ಬಳ್ಳಾರಿ, ಏ.21: ಅಕ್ಷಯ ತೃತೀಯಾ ಹಬ್ಬದ ಅಂಗವಾಗಿ ಇಂದು ನಗರದಲ್ಲಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ, ತೇರು ಬೀದಿಯಲ್ಲಿ ಭಕ್ತಿಪೂರ್ವಕವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಶ್ರೀಗಂಧ ಲೇಪನ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನ ಪಡೆದರು. ಪೂಜಾ ಕಾರ್ಯಕ್ರಮವನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಪಂಡಿತ ರಾಮಕೃಷ್ಣಾಚಾರ್, ಹನುಮೇಶಾಚಾರ್ ಐಕೋರ್, ರಾಘವೇಂದ್ರ ಶರಾಫ್, ಶ್ರೀಧರ ಹಾಗೂ ಶಿಷ್ಯಂದಿರು ಉಪಸ್ಥಿತರಿದ್ದರು.
