Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲೇಖನ: ತಂಬೂರಿ ಜನಪದ ಗಾಯಕರು ಮಹದೇವ ಪೂರಿಗಾಲಿ

ಜನಪದ ಪ್ರಕಾರಗಳಲ್ಲಿ ವಿಭಿನ್ನ ಶೈಲಿಯ ಕಲೆ ಎನಿಸಿಕೊಂಡಿರುವ ತಂಬೂರಿ ಜನಪದ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾವಿದರಲ್ಲಿ ಮಹದೇವ ಪೂರಿಗಾಲಿ ಕೂಡ ಒಬ್ಬರು. ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯಾಶೀಲರಾಗಿರುವ ಮಳವಳ್ಳಿಯ ಪಿ.ನಾಗರತ್ನಮ್ಮನವರು ಇವರನ್ನು ನನಗೆ ಪರಿಚಯಿಸಿ ಇವರು ಈ ಭಾಗದಲ್ಲಿ ಹೆಸರು ಮಾಡಿರುವ ಜನಪದ ಕಲಾವಿದರು ಎಂದು ತಿಳಿಸಿದರು.

ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿ ಪೂರಿಗಾಲಿ ಗ್ರಾಮದ ತಮ್ಮಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಸುಪುತ್ರರಾದ ಮಹದೇವ ದಿನಾಂಕ ೧-೧-೧೯೭೮ರಂದು ಜನಿಸಿದರು. ಇವರ ತಂದೆ ತಮ್ಮಣ್ಣಯ್ಯನವರು, ಪೂರಿಗಾಲಿ ಬೊಮ್ಮೇಗೌಡರು ಮತ್ತು ಹುಲ್ಲಂಬಳ್ಳಿ ಮಹದೇವಪ್ಪನವರಿಂದ ತಮ್ಮ ನಾಲ್ಕನೇ ವಯಸ್ಸಿನಲ್ಲೇ ಜನಪದ ಕಲೆಯನ್ನು ಒಲಿಸಿಕೊಳ್ಳಲು ಹೊರಟು ಓದು ನಾಲ್ಕನೇ ತರಗತಿಗೆ ನಿಂತು ಸುಮಾರು ೪೦ ವರ್ಷಗಳಿಂದ ನಾಡಿನಾದ್ಯಂತ ಜನಪದ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.



ಆಕಾಶವಾಣಿ, ದೂರದರ್ಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು, ಕಪ್ಪಡಿ ಚಿಕ್ಕಲ್ಲೂರು, ಬೊಪ್ಪೇಗೌಡನಪುರ, ಚಾಮರಾಜನಗರ, ಮಹದೇಶ್ವರ ಬೆಟ್ಟದ ದೇವಸ್ಥಾನಗಳಲ್ಲಿ ಕಾರ್ಯಕ್ರಮ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಇವರು ಹಾಡುವ ಜನಪದ ಮಹಾಕಾವ್ಯಗಳು ಮಲೆ ಮಹದೇಶ್ವರ ಕಾವ್ಯ, ಶಂಕಮ್ಮನ ಕಥೆ, ಮಂಟೇಸ್ವಾಮಿ ಸಿದ್ದಪ್ಪಾಜಿ ಕಥೆ, ಮೈದಾಳ ರಾಮನ ಕಥೆ, ಬಿಳಿಗಿರಿ ರಂಗನಾಥಸ್ವಾಮಿ ಕಥೆ, ನಂಜುಂಡೇಶ್ವರ ಕಥೆ, ಚಾಮುಂಡೇಶ್ವರಿ ಕಥೆ, ಅರ್ಜುನ ಜೋಗಿ ಕಥೆ, ಬಾಲನಾಗಮ್ಮ ಕಥೆ, ಚೆನ್ನಿಗರಾಮನ ಕಥೆ, ಬಸವಣ್ಣನ ಕಥೆ, ನಿಂಗರಾಜಮ್ಮನ ಕಥೆ, ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಕಥೆ. ಕಲೆಯ ಪ್ರದರ್ಶನ ಮಾತ್ರವಲ್ಲದೆ ಕಲೆಯ ಉಳಿವಿಕೆಗಾಗಿ ಗುರುಶಿಷ್ಯ ಪರಂಪರೆಯ ಯೋಜನೆಯಡಿ ಮಂಟೇಸ್ವಾಮಿ ಪ್ರತಿಷ್ಠಾನದ ಅಡಿಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಥೆ ಕಲಿಸಿದ್ದಾರೆ.

ಮೈಸೂರು ಕಲಾ ಮಂದಿರ, ಬೆಂಗಳೂರು ರವೀಂದ್ರ ಕಲಾಕ್ಷೇತ್ರ, ಹಂಪಿ ವಿಶ್ವವಿದ್ಯಾಲಯ, ಬಿಳಿಗಿರಿ ರಂಗನಾಥಸ್ವಾಮಿ, ಆದಿಚುಂಚನಗಿರಿ ಜಾತ್ರಗಳಲ್ಲಿ ರಂಗವಾಹಿನಿ ಚಾಮರಾಜನಗರ, ಜಾನಪದ ಲೋಕ, ನೀಲಗಾರ ಸಮ್ಮೇಳನ ಕೂಡ್ಲೂರು, ಮಂಟೇಸ್ವಾಮಿ ಪ್ರತಿಷ್ಠಾನ ಮೈಸೂರು ಇವರು ಭಾಗವಹಿಸಿರುವ ಇನ್ನಿತರೆ ಕಾರ್ಯಕ್ರಮಗಳು. ಇವರ ಕಲಾ ಸೇವೆಗೆ ಶ್ರೀ ಮಂಟೇಸ್ವಾಮಿ ಮಠ ಕಪ್ಪಡಿ ಜಾತ್ರೆ-೨೦೨೨ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಗಿದೆ.

ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕನ್ನಡ ಸಂಸ್ಕೃತಿ ಇಲಾಖೆ ಗೀತಗಾಯನ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾ ಸಾಂಸ್ಕೃತಿಕ ಟ್ರಸ್ಟ್ ಮೈಸೂರು ರಾಜ್ಯಮಟ್ಟದ ಕರುನಾಡ ರತ್ನ ಪ್ರಶಸ್ತಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ನೀಲಗಾರ ಪ್ರಶಸ್ತಿ, ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಂಗಗೀತೆ ಪ್ರಶಸ್ತಿ, ವೈರಮುಡಿ ಬ್ರಹ್ಮೋತ್ಸವ, ಮಂಡ್ಯ ಜಿಲ್ಲಾ ಕಲಾವಿದರ ಸಮ್ಮೇಳನ, ನನ್ನವ್ವ ಸಾಂಸ್ಕೃತಿಕ ಉತ್ಸವ, ಮೈಸೂರು ದಸರಾ ಮಹೋತ್ಸವ-೨೦೨೨ ಮೈಸೂರು ವಿಶ್ವವಿದ್ಯಾನಿಲಯ ಕಲಾ ಪ್ರಶಸ್ತಿ ಹೀಗೆ ಪಟ್ಟಿ ಸಾಕಷ್ಟಿದೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ