Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯರೆಲ್ಲ ಹೇಮರೆಡ್ಡಿ ಮಲ್ಲಮ್ಮನ ಆದರ್ಶ ಪಾಲಿಸಲು: ಉಡೇದ ಬಸವರಾಜ್ ಕರೆ

ಬಳ್ಳಾರಿ:ಮೇ,13.- ಮಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಆದರ್ಶವನ್ನು ನಮ್ಮ ಮಹಿಳೆಯರು ಪಾಲಿಸಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರು ರೆಡ್ಡಿ ಸಮಾಜದ ಮುಖಂಡರಾದ  ಉಡೇದ ಬಸವರಾಜ್ ಕರೆ ನೀಡಿದರು.
ಅವರು ನಿನ್ನೆ ಸಂಜೆ ನಗರದ ಬಸವ ಭವನದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಹಮ್ಮಿಕೊಂಡಿದ್ದ 604 ನೇ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಆರು ನೂರು ವರ್ಷದ ಹಿಂದಿನ ಮಲ್ಲಮ್ಮನವರ ರೆಡ್ಡಿ ಮನೆತನದಂತೆ ಈಗಲೂ ಎಲ್ಲರೂ ಆರ್ಥಿಕವಾಗಿ ಸಬಲರಾಗಿಲ್ಲ. ಅನೇಕ ರೆಡ್ಡಿ ಕುಟುಂಬಗಳು ಸಂಕಷ್ಟದಲ್ಲಿವೆ.ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಈ ಜಯಂತಿ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಸರ್ಕಾರದ ಎಲ್ಲಾ ಸವಲತ್ತುಗಳು ಪಡೆಯುವ ಪ್ರಯತ್ನ ಆಗಬೇಕು ಅದಕ್ಕಾಗಿ ನಾವೆಲ್ಲ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದರು.
ಶಿಕ್ಷಕ ಅಮಾತಿ ಬಸವರಾಜ್ ಅವರು ಹೇಮರೆಡ್ಡಿ ಮಲ್ಲಮ್ಮನವರ ಚರಿತ್ರೆ, ರೆಡ್ಡಿ ಸಮುದಾಯದ ಇತಿಹಾಸ ಕುರಿತು ಉಪನ್ಯಾಸ ನೀಡುತ್ತ. ಮಲ್ಲಮ್ಮನ ಪ್ರಾರ್ಥನೆಗೆ ಪ್ರತ್ಯಕ್ಷನಾದ ಶ್ರೀಶೈಲ ಮಲ್ಲಿಕಾರ್ಜುನನ ಬಳಿ ಆಕೆ ಕೇಳಿದ್ದು ತಮ್ಮ ಕುಟುಂಬಕ್ಜೆ ಐಶ್ವರ್ಯವನ್ನಲ್ಲ. ಇಡೀ ರೆಡ್ಡಿ ಸಮಾಜಕ್ಕೆ ಎಂದಿಗೂ ಬಡತನ ಬರದಂತೆ ಇತರರಿಗೆ ನೆರವಾಗುವಂತೆ ಮಾಡಿ ಎಂದಳು. ಇಂತಹ ಸಾಧ್ವಿಯ ಆದರ್ಶ ಎಲ್ಲರು ಅನ್ವಯಿಸಿಕೊಳ್ಳಬೇಕು ಎಂದರು.
ಶ್ರೀಶೈಲದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಅರ್ಚಕ ಗುರುಪಾದಯ್ಯ ಸ್ವಾಮಿ ಅವರು ಮಲ್ಲಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ವೇಳೆ ಸೌಂದರ್ಯ ಮತ್ತು ಲಕ್ಷ್ಮೀ ಕಲಾ ಕ್ಷೇತ್ರದ ಜಿಲಾನ್ ಭಾಷಾ ಅವರ ವಿದ್ಯಾರ್ಥಿಗಳಿಂದ  ವಚನಾನೃತ್ಯ ಪ್ರದರ್ಶನ ನಡೆಯಿತು.
ಎನ್.ಬಸವರಾಜ್ ಮತ್ತು ಡಿ.ಕಗ್ಗಲ್ಲು ದೊಡ್ಡ ಬಸಬ ಗವಾಯಿ ಮತ್ತವರ ತಂಡದಿಂದ ಮಲ್ಲಮ್ಮನ ಹಾಡುಗಳ ಗಾಯನ ನಡೆಸಿಕೊಟ್ಟರು.
ಸಮಾಜದ ಆರು ಜನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಸಮಾಜದ ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್, ಸಂಗನಕಲ್ಲು ಹಿಂಮತರಾಜ್, ಜಾನೆಕುಂಟೆ ನೇಪಾಕ್ಷಪ್ಪ, ನೆಲ್ಲುಡಿ ಅಯ್ಯಪ್ಪ, ಸುರೇಖ ಮಲ್ಲನಗೌಡ, ಡಾ.ರೇಣುಕಾ ಮಂಜುನಾಥ, ಡಾ.ಭಾಗ್ಯಲಕ್ಷ್ಮಿ , ಸುಮಂಗಳಮ್ಮ ಬಸವರಾಜ್ ಮೊದಲಾದವರು ಇದ್ದರು. ಮಿಂಚೇರಿ ನರೇಂದ್ರ ಬಾಬು ಕಾರ್ಯಕ್ರಮ ನಿರೂಪಿಸಿದರು. ಕೋಳೂರು ವೆಂಕಟೇಶಗೌಡ, ಬಣಾಪುರ ನಾಗರಾಜಗೌಡ, ಮಿಂಚೇರಿ ನರೇಂದ್ರಬಾಬು, ಕೆರೆನಳ್ಳಿ ಚಂದ್ರಶೇಖರ್ , ವಿರೂಪಾಕ್ಷಗೌಡ ಮೊದಲಾದವರು ಕಾರ್ಯಕ್ರಮ ಸಂಘಟನೆಯಲ್ಲಿ ತೊಡಗಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆ – ಅಥಣಿ-ಪುಣೆ ಹಾಗೂ ಅಥಣಿ-ಕೊಲ್ಲಾಪುರ ಬಸ್ ಸೇವೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆಪ್ರಥಮ ವರ್ಷದ ಪಿಯುಸಿಕಾಲೇಜಿಗೆ ಪ್ರವೇಶ ಪ್ರಾರಂಭವಾಗಿರುವುದು ಸಂತಸ ತಂದಿದೆ : ಪಾಸೋಡಿಬಳ್ಳಾರಿ: ರಾಷ್ಟಿçÃಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆಮೋಳೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ; ಕಾಂಗ್ರೆಸ್ ಮುಖಂಡರಿAದ ಶಾಸಕ ರಾಜು ಕಾಗೆಯವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ..!! ರನ್ನ ಬೆಳಗಲಿ ಪಟ್ಟಣದ ಪಿಕೆಪಿಎಸ್ ಅಧ್ಯಕ್ಷರಾಗಿ ನಿಂಗಪ್ಪ ಆರೇನಾಡ, ಉಪಾಧ್ಯಕ್ಷರಾಗಿ ಯಮನಪ್ಪ ಚಂದಪ್ಪನವರ ಆಯ್ಕೆ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಬ್ರೇಕ್ ಹಾಕಿ, ಅಗತ್ಯ ಪ್ರಮಾಣದ ಯೂರಿಯಾ ಒದಗಿಸಿ: ರೈತ ಸಂಘದಿಂದ ತಹಶೀಲ್ದಾರ್, ಕೃಷಿ ಅಧಿಕಾರಿಗೆ ಮನವಿ.ಕುಂಟೋಜಿ ಗ್ರಾಮದಲ್ಲಿ ನೀರಿನ ಬರೆ; ಗ್ರಾಪಂ ಮುಂದೆ ಅರೆಬೆತ್ತಲೆ ಪ್ರತಿಭಟನೆ!ಕ್ರಮ ಮರಳು ಅಡ್ಡೆಗಳ ಮೇಲೆ ಮತ್ತೆ ಲೋಕಾಯುಕ್ತರ ದಾಳಿ - ಅವಳಿ ತಾಲೂಕಿನ ೮ ಕಡೆಗಳಲ್ಲಿ ೮ ತಂಡಗಳಿಂದ ದಾಳಿ : ಧಂದೆಗೆ ಬಯಸುತ್ತಿದ್ದ ಟಿಪ್ಪರ್, ಹಿಟಾಚಿ ವಶ ಸಂತ್ರಸ್ತರ ಧರಣಿ ೨೦ನೆಯ ದಿನಕ್ಕೆಸಂಸ್ಕಾರಯುತ ವಿಚಾರಗಳನ್ನು ಅಳವಡಿಸಿಕೊಂಡಾಗ ಬದುಕು ಸುಂದರ : ಅಭಿನವ ಯಚ್ಚರ ಸ್ವಾಮೀಜಿ