Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೀಟ ಬಾಧೆ ಮತ್ತು ರೋಗ ನಿರ್ವಹಣೆ: ಕೃಷಿ ವಿಜ್ಞಾನಿಗಳ ಸಲಹೆ

ಯರಗಟ್ಟಿ: ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕೃಷಿ ಇಲಾಖೆ, ಸವದತ್ತಿ ಸಹಯೋಗದಲ್ಲಿ ಪೀಡೆ ಸರ್ವೇಕ್ಷಣಾ ತಂಡವು ಸವದತ್ತಿ ಮತ್ತು ಯರಗಟ್ಟಿ ತಾಲೂಕಿನ ವಿವಿಧ ಹಳ್ಳಿಗಳಾದ ಸತ್ತಿಗೇರಿ, ಕರಿಕಟ್ಟಿ, ಯಡಹಳ್ಳಿ, ಕೆಂಚರಾಮನಹಳ್ಳಿ, ಇನಾಮಹೊಂಗಲ ಗ್ರಾಮಗಳಿಗೆ ಭೇಟಿ ನೀಡಿ ಸೋಯಾಅವರೆ, ಹೆಸರು, ಉದ್ದು ಗೋವಿನಜೋಳ ಹಾಗೂಕಬ್ಬು ಬೆಳೆಗಳಲ್ಲಿ ಕಂಡು ಬಂದ ಕೀಟ ಮತ್ತು ರೋಗಗಳಿಗೆ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ ಇವರು ಸಮಗ್ರ ಪೀಡೆ ನಿರ್ವಹಣೆ ತಾಂತ್ರಿಕತೆಗಳನ್ನು ರೈತರಿಗೆ ತಿಳಿಸಿದರು. ಜೊತೆಗೆ ಪರಿಸರಸ್ನೇಹಿ ತಂತ್ರಜ್ಞಾನ ಬಳಸಿ ಕೀಟ ರೋಗ ನಿರ್ವಹಣೆ ಮಾಡಲು ಕೋರಿದರು. ಮೋಡ ಕವಿದ ವಾತಾವರಣ, ತುಂತುರು ಮಳೆ ಹಾಗೂ ಬಲವಾದ ಗಾಳಿಯಿಂದ ಕೂಡಿದ ವಾತಾವರಣದಲ್ಲಿ ಕೀಟಗಳ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಹೇಳಿದರು.
ಸೋಯಾಅವರೆ: ೧.ಕಾಂಡ ಕೊರೆಯುವ ನೊಣದ ಬಾಧೆ ಕಂಡು ಬಂದಿದ್ದು, ಪ್ರತಿ ಲೀಟರ್ ನೀರಿಗೆ ೦.೩ ಗ್ರಾಂ ಥಯಾಮಿಥಾಕ್ಸಾಮ್ ೨೫ ಡಬ್ಲೂಜಿ ಅಥವಾ ಸಂಯುಕ್ತ ಕೀಟನಾಶಕಗಳಾದ ಥಯಾಮಿಥಾಕ್ಸಾಮ್ ೧೨.೬% + ಲ್ಯಾಮ್ಹಾ ಸೈಹೆಲೋಥೀನ್ ೯.೫% ೨೦ ಎಫ್. ಎಸ್. ಪ್ರತಿ ಲೀಟರ ೦.೨೫ .
೨.ಸೊಡಾಪ್ಟರಾ/ಹೆಲಿಕೋವರ್ಪಾ ಎಲೆ ತಿನ್ನುವ ಕೀಟಗಳ ನಿರ್ವಹಣೆಗೆ ೦.೨ ಮಿಲೀ. ಕ್ಲೋಯಾರ್ಂಟ್ರನಿಲಿಪ್ರೊಲ್ ೧೮.೫ ಎಸ್. ಸಿ. ಅಥವಾ ೦.೫ ಮಿಲೀ. ಲ್ಯಾಮ್ಹಾ ಸೈಹಲೋಥೀನ್ ಅಥವಾ ೨ ಗ್ರಾಂ ಮೆಟರೈಜಿಯಂ ರಿಲೈ ಶಿಲೀಂದ್ರವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ೬ ಲಿಂಗಾಕ?ಕ ಮೋಹಕ ಬಲೆಗಳನ್ನು ಬೆಳೆಯ ಒಂದು ಅಡಿಗಿಂತ ಎತ್ತರದಲ್ಲಿ ನೇತುಹಾಕಬೇಕು.
ಕೀಟ ನಿರ್ವಹಣೆ ಜೊತೆಗೆ ಪ್ರತಿ ಲೀಟರ ನೀರಿಗೆ ೫ ಗ್ರಾಂ ನೀರಿನಲ್ಲಿ ಕರಗುವ ಎನ್‌ಪಿಕೆ ರಸಗೊಬ್ಬರಗಳಾದ ೧೯:೧೯:೧೯ ಅಥವಾ ೧೩:೦:೪೫ ಗಳನ್ನು ಬಳಸಬೇಕು.
ಹೆಸರು: ಹೆಸರು ಬೆಳೆಗೆ ಎಲೆ ತಿನ್ನುವ ಕೀಟದ ಹಾವಳಿ ಕಂಡುಬಂದಿದ್ದು, ಪ್ರತಿ ಲೀಟರ ನೀರಿಗೆ ೦.೨ ಮಿಲೀ ಕ್ಲೋಯಾರ್ಂಟಿನಿಲಿಪ್ರೊಲ್ ೧೮.೫ ಎಸ್. ಸಿ. ಅಥವಾ ೦.೩ ಗ್ರಾಂ ಥಯಾಮಿಥಾಕ್ಸಾಮ್ ೨೫ ಡಬ್ಲೂಜಿ ಕೀಟನಾಶಕಗಳನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಚಿಬ್ಬು ರೋಗ ಕಂಡು ಬಂದಲ್ಲಿ ಒಂದು ಮಿಲೀ. ಹೆಕ್ಸಾಕೊನೊಜೊಲ್ ೫ ಇ. ಸಿ. ಶಿಲೀಂದ್ರನಾಶಕವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದು. ಕಬ್ಬಿನ ಪೋ?ಕಾಂಶ ಕೊರತೆಯನ್ನು ನಿರ್ವಹಿಸಲು ಫೆರಸ್ ವೋಟ್ (ಇಡಿಟಿಎ) ೦.೫ ಗ್ರಾಂ ಪ್ರತಿ ಲೀಟರಿಗೆ ಬೆರೆಸಿ ಬಳಸುವುದು.
ಕಬ್ಬು:ಕಬ್ಬು ಬೆಳೆಯಲ್ಲಿ ವಿಕೃತ ಕೊಳೆ ರೋಗ ಕಂಡು ಬಂದಿದ್ದು, ರೈತ ಬಾಂಧವರು ಸಂಯುಕ್ತ ಶಿಲೀಂದ್ರನಾಶಕ ಅಜೊಕ್ಸಿಸ್ಕೋಬಿನ್ ೧೮.೨% + ಡೈಫೆನ್ ಕೊನೊಜೊಲ್ ೧೧.೪ ಎಸ್. ಸಿ. ಪ್ರತಿ ಲೀಟರ ನೀರಿಗೆ ಒಂದು ಮಿಲೀ ಜೊತೆಗೆ ೫ ಗ್ರಾಂ ಡಿಎಪಿ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆ ಪ್ರದೇಶಕ್ಕೆ ಕನಿ? ೧೫೦ ರಿಂದ ೨೦೦ ಲೀಟರ ಸಿಂಪರಣಾ ದ್ರಾವಣ ಬಳಸಬೇಕು. ಸಿಂಪರಣೆ ಮಾಡುವವರು ತಪ್ಪದೇ ರಕ್ಷಾ ಕವಚ ಧರಿಸಬೇಕು.
ಬಿಳಿ ಉಣ್ಣೆ ಸಮಗ್ರ ನಿರ್ವಹಣೆಗೆ ಸಾರಜನಕಯುಕ್ತ ರಸಗೊಬ್ಬರವನ್ನು ಸಮತೋಲನ ಪ್ರಮಾಣದಲ್ಲಿ ಬಳಸುವುದು. ಗದ್ದೆಯಲ್ಲಿ ನೀರು ನಿಲ್ಲದೆ ಬಸಿದು ಹೋಗುವಂತೆ ವ್ಯವಸ್ಥೆಮಾಡುವುದು. ಪ್ರತಿ ಲೀಟರ ನೀರಿಗೆ ೧ ಗ್ರಾಂ ಅಸಿಫೆಟ್ ೭೫ ಡಬ್ಲೂಪಿ ಅಥವಾ ೨ಮಿಲೀ. ಕ್ಲೋರ್‌ಪೈರಿಫಾಸ್ ೨೦ಇ. ಸಿ. ಕೀಟನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು ೪೦೦ ಲೀಟರ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಕಬ್ಬಿನ ಗರಿಗಳನ್ನು ದನಕರುಗಳಿಗೆ ಮೇವಾಗಿ ಬಳಸಬಾರದು.
ಗೋವಿನ ಜೋಳ: ಗೋವಿನ ಜೋಳದಲ್ಲಿ ಚುಕ್ಕೆ ಲದ್ದಿ ಹುಳು ಕಂಡುಬಂದಿದ್ದು, ನಿಯಂತ್ರಣಕ್ಕೆ ೦.೫ ಮಿಲೀ. ಸೈನೊಟೆರಾಂ ೧೧.೭ ಎಸ್. ಸಿ. ಅಥವಾ ೦.೨ ಮಿಲೀ ಕ್ಲೋಯಾರ್ಂಟ್ರಿನಿಲಿಪ್ರೊಲ್ ೧೮.೫ ಎಸ್. ಸಿ. ಪ್ರತಿ ಲೀಟರ ನೀರಿಗೆ ಬೆರಿಸಿ ಬೆಳೆಯ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಎಂದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನ್ನವರ, ವಿಷಯ ತಜ್ಞ ಬಿ. ಆಯ್. ಹೂಗಾರ, ರೈತಾರ ಉಮೇಶ ಪಾಟೀಲ, ಸದಾಶಿವ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ರೈತರು, ಕೃಷಿ ಮಿತ್ರರು ಇದ್ದರು.
ಫೋಟೋ ಶೀರ್ಷಿಕೆ :
೨೯ ಯರಗಟ್ಟಿ ೦೧
ಸತ್ತಿಗೇರಿ ಗ್ರಾಮದ ರೈತ ಉಮೇಶ ಪಾಟೀಲ ಹೊಲದಲ್ಲಿ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನ್ನವರ ರೈತರಿಗೆ ಕೀಟ ಬಾಧೆ ಮತ್ತು ರೋಗ ನಿರ್ವಹಣೆ ಮಾಹಿತಿ ನೀಡುತ್ತಿರುವುದು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ