Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯೋಗದಾ ಸತ್ಯಂಗ ಧ್ಯಾನ ಮಂಡಳಿಯಿಂದ ಬಾಬಾಜಿ ಅವರ ಸ್ಕೃತಿ ದಿವಸ ಆಚರಣೆ



ಬೆಳಗಾವಿ: ನಗರದಲ್ಲಿ ಯೋಗದಾ ಸತ್ಯಂಗ ಧ್ಯಾನ ಮಂಡಳಿಯ ವತಿಯಿಂದ ಮಹಾ ಅವತಾರ  ಬಾಬಾಜಿ ಅವರ ಸ್ಕೃತಿ ದಿವಸದ ನಿಮಿತ್ಯ ಸೋಮವಾರ ಒಂದು ದಿನ ದೀರ್ಘ ಧ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಹಸ್ರಾರು ಭಕ್ತರು ಈ ಧ್ಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದವನ್ನು ಪಡೆದುಕೊಂಡರು.ಈ ವೇಳೆ "ಬಾಬಾಜಿ ಅವರ ಹೆಸರನ್ನು ಯಾರು ಭಕ್ತಿಯಿಂದ ಉಚ್ಚರಿಸುತ್ತಾರೋ, ಅಂಥವರು ಕ್ಷಣದಲ್ಲೇ ಅವರ ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ." ಎಂದು ಶ್ರೀ ಶ್ರೀ ಲಾಹಿರಿ ಮಹಾಶಯರು ತಿಳಿಸಿದ್ದಾರೆ.

ಮಹಾನ್ಗುರು ಗಳಾದ ಶ್ರೀ ಶ್ರೀ ಲಾಹಿರಿ ಮಹಾಶಯರ ಈ ಮಹತ್ತರವಾದ ಭಕ್ತಿಯನ್ನು, ಪರಮ ಹಂಸ ಯೋಗಾನಂದರು ತಮ್ಮ 'ಯೋಗಿಯ  ಆತ್ಮಕಥೆ' (Autobiography of a Yogi) ಕೃತಿಯಲ್ಲಿಉಲ್ಲೇಖಿಸಿದ್ದಾರೆ. ಮಹಾವತಾರ ಬಾಬಾಜಿ ಅವರು ಎಲ್ಲಾ ಪ್ರಾಮಾಣಿಕ ಅನುಯಾಯಿಗಳ ಜೀವನದ ಮೇಲೆ ಅವರು ಬೀರುವ ಶುದ್ಧ, ಅತೀಂದ್ರಿಯ ಮಹತ್ವವುಳ್ಳ, ಶಾಶ್ವತ ಪ್ರಭಾವವನ್ನು ಪ್ರಬಲವಾಗಿ ವಿವರಿಸುತ್ತದೆ. ಭಕ್ತಾಧಿಗಳು ಧ್ಯಾನದಿಂದ ಸಕಲವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಶ್ರೀ ಶ್ರೀ ಲಾಹಿರಿ ಮಹಾಶಯರ ಪ್ರಮುಖ ಶಿಷ್ಯರಾದ, ಸ್ವಾಮಿ ಶ್ರೀಯುಕ್ತೇಶ್ವರ ಗಿರಿ ಅವರು  ಹೇಳಿದಂತೆ,  ಬಾಬಾಜಿ ಅವರ  ಆಧ್ಯಾತ್ಮಿಕ ಸ್ಥಿತಿಯು  ಮಾನವನ ಗ್ರಹಿಕೆಗೆ ಮೀರಿದ್ದು. ಮಹಾನ್ಗುರುಗಳ  ಪ್ರೇರಣೆ  ಮತ್ತು ಬೋಧನೆಗಳೊಂದಿಗೆ ಸಾಮಾನ್ಯ ಜನರು ತಮ್ಮನ್ನು ತಾವು ಸಮನ್ವಯಗೊಳಿಸಲು  ಪ್ರಯತ್ನಿಸಿದರೆ, ಅವರು ತಮ್ಮಆಧ್ಯಾತ್ಮಿಕ ಪಯಣದಲ್ಲಿಅಪಾರ ಪ್ರಯೋಜನ ಪಡೆಯುತ್ತಾರೆ. ಧ್ಯಾನವು ಮನುಷ್ಯನನ್ನು ಸದೃಢಗೊಳಿಸುತ್ತದೆ, ಮನಸ್ಸಿಗೆ ಸುಖ, ನೆಮ್ಮದಿ ದೊರಕುತ್ತದೆ ಎಂದು ತಿಳಿಸಿದರು.

ಉತ್ತರದಲ್ಲಿ ಹಿಮಾಯಲದ ಮಡಿಲಲ್ಲಿ ದ್ವಾರಪಟ ಎಂಬ ಸ್ಥಳದಲ್ಲಿ ಬಾಬಾಜಿಯರ ಸಾಧನೆ ಮಾಡಿದ ಗುಹೆ ಇದೆ. ಜನಸಾಮಾನ್ಯರೂ ಕೂಡ ತಮ್ಮ ಗ್ರಹಸ್ಥ ಜೀವನವನ್ನು ನಡೆಸುತ್ತ, ಮೋಕ್ಷದ ದಾರಿಯನ್ನು, ಕ್ರೀಯಾಯೋಗದ ಜಲದಿಂದ ಸಾದಿಸಬಹುದು, ಅಂತ ತೋರಿಸಲಿಕ್ಕೆ ಜನಸಾಮಾನ್ಯರ ನಡುವೆ ಇದ್ದುಕೊಂಡು ತಮ್ಮ ಗ್ರಹಸ್ಥ ಜೀವನ ನಡೆಸುತ್ತಿದ್ದ ಭಕ್ತರಾದ ಲಾಹರಿ ಮಹಾಶಯರಿಗೆ ಕ್ರೀಯಾಯೋಗವನ್ನು ಕಲಿಸಿಕೊಟ್ಟರು. ಮತ್ತು ಅದನ್ನು ಶ್ರದ್ಧೆಯುಳ್ಳ ಭಕ್ತರಿಗೆ  ಕಲಿಸಲು ಆದೇಶಿಸಿದರು. ಬೆಳಗಾವಿಯ  ಹಲವಾರು ಭಕ್ತರಿಗೆ ಈ ಪುಣ್ಯದ ದಿವಸ ಧ್ಯಾನದಲ್ಲಿ  ಕ್ರೀಯಾಯೋಗವನ್ನು ಮಾಡಿ ಪಾವನಗೊಳ್ಳಬೇಕು ಶಶಿಕಾಂತ ಚುನಮರಿ ಅವರು ಹರಸಿದರು.

ಶಶಿಕಾಂತ ಚುನಮರಿ, ಶ್ರೀನಿವಾಸ್‌ ಖೋಪರ್ಡೆ, ಮಾರನ ಬಸರಿ, ಶೈಲಜಾ ಕೋಡಿಶೆಟ್ಟಿ ಮತ್ತು ಮಂಜುಳಾ ಚುನಮರಿ ಹಾಗೂ  ಇತರರು ಇದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ