Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರನ್ನ ಬೆಳಗಲಿಯ ಮತಗಟ್ಟೆಗಳಿಗೆ ದೇಸಿ ಚಿತ್ರಕಲೆಯ ಸಿಂಗಾರ!

ರನ್ನ ಬೆಳಗಲಿ: ಏ.೧೮: ಪಟ್ಟಣ ಪಂಚಾಯತ ಆಶ್ರಯದಲ್ಲಿ ರನ್ನ ಬೆಳಗಲಿಯ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಮತಗಟ್ಟೆಗಳಾದ ೦೧,೦೩ ಮತ್ತು ೪ನೇ ಹಾಗೂ ೨ನೇ ಮತ ಗಟ್ಟೆಯಾದ ಗ್ರಾಮ ಚಾವಡಿಯನ್ನು ಲೋಕಸಭಾ ಚುನಾವಣೆ ಪ್ರಯುಕ್ತ ವರ್ಲಿ ಆರ್ಟ್ ಅಂದರೆ ದೇಶಿಯ ಚಿತ್ರಕಲೆಯ ಮೂಲಕ ಮತದಾರರನ್ನು ವಿನೂತನವಾಗಿ ಸೆಳೆಯುವ
ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟರಾದ ದಾನಪ್ಪ ಮೂಡಲಗಿ ಅವರು ಕುಂಚದಿಂದ ಬಣ್ಣ ಹಚ್ಚುವುದರ ಮೂಲಕ ಚಾಲನೆ ನೀಡಿದರು.

ಎಂ. ಎಸ್. ಸುತಾರ ಸೆಕ್ಟರ್ ಆಫೀಸರ್ ಅವರು ಸಾರ್ವಜನಿಕರನ್ನು ಮತಗಟ್ಟೆಗಳಿಗೆ ಸೆಳೆಯುವುದರ ಜೊತೆಗೆ ಅತ್ಯಂತ ಆಕರ್ಷಕವಾಗಿ ಚುನಾವಣೆಯ ಮಹತ್ವವನ್ನು ಸಾರುವ, ಚುನಾವಣೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು, ಚುನಾವಣೆ ಘೋಷ ವಾಕ್ಯಗಳ
ಅರ್ಥವನ್ನು ತಿಳಿಸುವ, ದೇಶಿಯ ಚಿತ್ರಕಲೆಯ ಮೂಲಕ ಗೋಡೆಯ ಸಿಂಗಾರದೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವು ಅದ್ಭುತವಾಗಿ ಮೂಡಿಬಂದಿದೆ. ಈ ಒಂದು ದೇಶ ಚಿತ್ರಕಲೆಗೆ ಕೈಜೋಡಿಸಿದ ಸ್ಥಳೀಯ ಎಲ್ಲಾ ಚಿತ್ರಕಲಾ ಶಿಕ್ಷಕರಿಗೆ ಅಭಿನಂದನಾ ಮಾತುಗಳನ್ನು ಆಡುತ್ತಾ ಮತದಾನದ ಮಹತ್ವ ಕುರಿತು ಮಾತನಾಡಿದರು.

ಮಲ್ಲಿಕಾರ್ಜುನ ಅರಬಿ ಸಿ.ಆರ್.ಪಿ ಅವರು ರನ್ನ ಬೆಳಗಲಿ ಯಲ್ಲಿರುವ ಎಲ್ಲಾ ಮತಗಟ್ಟೆಗಳಿಗೆ ದೇಸಿ ಚಿತ್ರಕಲೆಯ ಮೂಲಕ ಮತದಾನದ ಜಾಗೃತಿ ಮೂಡಿಸುವುದರ ಜೊತೆಗೆ ವಿಶೇಷವಾಗಿ ಮಾತೆಯರ ಮತದಾನ ಕೇಂದ್ರಗಳಿಗೆ ಪಿಂಕ್ ಮತಗಟ್ಟೆಯೆಂದು ಕರೆಯುವುದರೊಂದಿಗೆ ಗುಲಾಬಿ ಬಣ್ಣದೊಂದಿಗೆ ಮತಗಟ್ಟೆ ಅಲಂಕರಸಿ, ಹೆಣ್ಣು ಮಕ್ಕಳ ಮತದಾನದ ಜಾಗೃತಿ ಮೂಡಿಸುವ
ಉದ್ದೇಶದಿಂದ ಮತದಾನದ ಮಹತ್ವವನ್ನು ಸಾರುವ ಗೋಡೆ ಬರಹದೊಂದಿಗೆ ದೇಶಿ ಚಿತ್ರಕಲೆಯ ಜೊತೆಗೆ ಸಿಂಗರಿಸಲು, ಸಕಲ ಸಿದ್ಧತೆ ನಡೆದಿದೆ. ಈ ಒಂದು ದೇಶ ಚಿತ್ರಕಲೆಯನ್ನು ಮಕ್ಕಳಲ್ಲಿ ಕೂಡ ಕರಗತ ಮಾಡಿಸಬೇಕೆಂದು ಶಿಕ್ಷಕರಲ್ಲಿ ವಿನಂತಿಸುತ್ತಾ ತಮ್ಮ ವಿಚಾರವನ್ನು ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಎಂ.ಪಾಟೀಲ, ಕೆ.ಜಿ.ಎಸ್ ಮುಖ್ಯೋಪಾಧ್ಯರಾದ ಎಸ್. ಎಲ್. ಕಠಾರಿ, ಚಿತ್ರಕಲಾ ಶಿಕ್ಷಕರಾದ ಬಿ.ಪಿ ಚೋಪಡೆ, ಆರ್. ಜಿ. ಕೊಣ್ಣೂರ, ಎಸ್. ಎಮ್. ವಿರಕ್ತಮಠ ಸಂಗೀತ ಶಿಕ್ಷಕಿಯರಾದ ಜೆ.ಎಸ್.ಮಾಳಗಿ ಇಂಗ್ಲಿಷ್ ಶಿಕ್ಷಕಿಯರಾದ ಎಸ್.ಎಂ. ಹಾರೂಗೇರಿ, ಪತ್ರಕರ್ತರಾದ ರಾಘವೇಂದ್ರ ನೀಲಣ್ಣವರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ