LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನರೇಗಾ ಕಾಮಗಾರಿಯಲ್ಲಿ ಎಲ್ಲಾ ಕೂಲಿಕಾರರು ಕೆಲಸಕ್ಕೆ ಹಾಜರಾಗಿರಿ: ಶ್ರೀನಿವಾಸ ಚಿತ್ರಗಾರ



ಕೊಪ್ಪಳ ಮೇ ೦೬: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕೂಲಿಕಾರರು ಫಾರಂ ನಂ.೬ ಸಲ್ಲಿಸುವ ಮೂಲಕ ಕೂಲಿ ಕೆಲಸಕ್ಕೆ ಹಾಜರಾಗುವಂತೆ ಜಿಲ್ಲಾ ಪಂಚಾಯತ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಕರೆ ನೀಡಿದರು.
ಕಲಕೇರಿ ಗ್ರಾಮ ಪಂಚಾಯತಿಯ ವತಿಯಿಂದ ಮಂಗಳವಾರ ಕಲಕೇರಿ ಗ್ರಾಮದ ಸಂತ ಷರೀಪರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ಮಾನವ ದಿನಕ್ಕೆ ರೂ. ೩೭೦ ಕೂಲಿ ನಿಗದಿಪಡಿಸಿದ್ದು, ಸಂಪೂರ್ಣವಾಗಿ ಕೂಲಿ ಕೆಲಸ ನಿರ್ವಹಿಸಿ ಪೂರ್ತಿ ಹಣ ಪಡೆದುಕೊಳ್ಳಬೇಕು. ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೆಲಸದ ಜೊತೆಗೆ ಆರೋಗ್ಯ ಕಡೆ ಕಾಳಜಿವಹಿಸಬೇಕು. ೧೮ ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ-೬ ಸಲ್ಲಿಸಬೇಕು. ಮೇ ಮತ್ತು ಜೂನ್ ವರೆಗೆ ೬೦ ದಿನಗಳ ಕೂಲಿ ಕೆಲಸ ಪಡೆಯಬೇಕೆಂದರು.
ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.ಜಾಬಕಾರ್ಡನಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಹೊಂದಿದ ನಂತರವೇ ಎನ್‌ಎಂಆರ್ ಪ್ರಕಾರ ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗಬೇಕು. ೧ & ೨ನೇ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಜಾಬಕಾರ್ಡಗೆ ೧೦೦ ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಕೂಲಿಕಾರರು ಕೂಲಿ ಅರಸಿ ಗುಳೆ ಹೋಗುವದನ್ನು ನಿಯಂತ್ರಿಸಿ ಸ್ಥಳೀಯವಾಗಿ ಉದ್ಯೋಗ ಒದಗಿಸಿ ಅವರಿಗೆ ಕೂಲಿ ಹಣ ಪಾವತಿಸಿ ಸ್ವಾವಂಬಿ ಜೀವನ ನಡೆಸಲು ಯೋಜನೆಯ ಸದುದ್ದೇಶವಾಗಿದೆ. ಎಲ್ಲಾ ಕೂಲಿಕಾರರು ಸಾಮಾಜಿಕ ಭದ್ರತೆ ವಿಮೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ.ಗಳಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಗ್ರಾಮ ಪಂಚಾಯತಿ ಡಿಇಒ ಕುಮಾರ ಪರಗಿ, ಬೇರ್‌ಪೂಟ್ ಟೆಕ್ನಿಷಿಯನ್ ಮಾರುತಿ ವಾಲ್ಮೀಕಿ, ಗ್ರಾಮ ಕಾಯಕ ಮಿತ್ರ ರಾಧಾ, ಕಾಯಕ ಬಂಧುಗಳಾದ ನಾಗರಾಜ ಮಲಾಜಿ, ಮುತ್ತು ಲಮಾಣಿ, ಕುಮಾರ ಚವ್ಹಾಣ್, ರಾಮಣ್ಣ ಉಪ್ಪಾರ, ವಿರೇಶ ಹರಿಜನ, ಕೂಲಿಕಾರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶರಣು ಸಜ್ಜನ ಅವಿರೋಧ ಆಯ್ಕೆ ಮುದ್ದೇಬಿಹಾಳಕ್ಕೆ ಹೆಮ್ಮೆ: ಜಿ.ಪಂ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿಸಿರುಗುಪ್ಪ ತಾಲ್ಲೂಕಿನ ರೈತರಿಗೆ ಬರ ಪರಿಹಾರ ನೀಡಿ : ತಾಳೂರು ರಾಘವೇಂದ್ರ ರೆಡ್ಡಿ ಒತ್ತಾಯ  ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಾಗಲೇ ವ್ಯಕ್ತಿಸಮಾಜದ ಉನ್ನತಿ ಸಾಧ್ಯ: ಅಭಿನವ ಶ್ರೀ ಮೌನೇಶ್ವರ ಮಹಾಸ್ವಾಮೀಜಿಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮ  ಮೇಲಿದೆ :  ಅಶೋಕ್ ಚೌಹಾಣ್ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ : ಟಿ ಎಚ್ ಬಸವರಾಜ್  ಅಭಿಮತ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ದಾನೇಶ್ವರಿ, ಪೂಜಾ ಆಯ್ಕೆ22, 23ಕ್ಕೆ ರಾಯಬಾಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಇಂಡಿ ತಾಲುಕಿನ ಭತಗುಣಕಿ ಗ್ರಾಮದ ವಿವಿದ್ದೋದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ನೂತನವಾಗಿ ಸೋಲಾರ ಘಟಕ ವ್ಯವಸ್ಥೆಗೆ ಚಾಲನೆ ನೀಡಿದರು.