Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡದ ಎ ಜಿ ಎಂ ಆರ್ ಸಿ ಇ ಟಿ ಕಾಲೇಜಿಗೆ ‘ಟಿಸಿಎಸ್ ಟೆಕ್‌ ಬೈಟ್ಸ್’ ಹುಬ್ಬಳ್ಳಿ ವಲಯ ಮಟ್ಟದ ಪ್ರಶಸ್ಪ್ಸ್ತಿ


























ಹುಬ್ಬಳ್ಳಿ-ಧಾರವಾಡಏಪ್ರಿಲ್ 18, 2026: ಜಾಗತಿಕ ಮಟ್ಟದ ಐಟಿ ಸೇವೆಗಳ ಪ್ರತಿಷ್ಠಿತ ಕಂಪನಿ ಆಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್ (ಬೈಟ್ಸ್ಜಂಟಿಯಾಗಿ ಆಯೋಜಿಸಿದ್ದ 17ನೇ ಆವೃತ್ತಿಯ ಹುಬ್ಬಳ್ಳಿ ವಲಯದ 'ಟಿಸಿಎಸ್ ಟೆಕ್‌ ಬೈಟ್ಸ್ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಧಾರವಾಡದ  ಜಿ ಎಂ ಆರ್ ಸಿ  ಟಿ ಕಾಲೇಜು ತಂಡವು ಜಯಭೇರಿ ಬಾರಿಸಿದೆ.ಅತ್ಯಂತ ವೇಗವಾಗಿ ಮತ್ತು ರೋಚಕವಾಗಿ ನಡೆದ ಹಲವು ಸುತ್ತುಗಳ ರಸಪ್ರಶ್ನೆ ಸ್ಪರ್ಧೆಯಲ್ಲಿ, ಧಾರವಾಡದ ಎಜಿಎಂ ರೂರಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಎ ಜಿ ಎಂ ಆರ್ ಸಿ ಇ ಟಿ) ವಿದ್ಯಾರ್ಥಿಗಳಾದ ಪರಶುರಾಮ ಗಟ್ಟಿ ಮತ್ತು ರಮ್ಮನ್ ಖಾನ್ ವಿಜೇತರಾಗಿ ಹೊರಹೊಮ್ಮಿದರು. ಬೆಳಗಾವಿಯ ಕೆಎಲ್‌ಎಸ್ ಗೋಗ್ಟೆ ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿನ್ಮಯ್ ಸೊನ್ನದ ಮತ್ತು ಅಮೇಯ್ ಹಿರೇಮಠ ದ್ವಿತೀಯ ಸ್ಥಾನ ಪಡೆದುಕೊಂಡರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಜಗತ್ತಿಗೆ ತಕ್ಕಂತೆ ತಮ್ಮನ್ನು ಅಪ್‌ ಡೇಟ್ ಮಾಡಿಕೊಳ್ಳಲು ಮತ್ತು ಅವರ ಲ್ಯಾಟರಲ್ ಥಿಂಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಟಿಸಿಎಸ್ ಮತ್ತು ಬೈಟ್ಸ್ (BITES) ಜಂಟಿಯಾಗಿ 'ಟಿಸಿಎಸ್ ಟೆಕ್‌ ಬೈಟ್ಸ್' ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಯೋಜನೆಯ ಹುಬ್ಬಳ್ಳಿ ವಲಯದ ಸ್ಪರ್ಧೆಯಲ್ಲಿ ಸ್ಪರ್ಧಾರ್ಥಿಗಳು ಮೊದಲು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಲಿಖಿತ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಸುತ್ತಿನಲ್ಲಿ ಆಯ್ಕೆಯಾದ ಅಗ್ರ ಆರು ತಂಡಗಳು ಅಂತಿಮ ಹಂತದ ಐದು ವಿಭಾಗಗಳ ಸಂವಾದಾತ್ಮಕ ಕ್ವಿಜ್‌ ನಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಜಾಣ್ಮೆ ಪ್ರದರ್ಶಿಸಿದವು.

ಹುಬ್ಬಳ್ಳಿ ಪ್ರಾದೇಶಿಕ ಸುತ್ತಿನ ಈ ಕಾರ್ಯಕ್ರಮಕ್ಕೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಎಸ್. ಹುನಗುಂದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ 'ಟಿಸಿಎಸ್ ಟೆಕ್‌ ಬೈಟ್ಸ್' ಹುಬ್ಬಳ್ಳಿ ವಿಭಾಗದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಟಿಸಿಎಸ್ ಟೆಕ್‌ಬೈಟ್ಸ್ ಹುಬ್ಬಳ್ಳಿ ಆವೃತ್ತಿಯ ವಿಜೇತರು 2026 ಮೇ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ನಗರವನ್ನು ಪ್ರತಿನಿಧಿಸಲಿದ್ದಾರೆ.

ಟಿಸಿಎಸ್ ಟೆಕ್‌ ಬೈಟ್ಸ್ ಎಂಬುದು ಎಲ್ಲಾ ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುವ ಒಂದು ಕ್ಯಾಂಪಸ್ ಔಟ್‌ ರೀಚ್ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಜ್ಞಾನ ಮತ್ತು ಜಾಗೃತಿಯನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನ ಆಧಾರಿತ ಉದ್ಯಮದಲ್ಲಿ ಅವರು ಸ್ಪರ್ಧಿಸಲು ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಟಿಸಿಎಸ್ ಟೆಕ್‌ ಬೈಟ್ಸ್‌ ನ ಪ್ರಾದೇಶಿಕ ಫೈನಲ್ಸ್ ಮಂಗಳೂರುಮೈಸೂರುಕಲಬುರಗಿಹುಬ್ಬಳ್ಳಿತುಮಕೂರು ಮತ್ತು ಬೆಂಗಳೂರು ಸೇರಿದಂತೆ ಕರ್ನಾಟಕದ ಒಟ್ಟು ಆರು ನಗರಗಳಲ್ಲಿ ನಡೆಯುತ್ತಿದೆ.






















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ