Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಸ್ವಾರ್ಥ ರಂಗಭೂಮಿಯ ಸೇವೆಕ ಅಮೋಘ ಖೊಬ್ರಿ ಕರ್ನಾಟಕದ ರಂಗಭೂಮಿಯ ಆಸ್ತಿ: ಡಿಸಿ.ಸಿದ್ದಪ್ಪಾ ಗಂಗಾಧರ


ಅಥಣಿ :ತಾಲೂಕಿನ ತೆಲಸಂಗ ಗ್ರಾಮ  ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ, ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ, ನಿಸ್ವಾರ್ಥ ರಂಗಭೂಮಿಯ ಸೇವೆಕ ಅಮೋಘ ಖೊಬ್ರಿ ಕರ್ನಾಟಕದ ರಂಗಭೂಮಿಯ ಆಸ್ತಿ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾಧಿಕಾರಿ ಸಿದ್ದಪ್ಪಾ ಗಂಗಾಧರ ಹೇಳಿದರು.


     ಗ್ರಾಮದಲ್ಲಿ ಡಾ.ಪಂಡೀತ ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆ ಮತ್ತು ಬಸವ ಬಳಗದ ವತಿಯಿಂದ ರಂಗ ದಿಗ್ಗಜ ಏಣಗಿ ನಟರಾಜ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಕಕಾರ ನ್ಯಾಯವಾದಿ ಅಮೋಘ ಖೊಬ್ರಿ ಅವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ, ವಕೀಲನಾಗಿದ್ದುಕೊಂಡೇ ವೃತ್ತಿ ರಂಗಭೂಮಿ ಕಲಾವಿದರಿಗೆ ಸಮನಾಗಿ ೩೦ ವರ್ಷಗಳಿಂದ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡುರುವ ಅಮೋಘ ಖೊಬ್ರಿ ಅವರ ರಂಗ ಸೇವೆ ಮಾದರಿ ಆಗಿದೆ.


ಯಾವುದೇ ಪಾತ್ರವನ್ನು ಮಾಡಿದರೂ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಆ ಪಾತ್ರಕ್ಕೆ ಜೀವ ತುಂಬುವ ಮನೋಜ್ಞ ಅಭಿನಯಕ್ಕೆ ಈ ದಿನಗಳಲ್ಲಿ ಅಮೋಘ ಅವರಿಗೆ ಯಾರೂ ಸರಿಸಾಟಿ ಇಲ್ಲ. ಇಂತಹ ಕಲಾವಿದರಿಂದ ಕಲೆ ಸಂಸ್ಕೃತಿಗೆ ಶಕ್ತಿ ತುಂಬುತ್ತದೆ ಎಂದರು.


     ಸತ್ಕಾರ ಸ್ವೀಕರಿಸಿದ ಅಮೋಘ ಖೊಬ್ರಿ ಮಾತನಾಡಿ, ರಂಗಭೂಮಿ ಸಮಾಜದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ ಮನರಂಜನೆಯೊAದಿಗೆ ಸಮಾಜವನ್ನು ಬೆಸೆಯುವ, ಪರಿವರ್ತಿಸುವ ಶಕ್ತಿ ರಂಗಭೂಮಿಗೆ ಇದೆ. ರಂಗನಟ ಏಣಗಿ ಬಾಳಪ್ಪ ಮತ್ತು ಏನಗಿ ನಟರಾಜ ಸೇವರಿದಂತೆ ಸಾಲು ಸಾಲು ಕಲಾವಿದರು ಇಡಿ ತಮ್ಮ ಜೀವನವನ್ನು ರಂಗಭೂಮಿ ಉಳುವಿಗೆ ಶ್ರಮಿಸಿದ್ದು, ಅವರು ಬಿಟ್ಟು ಹೋದ ನೆನಪು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಕನ್ನಡ ರಂಗಭೂಮಿಯ ಸಂಸ್ಕೃತಿ ಉಳಿಸಿ ಬೆಳೆಸಲು ಬದುಕಿನುದ್ದಕ್ಕೂ ರಂಗಭೂಮಿಗಾಗಿ ದುಡಿದವರ ಸ್ಮರಣೆ ಅತ್ಯಗತ್ಯ. ನಶಿಸುತ್ತೀರುವ ರಂಗ ಪರಂಪರೆ ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಸಂಸ್ಕೃತಿಯ ಶಕ್ತಿಯನ್ನು ಮುಂದೀನ ಪೀಳಿಗೆಗೆ ಬಳುವಳಿಯಾಗಿ ಕೊಡಲು ಸಾಧ್ಯ ಎಂದರು.


      ಡಾ.ಬಿ.ಎಸ್.ಕಮಾನ್ ಮಾತನಾಡಿ, ನ್ಯಾಯವಾದಿ ಪಿ.ಪಿ.ಮೋರೆ, ಸಂಗಮೆಶ ಉಂಡೋಡಿ, ಚಂದ್ರಶೇಖರ ಹತ್ತಿ, ಡಾ.ಆರ್.ಡಿ.ಪೂಜಾರಿ, ಶ್ರೀಶೈಲ ಶೆಲ್ಲೆಪ್ಪಗೋಳ, ಶೇಖರ ರೋಡಗಿ, ಚೆನ್ನಬಸಪ್ಪಾ ಗಂಗಾಧರ, ಈಶ್ವರ ಹತ್ತಿ, ಪ್ರಕಾಶ ಸಿಂದಗಿ, ಅಶೋಕ ಪರುಶೆಟ್ಟಿ, ಮೋಹೀನ ನಧಾಫ್, ಶಿವಪ್ಪಾ ಹತ್ತಿ, ಕುಮಾರ ರೋಡಗಿ, ಅಪ್ಪು ಜಮಾದರ, ಗುರಯ್ಯಾ ಮಠಪತಿ, ಗೋಪಾಲ ಶೆಲ್ಲೆಪ್ಪಗೋಳ, ಸುರೇಶ ಖೊಳಂಬಿ, ಬುಡ್ಡಾಸಾಬ ಮುಜಾವರ, ಗಪೂರ ಮುಲ್ಲಾ, ಸುನೀಲ ಉಂಡೋಡಿ, ಶಿವಯೋಗಿ ಹತ್ತಿ, ಶೆಂಬು ಸಿಂದಗಿ, ಆನಂದ ಥೈಕಾರ ಸೇರಿದಂತೆ ಇತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ