ಬಳ್ಳಾರಿ,ಜೂ.05
ನಗರದ ವಾರ್ಡ್ ನಂ.29 ಕುರುಬರ ಓಣಿಥಿ ಮಲ್ಲೇಶ್ವರ ಗುಡಿ ಹತ್ತಿರದ ನಿವಾಸಿಯಾದ ಕೆ.ಸಿ.ಪವನ್ ಎನ್ನುವ 25 ವರ್ಷದ ಯುವಕ ಏ.23 ರಂದು ಮನೆಯಿಂದ ಹೊರಗಡೆ ಹೋದವನು ವಾಪಾಸ್ ಬಾರದೇ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5.7 ಅಡಿ ಎತ್ತರ, ದುಂಡು ಮುಖ, ಸಾಧಾರಣ ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ಹಾಗೂ ಕುರುಚಲು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ನೀಲಿ ಡಿಸೈನ್ ನ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731,244145 ಅಥವಾ ಪಿಎಸ್‌ಐ ಮೊ.94808203085, ಪಿಐ ಮೊ.9480803047 ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.