Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿ ಪುರಸಭೆ ವಿಶೀಷ್ಠ ಹಾಗೂ ವಿಭಿನ್ನವಾಗಿ ಅಭಿವೃದ್ದಿ ಕಾಣಲಿದೆ: ಶಾಸಕ ಸವದಿ

ಅಥಣಿ: ರಾಜ್ಯದಲ್ಲೆ ವಿಶೇಷ ಮಾದರಿಯಲ್ಲಿ ಪುರಸಭೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ವಿಭಿನ್ನವಾಗಿ ಅಭಿವೃದ್ದಿಗೆ ಮುಂದಾಗಬೇಕು. ಪಟ್ಟಣ ಸೌಂದರ್ಯಕರಣ, ನೈರ್ಮಲ್ಯ, ಹಾಗೂ ಸ್ವಚ್ಚತೆಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ಆಡಳಿತ ಮಂಡಳಿಗೆ ಹಾಗೂ ಪೌರ ಕಾರ್ಮಿಕರಿಗೆ ಶಾಸಕ ಲಕ್ಷö್ಮಣ ಸವದಿ ಮನವಿ ಮಾಡಿದರು
ಪಟ್ಟಣದ ಪುರಸಭಾ ಭವನದಲ್ಲಿ ಸೋಮವಾರ ೫೫ ಲಕ್ಷ ರೂ.ಗಳ ಪರಸಭೆ ಘನತ್ಯಾಜ್ಯ ನಿರ್ವಹನೆಗಾಗಿ ೧ ಅಟೋ ಟಿಪ್ಪರ, ೨ ಟ್ರಾö್ಯಕ್ಷರ್, ಸ್ಕೀಡ್ ಲೋಡರ ವಾಹನಗಳ ಲೋಕಾರ್ಪಣೆ ಹಾಗೂ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ೪ನೇ ಹಂತದ ಯೋಜನೆಯಡಿ ಆಯ್ಕೆಯಾದ ೨೦೬ ಹೊಲಿಗೆ ಯಂತ್ರ ಫಲಾನುಭವಿಗಳು ಹಾಗೂ ೫೩ ಜನ ಯುಪಿಎಸ್ ಬ್ಯಾಟರಿ ಫಲಾನುಭವಿಗಳಿಗೆ ಶಾಸಕ ಲಕ್ಷö್ಮಣ ಸವದಿ ಅವರು ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.
ನಂತರ ಮಾತನಾಡಿ ಶಾಸಕ ಲಕ್ಷö್ಮಣ ಸವದಿ ಅವರು ಬಡತನ ರೇಖೆಗಿಂತ ಕೆಳಗೆ ಇರುವ ಅರ್ಹ ಫಲಾನುಭವಿಗಳು ತಮ್ಮ ಜೀವನದಲ್ಲಿ ಸ್ವಾವಲಂಬನೆಯ ಬದುಕು ಬದುಕಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಹೊಲಿಗೆ ಯಂತ್ರ ಹಾಗೂ ವಿದ್ಯುತ್ ಅಭಾವ ಇದ್ದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನುವ ಉದ್ದೇಶದಿಂದ ಯುಪಿಎಸ್ ಹಾಗೂ ಬ್ಯಾಟರಿಗಳನ್ನು ನೀಡಿ ಕತ್ತಲ ಬದುಕಿನಿಂದ ಬೆಳಕಿನಡೆಗೆ ಜೀವನ ಸಾಗಿಸಲು ಸಾದ್ಯವಾಗುತ್ತದೆ. ಅಲ್ಲದೆ ಪಟ್ಟಣದ ಸೌಂದರ್ಯಕರಣ ಮಾಡಲು ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಡಿವೈಡರ್‌ಗಳ ಮದ್ಯದಲ್ಲಿ ಒಂದೇ ರೀತಿಯ ಮರದ ಸಸಿಗಳನ್ನು ನೇಡುವ ಮೂಲಕ ಸುಂದರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಒಂದು ವರ್ಷದ ಅವಧಿಯಲ್ಲಿ ೨೫ ಸಾವಿರ ಸಸಿಗಳನ್ನು ನೇಟ್ಟು ಅವುಗಳ ನಿರ್ವಹಣೆಗೆ ಅದ್ಯತೆ ನೀಡುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು
ಬಾಕ್ಷ೧: ಪರಸಭೆ ಸದಸ್ಯ ದತ್ತಾ ವಾಸ್ಟರ ಸ್ವಂತ ಖರ್ಚಿನಲ್ಲಿ ಸತ್ತಿ ರಸ್ತೆಯ ಸಾಯಿ ಮಂದಿರ ಬಳಿ ಒಂದು ಹಾಗೂ ಹಲ್ಯಾಳ ಸರ್ಕಲ್ ಬಳಿ ಒಂದು ಒಟ್ಟು ಎರಡು ಬಸ್ ನಿಲ್ದಾಣಗಳನ್ನು ೧೦ ಲಕ್ಷ ರೂ.ಗಳ ವ್ಯಚ್ಚದಲ್ಲಿ ನಿರ್ಮಿಸುವ ಕಾರ್ಯವನ್ನು ಮಾಡುವ ವಾಗ್ದಾನ ಮಾಡುತ್ತೇನೆ. ಅಲ್ಲದೆ ಹಲ್ಯಾಳ ಸರ್ಕನಿಂದ ಸಿದ್ದೇಶ್ವರ ದೇವಸ್ಥಾನದ ವರೆಗೆ ರಸ್ತೆ ಡಿವೈಡರ್‌ಗಳ ಮದ್ಯ ೫೦೦ ಮರದ ಸಸಿಗಳನ್ನು ನೇಟ್ಟು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿದರು
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಂಕAಚಿ, ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ, ಸದಸ್ಯರಾದ ದತ್ತಾ ವಾಸ್ಟರ, ಸಂತೋಷ ಸಾವಡಕರ, ರಾಜೂ ಗುಡೋಡಗಿ, ರಿಜಾಜ ಸನದಿ, ಮಲ್ಲು ಹುದ್ದಾರ, ಉದಯ ಸೋಳಶಿ, ಮಲ್ಲಿಕಾರ್ಜುನ ಬುಟಾಳೆ, ಪ್ರಮೋದ ಬಿಳ್ಳೂರ, ಬಸವರಾಜ ನಾಯಿಕ, ಬಿ ಎಮ್ ಪಾಟೀಲ, ಶಾಂತಾ ಲೋಣಾರೆ, ಮೃಣಾಲಿನಿ ದೇಶಪಾಂಡೆ, ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ ಹಾಗೂ ಮುಖಂಡರಾದ ರವಿ ಬಡಕಂಬಿ, ಆಶೀಫ್ ತಾಂಬೋಳಿ, ಮಹಾಂತೇಶ ಬಾಡಗಿ, ಬಾಬು ಖೇಮಲಾಪೂರ, ಪರಸಭೆ ಮುಖ್ಯಾದಿಕಾರಿ ಅಶೋಕ ಗುಡಿಮನಿ ಸೇರಿದಂತೆ ಹಲವು ಮುಖಂಡರು ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ