Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲಾವಿದರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಾಶಾಸನ ದೊರಕಲಿ: ಸುಭಾಷ ನಾಯಿಕ

ಹುಕ್ಕೇರಿ.ಜಾನಪದ ಕಲಾವಿದರಿಗೆ ರಾಜ್ಯ ಸರ್ಕಾರದ ಮಾಶಾಸನ ಜೋತೆಗೆ ಕೇಂದ್ರ ಸರ್ಕಾರದ ಮಾಶಾಸನ ಲಭಿಸಬೇಕು ಎಂದು ಕನ್ನಡ ಜಾನಪದ ಪರಿಷತ್ತ ಹುಕ್ಕೇರಿ ಘಟಕದ ಅದ್ಯಕ್ಷ ಸುಭಾಷ ನಾಯಿಕ ಹೇಳಿದರು.
ಹುಕ್ಕೇರಿ ತಾಲೂಕಿನ ಸನ್ನಾಟ ಕಲಾವಿದ ಮತ್ತು ಕರ್ನಾಟಕ ಜಾನಪದ ಅಕ್ಯಾಡೆಮಿ ಸದಸ್ಯ ಭಿಮಪ್ಪಾ ಹುದ್ದಾರ ಇವರಿಗೆ
ಏಷಿಯಾ ಅಂತರಾಷ್ಟ್ರೀಯ ಸಂಸ್ಕ್ರತ ಸಂಶೋಧನಾ ವಿಶ್ವವಿದ್ಯಾಲಯ ಚೆನೈ ಇವರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಕನ್ನಡ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಾನಪದ ಕಲಾವಿದ ಗೌರವ ಡಾಕ್ಟರೇಟ್ ಪದವಿ ಪಡೆದ ಭೀಮಪ್ಪಾ ಹುದ್ದಾರ ಇವರಿಗೆ ಸನ್ಮಾನ ಜರುಗಿಸಿ ಅಭಿನಂದಿಸಿದರು.
ಶ್ರೀ ಗಳು ಮಾತನಾಡಿ ಇತ್ತಿಚಿಗೆ ಜಾನಪದ ಕಲೆಗಳೊಂದಿಗೆ ಸನ್ನಾಟಗಳು ನಶಿಸಿ ಹೋಗುತ್ತಿವೆ ಅಂತಹ ಪರಿಸ್ಥಿತಿ ಯಲ್ಲಿ ಕಲಾವಿದ ಭೀಮಪ್ಪಾ ಹುದ್ದಾರ ಇವರ೮ಗೆ ಸನ್ನಾಟ ಕಲೆಗೆ ಗೌರವ ಡಾಕ್ಟರೇಟ್ ಪದವಿ ಲಭೀಸಿದ್ದು ಅವರಿಗೆ ಹುಕ್ಕೇರಿ ಕನ್ನಡ ಜಾನಪದ ಪರಿಷತ್ ವತಿಯಿಂದ ಗೌರವ ಸಲ್ಲಿಸುತ್ತಿರುವ ಸಂಗತಿಯಿಂದ ರಾಜ್ಯಾದ್ಯಕ್ಷ ಬಾಲಾಜಿ ಯವರಿಗೆ ಮತ್ತು ನಮಗೆ ಖುಷಿ ತಂದಿದೆ ಎಂದರು.
ವೇದಿಕೆ ಮೇಲೆ ಹುಕ್ಕೇರಿ ಕನ್ನಡ ಜಾನಪದ ಪರಿಷತ್ ಅದ್ಯಕ್ಷ ಸುಭಾಷ ನಾಯಿಕ, ಗುತ್ತಿಗೆದಾರ ಮಲ್ಲಪ್ಪಾ ಬೀಸಿರೊಟ್ಟಿ, ಎಚ್ ಎಲ್ ಪೂಜಾರ, ಶ್ರೀಮತಿ ಲೀಲಾ ರಜಪೂತ, ವೀಣಾ ಬಾಳಿಕಾಯ, ಆರುಂಧತಿ ಶಿರಗೆ, ಕುಮಾರ ಬಡಿಗೇರ, ಸುಭಾಷ ಬಸ್ತವಾಡ, ರಾಜು ಬಾಗಲಕೋಟಿ, ಪರಗೌಡ ಪಾಟೀಲ, ಹಾಲಪ್ಪಾ ಗಾವಡಿ, ಆನಂದ ಜೀರಲಿ ಉಪಸ್ಥಿತರಿದ್ದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾಕ್ಟರ ಭೀಮಪ್ಪಾ ಹುದ್ದಾರ  ಹುಕ್ಕೇರಿ ತಾಲೂಕಿನ ಜನತೆಯ ಆಶಿರ್ವಾದ ಮತ್ತು  ಹಿರಿಯ ಕಲಾವಿದರ ಮಾರ್ಗದರ್ಶನದಿಂದ  ಇಂದು ನನಗೆ ಪ್ರಶಸ್ತಗಳು ಲಭೀಸಿವೆ ಇದಕ್ಕೆ ಕಾರಣರಾದ ಕನ್ನಡ ಜಾನಪದ ಪರಿಷತ್ತಿನ ಸದಸ್ಯರಿಗೆ ಆಭಾರಿಯಾಗಿದ್ದೆನೆ ಎಂದರು.
ನಂತರ ವಿವಿಧ ಕಲಾ ತಂಡಗಳು ಹಾಗೂ ಸಂಘ ಸಂಸ್ಥೆಗಳಿಂದ ಹುದ್ದಾರವರಿಗೆ ಗೌರವ ಸತ್ಕಾರ ಜರುಗಿತು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸುಭಾಷ ನಾಯಿಕ ಜಾನಪದ ಕಲಾವಿದರಿಗೆ ಕರ್ನಾಟಕ ಸರ್ಕಾರ ನೀಡುವ ಮಾಶಾಸನ ಅಲ್ಪ ಮಟ್ಟದ್ದಾಗಿದೆ ಕಾರಣ ಕೇಂದ್ರ ಸರ್ಕಾರ ಸಹ ಮಾಶಾಸನ ನೀಡಬೇಕು ಎಂದು ನಮ್ಮ ಪರಿಷತ್ ವತಿಯಿಂದ ಆಗ್ರಹ ಮಾಡಲಾಗುತ್ತಿದೆ, ಈ ವೇದಿಕೆ ಮುಖಾಂತರ ಗ್ರಾಮಿಣ ಭಾಗದ ಕಲಾವಿದರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಾಶಾಸನ ಲಭಿಸಿದರೆ ವೃದ್ಧಾಪ್ಯ ಜೀವನದಲ್ಲಿ ಸಹಕಾರಿಯಾಗುತ್ತದೆ ಎಂದು ಆಗ್ರಹಿಸಿದರು. 
ಈ ಸಂಧರ್ಭದಲ್ಲಿ ಕಲಾವಿದರಾದ ಲಕ್ಷ್ಮಿ ಅರಭಾಂವಿ, ಸಿದ್ರಾಮ ನಾಯಿಕ, ಅಶೋಕ ಚವಲಗಿ, ಬಸಗೌಡ ಪಾಟೀಲ, ವಸಂತ  ಖುಬಾನಗೋಳ ಸೇರಿದಂತೆ ಸಾವಿರಾರು ಜನ ಕಲಾಪ್ರೇಮಿಗಳು  ಹಾಜರಿದ್ದರು.
ನಂತರ ತಡರಾತ್ರಿವರೆಗೂ ರಾಧಾನಾಟ ಸನ್ನಾಟ ಜರುಗಿತು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಗಜೇವಣಿ ಗ್ರಾಮದ ಕೆರೆಗೆ ಅಳವಡಿಸಲಾದ ಪೈಪಲೈನ್ ತೆರವುಗೊಳಿಸುವಂತೆ ಮನವಿ ಸಿದ್ಧಾರ್ಥ ನಗರದ ಜನರ ಸಮಸ್ಯೆ ಆಲಿಸಿ, ಕ್ರಮಕ್ಕೆ ಸೂಚಿಸಿದ ಶಾಸಕ ನಾರಾ ಭರತ್ ರೆಡ್ಡಿಒಂದು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ  ಅರ್ಜಿ ಅಹ್ವಾನಉಚಿತ ಬೇಸಿಗೆ ಶಿಬಿರಕ್ಕೆ ಡಿಸಿ ಸಂಗಪ್ಪ ಚಾಲನೆಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಹುಬ್ಬಳ್ಳಿಯಲ್ಲಿ ಮೇ 16, 17 ರಂದು 12ನೇ 'ಮೇ ಸಾಹಿತ್ಯ ಮೇಳ': ಅಲ್ಲಮಪ್ರಭು ಬೆಟ್ಟದೂರುವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಮೇ 31ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಮಾವಿನ ಮೇಳಕ್ಕೆ 10 ವರ್ಷ; ಹಲವು ವಿಶೇಷಪ್ರಧಾನಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ: ಭೂಮರಡ್ಡಿ