Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲೆಗಳಿಂದೆ ... ನಮ್ಮ ಸಂಸ್ಕೃತಿಯನ್ನು ಉಳಿಸೋಣ... ಡಾ. ರಾಜು ಜಡಾರ್

 
ಬಳ್ಳಾರಿ,.27:... ಕಲೆಗಳ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕು... ಆಗಲೇ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾದ್ಯ ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಸಚಿವರು ಡಾ. ರಾಜು ಜಡಾರ್ ತಿಳಿಸಿದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರ ದೊಂದಿಗೆ ಸೋಮವಾರ ರಾತ್ರಿ ಹೊಂಗಿರಣ ರಂಗ ಮಂದಿರದಲ್ಲಿ ಹಮ್ಮಿಕೊಂಡ ತುಂಗಾ ಅಧಿಕಮಾಸ ಸಾಂಸ್ಕ್ರತಿಕ ವೈಭವ 2026 ಕಾರ್ಯಕ್ರಮವನ್ನು ವಾದ್ಯಬಾರಿಸಿ ಉದ್ಗಾಟಿಸಿ ಮಾತನಾಡಿದರು. ನಮ್ಮ ದೇಶ, ನಾಡಿನ ಕಲೆಗಳು.. ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮೆಲ್ಲರದು ಎಂದು ಅವರು ಅಭಿಪ್ರಾಯಪಟ್ಟರು. ಹಿರಿಯ ರಂಗ ಕಲಾವಿದ ಎಂ.ರಾಮಂಜಿನೆಯುಲು ಕಳೆಗಳ ಉಳಿವಿಗೆ ಉದಯೋನ್ಮುಖ ಕಲಾವಿದರನ್ನು ಬೆಳಿಸಲು ಈ ಸಂಸ್ಥೆ ಮಾಡುತ್ತಿರುವ ಸೇವೆಯನ್ನೂ ಸ್ಮರಿಸಿದರು. ಕರ್ಣಾಟಕ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಅಧ್ಯಕ್ಷರು ರವಿ ಚೆಳಗುರ್ಕಿ ಮಾತನಾಡಿ ಕಳಾದ ಹನ್ನೆರಡು ವರ್ಷದಿಂದ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಲೆಗಳಿಗೆ, ಕಲಾ ಪ್ರದರ್ಶನಕ್ಕೆ ನೀಡುತ್ತಿರುವ ಪ್ರೋತ್ಸಾಹ  ಅಭಿನಂದ ನೀಯವೆಂದರು. ಕಲೆಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಇದೆ ಎಂದು ಹವ್ಯಾಸಿ ಕಲಾವಿದರ ಒಕ್ಕೂಟ ಜಿಲ್ಲಾ ಸಂಚಾಲಕರು ಜಿ. ಎಂ.ಚಂದ್ರಶೇಖರಯ್ಯ ಸ್ವಾಮಿ ಅವರು ನುಡಿದರು. ಅತಿಥಿ ಮಾನ್ಯರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿದರು.  ಅನಂತರ ಶ್ರೀಜ. ಜೆ ತಂಡ ದಿಂದ ಪ್ರದರ್ಶಿಸಿದ ಸಮೂಹ ನೃತ್ಯ, ನಾಗರಾಜು ಅಮರಪುರ ತಂಡ ದಿಂದ ಯಾರಿಗೆ ಬೇಕು ನಿನ್ನ ಕವಿತೆ ಹಾಸ್ಯ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನೇತ್ರಾವತಿ, ರವಿ, ಟಿ.ಶ್ರೀನಿವಾಸ್, ಕನೆಕಲ್ ಶ್ರೀಧರ,  ಶಿವರುದ್ರಯ್ಯ ಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಕುಪ್ಪಗಲ್ ವೀರೇಶ್, ಉಪನ್ಯಾಸಕರಾದ ಮಂಜುನಾಥ್, ಕಲಾವಿದ ಸುಬ್ಬಣ್ಣ, ಆದೋನಿ ವೀಣ,ಶೇಷರೆಡ್ಡಿ, ವೀರೇಶ, ಗುರುಸ್ವಾಮಿ, ಪಂಪಾಪತಿ, ಹುಸೇನಸಾಬ, ಬಸವರಾಜ್ ಸ್ವಾಮಿ, ವೆಂಕಟೇಶಲು, ಮುಂತಾದವರು ಇದ್ದರು. ರಂಗ ಕಲಾವಿದ ನಾಗಭೂಷಣ್ ನಿರೂಪಿಸಿದರು. ನಾಗರಾಜ್ ಗೌಡ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ