Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಟಕಗಳು ಕೆಟ್ಟದಾರಿಯನ್ನು ತೇಜಿಸಿ  ಮುನ್ನೆಡೆಯಲಿಕ್ಕೆ  ಸಹಕಾರಿ: ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ

ಬೈಲಹೊಂಗಲ,27: ನಾಟಕಗಳಲ್ಲಿ ಬರುವ ಪಾತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಅದರಲ್ಲಿರುವ  ಒಳ್ಳೆಯತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟದಾರಿಯನ್ನು ತೇಜಿಸಿ  ಮುನ್ನೆಡೆಯಲಿಕ್ಕೆ  ಸಹಕಾರಿಯಾಗಿವೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.


ಸಮೀಪದ ಹೊಸೂರ ಗ್ರಾಮದಲ್ಲಿ  ಗುರು ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಜರುಗಿದ ಹಳ್ಳಿಯ ಹುಲಿ ಕೊಟ್ಟ ಬೆಳ್ಳಿಯ ಕಾಲುಂಗುರ ನಾಟಕ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯಲ್ಲಿರುವ ಕಲೆಯನ್ನು ಹೊರ ತರಲು ಹಾಗೂ ಪ್ರೇಕ್ಷಕರ ಮನಸ್ಸಿಗೆ ಮನರಂಜನೆ ನೀಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಯುವ ನಾಟ್ಯ ತಂಡಗಳು ನಾಟಕಗಳನ್ನು ಜಾತ್ರಾ ಮಹೋತ್ಸವ ದಲ್ಲಿ ಆಯೋಜನೆ ಮಾಡುತ್ತಿರುವದು ಶ್ಲಾಘನೀಯ.


ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್ ಬಳಕೆಯಿಂದ ಗ್ರಾಮೀಣ ಕಲೆ ನಶಿಸುತಿದ್ದು ಯುವಕರು ಜೀವನದಲ್ಲಿ ನಿರುತ್ಸಾಹ ಹೆಚ್ಚಾಗುತ್ತಿದ್ದು ದುಶ್ಚಚಟಗಳಿಗೆ ಅಂಟಿಕೊಳ್ಳುತ್ತಿರುವದು ಕಳವಳಕಾರಿಯಾಗಿದೆ. ಯುವ ಶಕ್ತಿ ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರುತ್ತಾ ಸಂಸ್ಕಾರಯುತವಾಗಿದ್ದರೆ ಸಮಾಜ ಸ್ವಸ್ಥ್ಯದಿಂದ ಇರುತ್ತದೆ ಎಂದರು.


ಶಿಕ್ಷಕ ಈರಣ್ಣ ಬೆಂಡಿಗೇರಿ ಮಾತನಾಡಿ, ಹುಟ್ಟಿದ ಸಂದರ್ಭದಲ್ಲಿ ಬಡತನವಿದ್ದರು ಅದು ನಿಮ್ಮ ತಪ್ಪಲ್ಲ. ಅದನ್ನು ಮೆಟ್ಟಿನಿಂತು ಜೀವನ ಸಾಗಿಸಬೇಕು. ದೇವರು ಕೊಟ್ಟ ಈ ಜನ್ಮದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಾಧನೆಯತ್ತ ಯುವಶಕ್ತಿ ಸಾಗಬೇಕಾಗಿದೆ. ಆದರೆ ಅನೇಕ ಯುವಕರು ತಮ್ಮ ಜೀವದ ಕಷ್ಟಗಳನ್ನು ಎದುರಿಸಾಲಗದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿರುವದು ಅತ್ಯಂತ ದುರದೃಷ್ಟಕರ. ಆದ್ದರಿಂದ ಅಂತಹ ದಾರಿಯಲ್ಲಿ ಸಾಗದೆ ಕ್ರಿಯಾಶೀಲತೆಯಿಂದ ಸ್ವಯಂ ಕಾರ್ಯದಲ್ಲಿ ತೊಡಗಿಕೊಂಡು ಉದ್ಯೋಗಶಿಲರಾಗಬೇಕೆಂದರು.


   ಗುರು ಮಡಿವಾಳೇಶ್ವರ ಮಠದ ಪೀಠಾದಿಪತಿ ಗಂಗಾಧರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಡಿ.ಸಂಗಣ್ಣವರ, ಗದಿಗೆಪ್ಪ ಬೆಂಡಿಗೇರಿ, ಶಂಕರ ಕಳ್ಳಿ, ಎಸ್.ಕೆ.ಮೆಳ್ಳಿಕೇರಿ, ಸುರೇಶ ಬಾಳೆಕುಂದರಗಿ, ಗುರಶಾಂತಯ್ಯ ಹೀರೆಮಠ,  ಪುಂಡಲಿಕ ನಾಗನೂರ,  ಶ್ರೀಶೈಲ ಬಾಳೆಕುಂದರಗಿ, ಮಲ್ಲಿಕಾರ್ಜುನ ಸಂಪಗಾಂವ, ಬಸವರಾಜ ವೀವೆಕಿ, ಆನಂದ ಮತ್ತಿಕೊಪ್ಪ, ಆನೆಪ್ಪ ಬಾಳೆಕುಂದರಗಿ, ನಿಂಗಪ್ಪ ಆರೇರ, ಈರಯ್ಯ ಹೀರೆಮಠ, ಕುಮಾರ ಗಣಾಚಾರಿ, ಮಲ್ಲಿಕಾರ್ಜನ ವಿವೇಕಿ, ಶಂಕರ ಲಂಗೋಟಿ, ಕಿರಣ ಬಾಳೆಕುಂದರಗಿ,ಮಡಿವಾಳಪ್ಪ ಆರೇರ, ಮಲ್ಲಪ್ಪ ಯರಡಾಲ, ಈರಣ್ಣ ಬಾಳೆಕುಂದರಗಿ, ಮಡಿವಾಳಪ್ಪ ಕಕ್ಕೆರಿ, ಶ್ರೀಕಾಂತ ಹೀರೆಮಠ, ಕಾರೆಪ್ಪ ಬಾಳೆಕುಂದರಗಿ, ನಾಗಪ್ಪ ಆರೇರ, ಮಹಾಂತೇಶ ಮೂಲಿಮನಿ,ಮಂಜು ಬಾಳೆಕುಂದರಗಿ,  ಈರಪ್ಪ ಆರೇರ, ಮಹೇಶ ಸಂಗೋಳ್ಳಿ, ಸಂತೋಷ ಆರೇರ, ಬಸವರಾಜ ಕಕ್ಕೇರಿ, ಶಿವಪ್ಪ ಬಾಳೆಕುಂದರಗಿ, ಶ್ರೀಶೈಲ ಆರೇರ,  ಫಕೀರ ಜಾಧವ, ಮಹಾಂತೇಶ ಅವರಾಧಿ, ಮಂಜುನಾಥ ಪೇಂಟೆದ,‌ ಸಂಜು ಪಾಟೀಲ, ಮಂಜುನಾಥ ಕಳ್ಳಿ, ಮಡಿವಾಳಪ್ಪ ಬಾಳೆಕುಂದರಗಿ, ಇದ್ದರು.

ಗ್ರಾಪಂ ಸದಸ್ಯ ಬಸವರಾಜ ಬಾಳೆಕುಂದರಗಿ ಸ್ವಾಗತಿಸಿದರು. ಗಜಾನನ ಆರೇರ ನಿರೂಪಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ