ಬಳ್ಳಾರಿ,ಮೇ.21: ಕಲೆ ಮತ್ತು ಕಲಾವಿದರ ಸಮ್ಮಿಲನವೇ ಕಲಾ ಸಂಭ್ರಮ ಎಂದು ರಂಗಭೂಮಿ ಕಲಾವಿದರು ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಬಿ.ವೀಣಾಕುಮಾರಿ ಅಭಿಪ್ರಾಯಪಟ್ಟರು.
ಪಾರ್ವತಿ ನಗರದ ಶ್ರೀಅನಾದಿಲಿಂಗೇಶ್ವರ ದೇವಸ್ಥಾನ ಆವರಣ ವೇದಿಕೆಯಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಮಾನ್ಯಯೋಜನೆಯಡಿ ಹಮ್ಮಿಕೊಂಡಿದ್ದ ಸರಿಗಮ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಇಂತಹ ಸಂಭ್ರಮ ಕಾರ್ಯಕ್ರಮಗಳ ಆಯೋಜನೆಗೆ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಅನೇಕ ಕಲಾವಿದರನ್ನು ಗುರುತಿಸಿ ಸಂಘ ಸಂಸ್ಥೆಗಳಿಗೆ ಸಹಕಾರ ಕೊಟ್ಟಾಗಲೆ ಕಲೆ ಉಳಿಯಲು ಸಾಧ್ಯ. ಅದನ್ನು ಇಲಾಖೆ ಮಾಡುತ್ತಿದೆ ಎಂದರು.
ಕೆ.ಎಂ.ಸಿದ್ದಲಿAಗಯ್ಯ ಮಾತನಾಡಿ, ಸಂಗೀತ ಪಾಠಶಾಲೆಯಲ್ಲಿ ನಿರಂತರ ತರಬೇತಿ ಪಡೆದ ಮಕ್ಕಳೇ ಮುಂದಿನ ವಿದ್ವಾಂಸರಾಗಿ ರೂಪಿಸಲು ಸಾಧ್ಯ ಈ ಪಾಠಶಾಲೆ ಆ ಕೆಲಸ ಮಾಡುತ್ತಿದೆ ಎಂದರು.
ಸಾಹಿತಿ ಎನ್. ಡಿ. ವೆಂಕಮ್ಮ ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರ ಪಾಠಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಂದ ಸಾದ್ಯ. ಅವರು ನಾಡುಕಟ್ಟುವ ನಾಯಕರಾಗಲಿ. ಉತ್ತಮ ಸಂಗೀತಗಾರರಾಗಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ನಿರಂತರ ಕಾರ್ಯಚಟುವಟಿಕೆ
ಗಮನಿಸಿ ಸರಕಾರ ಮತ್ತು ಇಲಾಖೆ ಧನಸಹಾಯ ನೀಡಿದೆ.ಗ್ರಾಮಿಣ ಭಾಗದಲ್ಲಿ ಧಾರ್ಮಿಕ ದೇವಸ್ಥಾನಗಳಲ್ಲಿ ನಗರ ಪಟ್ಟಣಗಳಲ್ಲಿ ಕಲಾವಿದರ ಒಗ್ಗೂಡಿಸಿ ಕಲಾ
ಸಮುದಾಯವನ್ನ ಪ್ರೋತ್ಸಾಹಿ ಉಳಿಸಿ ಬೆಳಸುವುದೇ ಸರಕಾರ ಮತ್ತು ಇಲಾಖೆಯ ಕೆಲಸವಾದ್ದರಿಂದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಕಲಚೇತನ ಕಲಾವಿದರು ಸ್ತ್ರೀ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಕೊಟ್ಟಿರುವದರಿಂದ ಸಂತಸವಾಗಿದೆ ಎಂದರು. ಅನೇಕ ಟ್ರಸ್ಟ್ ಸಂಘ ಸಂಸ್ಥೆಗಳ ಗುರುತಿಸಿ ಪ್ರೋತ್ಸಾಹಧನ ನ ನೀಡುತ್ತಿದೆ ಇದನ್ನು ಸದ್ಬಳಿಕೆಯಾಗಬೇಕೆಂದರು.
ಸುಶೀಲ ಶಿರೂರು, ನಿವೃತ್ತ ಉಪನ್ಯಾಸಕ ಎನ್ ಬಸವರಾಜ್ ಮಾತನಾಡಿದರು. ಹೆಚ್ ಪಾಂಡು ರಂಗಪ್ಪ ಬಯಲಾಟ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು.
ಎನ್ ಮಾಧವಿ ತೋರಣಗಲ್ಲು ಇವರಿಂದ ಸುಗಮ ಸಂಗೀತ, ಡಿ. ಪ್ರವಳಿಕ ಮತ್ತು ತಂಡ ಬಳ್ಳಾರಿ ಇವರಿಂದ ಸಮೂಹ ನೃತ್ಯ, ಬೆಳಗಲ್ ರೇಖಾ ಇವರಿಂದ ಹಿಂದುಸ್ಥಾನಿ ಸಂಗೀತ, ಸರಸ್ವತಿ ಬಳ್ಳಾರಿ ಇವರಿಂದ ಭಾವಗೀತೆ, ಹೆಚ್. ತಿಪ್ಪೇಸ್ವಾಮಿ ಇವರಿಂದ ಬಯಲಾಟದ ರಂಗಗೀತೆ ಕಾರ್ಯಕ್ರಮ ನಡೆಯಿತು.
ಎನ್ ಸುಮಂಗಲ ತಂಡ ಮಾದಿಹಳ್ಳಿ ಹರಪನಹಳ್ಳಿ ತಾಲೂಕು ಇವರಿಂದ ಕಲ್ಯಾಣ ಕ್ರಂತಿ ನಾಟಕ ಪ್ರದರ್ಶನ ನಡೆಯಿತು.
ಪುಟ್ಟರಾಜ ಕ್ಯಾಷಿಯೋ ವಾದನ ಕೆ. ಜಿ ಶಿವಕುಮಾರ ಮತ್ತು ಪಂಚಾಕ್ಷರಿ ಹಾರ್ಮೋನಿಯಂ ಸುಧಾಕರ ಬಂಡಿಹಟ್ಟಿ ಇವರು ತಬಲಸಾತ್ ನೀಡಿದರು. ಟ್ರಸ್ಟ್ ಅಧ್ಯಕ್ಷೆ ಕವಿತಾ ಕಗ್ಗಲ್ಲು ಸ್ವಾಗತಿಸಿದರು.
