Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಮಿಕ ವಿರೋಧಿ ಕಾನೂನು ಜಾರಿ ; ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕರ ಪ್ರತಿಭಟನೆ

ರಾಮದುರ್ಗ:    

ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಕೇಂದ್ರದ ಆದೇಶ ಪ್ರತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Advertisement


ಸಿಐಟಿಯು ನೇತೃತ್ವದಲ್ಲಿ ನಗರದ ಎಪಿಜೆ ಅಬ್ದುಲ್ ಕಲಾಂ ವೃತ್ತದ ಹತ್ತಿರ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆದೇಶದ ಪ್ರತಿಗಳನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವ ಕೇಂದ್ರದ ಮೋದಿ ಸರಕಾರ ಯಾರ ಜೊತೆಯು ಚರ್ಚಿಸದೇ, ಅಧಿಸೂಚನೆಗೆ ಆಕ್ಷೇಪಣೆಯೂ ಕೇಳದೆ ಕಾನೂನುಗಳನ್ನು ಜಾರಿ ಮಾಡಿ ದುಡಿಯುವ ಜನರಿಗೆ ಕೇಂದ್ರ ಸರಕಾರ ದ್ರೋಹ ಬಗೆದಿದೆ. ಕೇಂದ್ರ ಸರಕಾರ ೨೦೧೯ ರಲ್ಲಿಯೇ ಈ ಹೊಸ ಕಾರ್ಮಿಕ ಸಂಹಿತೆಗಳನ್ನು ತರಲು ಮುಂದಾಗಿತ್ತು. ದೇಶದಲ್ಲಿ ಕಾರ್ಮಿಕರ ವಿರೋಧಗಳು, ಪ್ರತಿಭಟನೆಗಳು ತೀವ್ರವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಜಾರಿ ಮಾಡಲು ಆಗಿರಲಿಲ್ಲ. ಇತ್ತೀಚೆಗೆ ನಡೆದ ಬಿಹಾರ್ ಚುನಾವಣೆ ಮೊನ್ನೆ ನಡೆದ ೫ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ್ದರ ಅಹಂನಲ್ಲಿ ಈ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಸಿದುಕೊಂಡು ಈ ದೇಶದ ಬಂಡವಾಳ ಶಾಹಿಗಳ ಜೇಬು ತುಂಬಲು ಹೊರಟಿದೆ ಎಂದು ಜಿ.ಎಂ ಜೈನೆಖಾನ್ ಆಕ್ರೋಶ ವ್ಯಕ್ತಪಡಿಸಿದರು. 

ಹಠಮಾರಿ ಕೇಂದ್ರ ಸರಕಾರ ಕಾರ್ಮಿಕರ ಭವಣೆ ಕೇಳದೆ, ಪ್ರತಿಭಟನೆಗೂ ಕಿವಿ ಕೊಡದೆ, ಮನವಿಗಳಿಗೂ ಸ್ಪಂದಿಸದೆ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿ ಎಂದು ಕಾರ್ಮಿಕ ಮುಖಂಡ ನಾಗಪ್ಪ ಸಂಗೊಳ್ಳಿ ವಿಷಾದ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘದ ಮುಖಂಡರಾದ ಕೃಷ್ಣಾ ಹೊಸೂರ, ಮಹಾಂತೇಶ ಪಾಶ್ಚಾಪೂರ, ಅಂಗನವಾಡಿ ನೌಕರರ ಸಂಘದ ಮುಖಂಡರಾದ ವಿಜಯಲಕ್ಷ್ಮೀ ಸಿದ್ದಿಬಾಂವಿ, ರೇಖಾ ಪಟ್ಟಿಹಾಳ, ಬೋರವ್ವ ತೆಕ್ಕಿ, ಕಟ್ಟಡ ಕಾರ್ಮಿಕರ ಸಂಘದ ಮಾರುತಿ ಮುದಗುರಿ, ಬಾಳಪ್ಪ ಕಿಟದಾಳ ಇತರರು ಇದ್ದರು. 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾಳಿ ಮಳೆಯ ರಭಸಕ್ಕೆ, ಸರ್ಕಾರಿ ಶಾಲೆ ರಕ್ಷಣಾ ಗೋಡೆ ದ್ವಂಸಜಿಗಜೇವಣಿ ಗ್ರಾಮದ ಕೆರೆಗೆ ಅಳವಡಿಸಲಾದ ಪೈಪಲೈನ್ ತೆರವುಗೊಳಿಸುವಂತೆ ಮನವಿ ಸಿದ್ಧಾರ್ಥ ನಗರದ ಜನರ ಸಮಸ್ಯೆ ಆಲಿಸಿ, ಕ್ರಮಕ್ಕೆ ಸೂಚಿಸಿದ ಶಾಸಕ ನಾರಾ ಭರತ್ ರೆಡ್ಡಿಒಂದು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ  ಅರ್ಜಿ ಅಹ್ವಾನಉಚಿತ ಬೇಸಿಗೆ ಶಿಬಿರಕ್ಕೆ ಡಿಸಿ ಸಂಗಪ್ಪ ಚಾಲನೆಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಹುಬ್ಬಳ್ಳಿಯಲ್ಲಿ ಮೇ 16, 17 ರಂದು 12ನೇ 'ಮೇ ಸಾಹಿತ್ಯ ಮೇಳ': ಅಲ್ಲಮಪ್ರಭು ಬೆಟ್ಟದೂರುವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಮೇ 31ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಮಾವಿನ ಮೇಳಕ್ಕೆ 10 ವರ್ಷ; ಹಲವು ವಿಶೇಷ