ರನ್ನ ಬೆಳಗಲಿ: ಜು.೦೫., ಪಟ್ಟಣದ ಪಂಚಾಯತ್ ವಸತಿ ಹಾಗೂ ನಿವೇಶನ ರಹಿತರಿಗೆ ಅರ್ಜಿ ಆಹ್ವಾನಿಸಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮ ಸೂಚನೆಯಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)-೨.೦ ಅಡಿಯಲ್ಲಿ ಬೆಳಗಲಿ ಪಟ್ಟಣದ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವ ಸಲುವಾಗಿ ವಸತಿ ರಹಿತ ಹಾಗೂ ನಿವೇಶನ ರಹಿತರ ಸಮೀಕ್ಷೆಗೆ ಅರ್ಜಿ ಸಲ್ಲಿಸಲು ಜೂನ್ ೩೦ ರವರೆಗೆ ಕಾಲಾವಕಾಶ ನೀಡಿದೆ. ಈ ಯೋಜನೆಯಡಿ ಇದುವರೆಗೆ ಯಾವುದೇ ವಸತಿ ಯೋಜನೆಯಡಿ ಸೌಲಭ್ಯ ಪಡೆಯದೆ ಇರುವ ವಸತಿ ರಹಿತರು (ನಿವೇಶನ/ಹಳೆಯ ಕಚ್ಚಾ ಮನೆ ಹೊಂದಿರುವವರು) ಹಾಗೂ ನಿವೇಶನ ರಹಿತ ಮಹಿಳೆಯರು,ಹಿರಿಯ ನಾಗರೀಕರು, ವಿಧುರರು, ವಿಶೇಷ ಚೇತನರು ಹಾಗೂ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರು ಆಧಾರ ಕಾರ್ಡ್, ರೇಶನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ಕುಟುಂಬ ಸದಸ್ಯರ ಆಧಾರ ಕಾರ್ಡ್, ನಿವೇಶನ/ಹಳೆಯ ಕಚ್ಚಾ ಮನೆ ದಾಖಲೆಗಳೊಂದಿಗೆ hಣಣಠಿs://ಠಿmಚಿಥಿ.uಡಿbಚಿಟಿ.gov.iಟಿ ದಲ್ಲಿ ಸ್ವಂತವಾಗಿ/ಗ್ರಾಹಕ ಸೇವಾ ಕೇಂದ್ರಗಳಲ್ಲಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆನಲೈನ್ ಮೂಲಕ ಜೂನ್ ೩೦ ವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ ಕಛೇರಿಯ ವಸತಿ ಶಾಖೆಯನ್ನು ಸಂಪರ್ಕಿಸಲು ಮಾನ್ಯ ಮುಖ್ಯಾಧಿಕಾರಿಗಳು ಕೋರಿದ್ದಾರೆ.