ್ವತಃ ತಮ್ಮ ಸಿಬ್ಬಂದಿಗಳ ಜೊತೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡರು. ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪುರಸಭೆ ನೈರ್ಮಲ್ಯ ಮೇಲ್ವಿಚಾರಕ ಹಣ್ಮಂತ ಮಾಂಗ್ ಅವರನ್ನು ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಮುಸ್ಲಿಂರು ತಮ್ಮ ಪೂರ್ವಜರ ಗದ್ದುಗೆಗಳಿಗೆ ತೆರಳಿ ಅವರ ಸಲುವಾಗಿ ಶಾಂತಿ ಕೋರಿ ದುವಾ ಬೇಡಿ ತಮ್ಮ ಜೀವಿತಾವಧಿಯ ಕರ್ತವ್ಯವನ್ನು ಮೆರೆದರು.
ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಕಾರ್ಯದರ್ಶಿ ಶಮ್ಶುದ್ದೀನ್ ತೇರದಾಳ, ಮುಸ್ತಾಕ್ ಚಿಕ್ಕೋಡಿ, ನಜೀರ್ ಝಾರೆ, ಸಯ್ಯದ್ ಯಾದವಾಡ, ಮೀರಾ ತಟಗಾರ, ಸಿರಾಜ್ ಪೆಂಡಾರಿ, ಹಾಸಿಂ ಪೆಂಡಾರಿ, ನೂರ ಪೆಂಡಾರಿ, ರಫೀಕ್ ಜಂಗಿ, ಪೈಗಂಬರ್ ಪೆಂಡಾರಿ, ಮಹಮ್ಮದ್ ಪಾಂಡು, ಬಾಬು ಸನದಿ, ಉಸ್ಮಾನ್ ಪೆಂಡಾರಿ, ಬಂದೇನವಾಜ ಪಕಾಲಿ, ಬಂದೇನವಾಜ್ ಸಿಂದಗಿ, ರಸೂಲ್ ಸಾಂಗ್ಲಿಕರ, ರಫೀಕ್ ಮಾಲದಾರ, ಬಿಲಾಲ್ ನದಾಫ್, ಹಾಗೂ ಪಟ್ಟಣದ ಎಲ್ಲ ಮುಸ್ಲಿಂ ಸಮಾಜಗಳ ಜನರು ಉಪಸ್ಥಿತರಿದ್ದರು. 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ