Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಅಥಣಿ - ಪುಣೆ  ಮತ್ತು ಕೊಲ್ಲಾಪುರ  ಸಾರಿಗೆ ಬಸ್ ಗಳಿಗೆ ಚಾಲನೆ"  

*ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕ್ರಮ: ಶಾಸಕ ಲಕ್ಷ್ಮಣ ಸವದಿ* 

ಅಥಣಿ: ಅಥಣಿ ಸಾರಿಗೆ ಘಟಕದಿಂದ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಕ್ಕೆ ಅಂದರೆ ಅಂತರ್ ರಾಜ್ಯ ಸಾರಿಗೆ ಬಸ್ ಸೌಕರ್ಯ ಆರಂಭಿಸಲಾಗಿದೆ. ಅಥಣಿ ನಾಗರಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
 ಅವರು ಅಥಣಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಅಥಣಿ -ಪುಣೆ ಮತ್ತು ಅಥಣಿ - ಕೊಲ್ಲಾಪುರ ನೂತನ ಸಾರಿಗೆ ಬಸ್ ಸoಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಥಣಿ ಸಾರಿಗೆ ಘಟಕದಿಂದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ, ಮಹಾನಗರಗಳಿಗೆ ಈಗಾಗಲೇ ಸಾರಿಗೆ ಸೇವೆ ಕಲ್ಪಿಸಲಾಗಿದ್ದು, ಅಥಣಿ ಗಡಿ ಭಾಗದಲ್ಲಿರುವುದರಿಂದ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ಆಂಧ್ರಪ್ರದೇಶಕ್ಕೆ ಜನರು ಅನೇಕ ವಾಣಿಜ್ಯ ವ್ಯವಹಾರಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಾರೆ. ಆದ್ದರಿಂದ ಮೊದಲ ಹಂತವಾಗಿ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಅಂತರಾಜ್ಯ ಬಸ್ ಸೇವೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಆಂಧ್ರ ಪ್ರದೇಶದ ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ಸಾರಿಗೆ ಸೇವೆಯನ್ನ ಆರಂಭಿಸಲಾಗುವುದು. ಅಥಣಿ ಘಟಕದಿಂದ ಚಿಕ್ಕೋಡಿ, ಬೆಳಗಾವಿ ಮತ್ತು ವಿಜಯಪುರಕ್ಕೆ ತಡೆರಹಿತ ವಾಹನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದು, ಆದರೆ ಅಲ್ಲಲ್ಲಿ ಗ್ರಾಮಸ್ಥರು ಮನವಿ ನೀಡಿ ನಿಲುಗಡೆಗೆ ಅವಕಾಶ ಕೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಡೆರಹಿತ ಸಾರಿಗೆ ಸೇವೆ ಆರಂಭಿಸಲಾಗುವುದು. ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ 
 " ವಿದ್ಯಾರ್ಥಿ ಸ್ನೇಹಿ " ನೂತನ ಸಾರಿಗೆ ಸೇವೆ ಆರಂಭಿಸುವ ಸಂಕಲ್ಪ ಹೊಂದಲಾಗಿದೆ. ಮುಂಬರುವ ದಿನಗಳಲ್ಲಿ ಈ ಸಾರಿಗೆ ಘಟಕಕ್ಕೆ ಇನ್ನಷ್ಟು ಹೊಸ ಬಸ್ ಗಳನ್ನು ಇಲಾಖೆಯಿಂದ ತರುವ ಮೂಲಕ ತಾಲೂಕಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. 
  ಚಿಕ್ಕೋಡಿ ವಿಭಾಗಿಯ ಸಾರಿಗೆ ನಿಯಂತ್ರಣಾಧಿಕಾರಿ ಮಹಾದೇವ ಮುಂಜೆ ಮಾತನಾಡಿ ಅಥಣಿ ಸಾರಿಗೆ ಘಟಕದಿಂದ ಆರಂಭವಾಗಿರುವ ಅಥಣಿ - ಪುಣೆ ಪ್ರತಿದಿನ ಬೆಳಿಗ್ಗೆ ಇಲ್ಲಿಂದ 7: 45 ಕ್ಕೆ ಮತ್ತು ಅಥಣಿ - ಕೊಲ್ಲಾಪುರ 7 : 00 ಗಂಟೆಗೆ ಹೊರಡಲಿದೆ. ಅಥಣಿ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 
 ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ಯಾಮ ಪೂಜಾರಿ, ವಿನಾಯಕ ಬಾಗಡಿ, ಗಿರೀಶ್ ದಿವಾನಮಳ, ಮುರುಗೇಪ್ಪ ಹಳದಮಳ, ಮಲ್ಲು ಕುಳ್ಳೋಳಿ, ಮುತ್ತುರಾಜ ಮೊಕಾಶಿ, ಶ್ರೀನಿವಾಸ ಪಟ್ಟಣ, ಆನಂದ ಮಾದಗೂಡಿ, ಅಥಣಿ ಸಾರಿಗೆ ಘಟಕದ ವ್ಯವಸ್ಥಾಪಕ ಎನ್. ಎಂ ಕೇರಿ, ಅಮಿನಸಾಬ ಚಿಂಚ್ಚಲಿ, ಮಹೇಂದ್ರ ಸಾಳವೆ,  ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನಾ ಸ್ಥಳಕ್ಕೆ ಪಟ್ಟಣ ಭೇಟಿ : ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಭರವಸೆ"ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಮಾಡಿದಲ್ಲಿ ಮಾತ್ರ ಸಾಮರಸ್ಯದ ಬದುಕು ನಡೆಸಲು ಸಾಧ್ಯವಿದೆ""ಅಥಣಿ - ಪುಣೆ  ಮತ್ತು ಕೊಲ್ಲಾಪುರ  ಸಾರಿಗೆ ಬಸ್ ಗಳಿಗೆ ಚಾಲನೆ"  ಅಥಣಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಕೇರಿ ಲಕ್ಕವ್ವ ದೇವಿಯ ಜಾತ್ರಾ ಮಹೋತ್ಸವಬಕ್ರಿ ಈದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಗಣಪತಿ ಕೊಗನೋಳಿ"ಕಳೆದುಕೊಂಡ ಮೊಬೈಲ್ ಪತ್ತೆಮಾಡಲು ಸಿಇಐಆರ್ ಪೋರ್ಟಲ್ ಸಹಕಾರಿ"ರೈತರು ಸಬ್ಸಿಡಿ  ಬೀಜ, ಗೊಬ್ಬರದ ಸದುಪಯೋಗ ಪಡೆದುಕೊಳ್ಳಿ : ಬಾಬಾಸಾಹೇಬ ಪಾಟೀಲಕೊಪ್ಪಳದಲ್ಲಿ ಮುಂದುವರಿದ ಅಕ್ರಮ ಕಲ್ಲು ಗಣಿಗಾರಿಕೆ: ಶಾಸಕ, ಸಂಸದರ ವಿರುದ್ಧ ಗಣೇಶ ಹೊರತಟ್ನಾಳ್ ಆಕ್ರೋಶಬಿಡಿಸಿಸಿಐನ ಸೇವೆ ಶ್ಲಾಘನೀಯ: ಗಾದೆಪ್ಪತ್ಯಾಜ್ಯ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರು ಪುರಸಭೆಗೆ ಸಹಕರಿಸಿ: ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮನವಿ