Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ಲಾಸ್ಟಿಕ ಮುಕ್ತ ಜೀವನ ಶೈಲಿ ಅಲವಡಿಸಕೊಳ್ಳಿ: ಸದಾಶಿವ ಮಕ್ಕೋಜಿ

ಮರಕುಂಬಿ: ಸಮೀಪದ ಇನಾಮದಾರ ಶುಗರ್ಸ ಲಿ, ಹಿರೇಕೊಪ್ಪ ಮರಕುಂಬಿ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಪ್ರಸಕ್ತ ಸಾಲಿನ ಜಾಗತಿಕ ಧ್ಯೇಯವಾಕ್ಯವಾದ "ಪ್ರಕೃತಿಯಿಂದ ಪ್ರೇರಣೆ – ಹವಾಮಾನಕ್ಕಾಗಿ, ನಮ್ಮ ಭದ್ರ ಭವಿಷ್ಯಕ್ಕಾಗಿ" (Inspired by Nature. For Climate. For Our Future) ಎಂಬ ವಿಷಯದ ಅಡಿಯಲ್ಲಿ ಪ್ರಕೃತಿಯ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗದೆ, ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು ಎಂಬ ಆಶಯದೊಂದಿಗೆ ಆಚರಣೆ ಮಾಡಲಾಯಿತು.
ಸಸಿ ನೆಡುವ ಮೂಲಕ ಹಸಿರು ಸಂಕಲ್ಪ
ಕಾರ್ಖಾನೆಯ ಆವರಣದಲ್ಲಿ ವಿವಿಧ ತರನಾದ ಪರಿಸರಕ್ಕೆ ಅನಕೂಲಕರವಾದ ಸಸಿಗಳನ್ನು ನೆಡುವ ಮೂಲಕ ಹಸಿರು ಸಂಕಲ್ಪದೊಂದಿಗೆ ಎಲ್ಲ ಕಾರ್ಖಾನೆಯ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಮತ್ತು ಕಾರ್ಮಿಕರು ಪ್ರತಿಜ್ಞೆಯನ್ನು ತೆಗದುಕೊಂಡರು.
*ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಕರೆ*
ಇನಾಮದಾರ ಶುಗರ್ಸ ಲಿ, ಹಿರೇಕೊಪ್ಪ ಮರಕುಂಬಿ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೈಲಹೊಂಗಲ ತಹಶಿಲ್ದಾರಾದ  ಸದಾಶಿವ ಮಕ್ಕೋಜಿ ಅವರು ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ಜಾಗತಿಕ ತಾಪಮಾನ ಹಾಗೂ ಪ್ಲಾಸ್ಟಿಕ್ ಬಳಕೆಯಿಂದಾಗಿ ಭೂಮಿಯ ಹವಾಮಾನ ತೀವ್ರವಾಗಿ ಏರುಪೇರಾಗುತ್ತಿದೆ. ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಕನಿಷ್ಠ ಈ ವರ್ಷದಲ್ಲಿ 10 ಸಸಿಗಳನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡಬೇಕು ಮತ್ತು ಏಕಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೋಡಿಸಬೇಕು" ಎಂದು ಹೇಳುತ್ತಾ ಪ್ಲಾಸ್ಟಿಕ ಮುಕ್ತ ಸಮಾಜವನ್ನು ಮಾಡಲು ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕರೆ ಇತ್ತರು ಹಾಗೂ ಮುಂದುವರೆದು ಕಾರ್ಖಾನೆಯಿಂದ ಅಳವಡಿಸಿಕೊಂಡ ಮಾಲಿನ್ಯ ನಿಯಂತ್ರಣ ಕ್ರಮಗಳ ಕುರಿತು ಮೆಚ್ಚಿಗೆ ಸೂಚಿಸಿ ಅತಿ ಕಡಿಮೆ ಅವಧಿಯಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿ ಸುತ್ತಮುತ್ತಲಿನ ರೈತ ಭಾಂದವರಿಗೆ ಕಾಮಧೆನು ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಕಾರಖಾನೆಯಿಂದ ಇನ್ನೂ ಹೆಚ್ಚಿಗೆ ರೈತಭಾಂದವರಿಗೆ ಹಾಗೂ ಕಾರ್ಮಿಕರಿಗೆ ಅನಕೂಲವಾಗಲೆಂದು ಸೂಚಿಸಿದರು
ಸದರಿ ಕಾರ್ಯಕ್ರಮ ಉದ್ದೇಶಿಸಿ  ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿಗಳಾದ  ರವೀಂದ್ರ ಚ ಪಟ್ಟಣಶೆಟ್ಟಿಯವರು ಕಾರ್ಮಿಕರು ಸಿಬ್ಬಂದಿ ವರ್ಗದವರು ಹಾಗೂ ರೈತ ಬಾಂಧವರನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಖಾನೆ ಆಡಳಿತ ಮಂಡಳಿಯ ಹಾಗೂ ಎಲ್ಲ ಕಾರ್ಮಿಕರು ವಿಶೇಷ ಶ್ರಮದಿಂದ ಅತಿ ಕಡಿಮೆ ಅವಧಿಯಲ್ಲಿ ಕಾರ್ಖಾನೆ ಪ್ರಾರಂಭಿಸಿ ಸುತ್ತಮುತ್ತಲಿನ ರೈತ ಬಾಂಧವರಿಗೆ ನಿಗದಿತ ಸಮಯದಲ್ಲಿ ರೈತ ಬಾಂಧವರಿಂದ ಕಬ್ಬು ಕಳಿಸಲು ಅನುಕೂಲ ಮಾಡಿಕೊಡಲಾಗಿದ್ದು ಹಾಗೂ ಯೋಗ್ಯ ಬೆಲೆಯನ್ನು ನೀಡಲಾಗಿದೆ ಎಂದು ತಿಳಿಸಿದರು ಅದರಂತೆ ಕಾರ್ಖಾನೆಯಲ್ಲಿ ಉತ್ತಮ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿದ್ದು ಬರುವ ಹಂಗಾಮಿನಲ್ಲಿ ಸುಮಾರು 20 ಸಾವಿರ ಸಸಿ ನೆಡುವ ಯೋಜನನ್ನು ಮಾಡಲಾಗಿದೆ ಎಂದು ತಿಳಿಸಿದರು ಹಾಗೂ ಕಾರ್ಖಾನೆಯಿಂದ ಕೈಗೆತ್ತಿಕೊಂಡ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ವಿ ಸುಬ್ಬುರತಿನಂ ಅವರು ಮಾತನಾಡಿ ಕೇವಲ ಇವತ್ತಿನ ದಿನಕ್ಕೆ ಮಾತ್ರ ಪರಿಸರದ ಕಾಳಜಿಯನ್ನು ವಹಿಸದೆ ವರ್ಷಪೂರ್ತಿಯಾಗಿ ಪರಿಸರವನ್ನು ಕಾಪಾಡಿಕೊಂಡು ಹೋಗಬೇಕು ನಾವು ಮುಂದಿನ ಪೀಳಿಗೆಯವರಿಗೆ ಒಳ್ಳೆಯ ಪರಿಸರವನ್ನು ನೀಡಬೇಕು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ ಉಪಯೋಗಿಸಬಾರದು ಎಂದು ಹೇಳಿದರು.
ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರವೀನ ಟಾರೆ, ರಸಾಯನ ವಿಭಾಗದ ಮುಖ್ಯಸ್ಥರಾದ ಬಿನೋದಕುಮಾರ, ಇನ್ಟ್ರೂಮೆಂಟೆ ವಿಭಾಗದ ಮುಖ್ಯಸ್ಥರಾದ ಕಲ್ಮೇಶ ಶಿಂಧೆ, ರಸಾಯನ ತಜ್ಞರ ವಿನಾಯಕ ಹಣ್ಣಿಕೇರಿ, ಸೂಪರವೈಸರಾದ ಮಹಾಂತೇಶ ಬೋಗುರ ಇವರೆಲ್ಲರೂ ಪರಿಸರ ಕಾಳಜಿಯ ಬಗ್ಗೆ ಮಾತನಾಡಿದರು. 
ಈ ಕಾರ್ಯಕ್ರಮವನ್ನು ಪರಿಸರ ವಿಭಾಗದ ಮುಖ್ಯಸ್ಥರಾದ ಅಜಿತ ಚಾಟೆ ಅವರು ನಿಯೋಜಿಸಿದ್ದರು, ಈ ಕಾರ್ಯಕ್ರಮದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ಕಾರ್ಮಿಕ ವರ್ಗದವರೂ, ಗುತ್ತಿಗೆದಾರರು, ಸುತ್ತಮುತ್ತಲಿನ ರೈತಭಾಂದವರು ಮತ್ತು ಪತ್ರಿಕಾ ಮಿತ್ರರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಶೋಭೆ ತಂದರು. ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವೀರಯ್ಯಾ ವಿರಕ್ತಮಠ ಅವರು "ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು ನಮ್ಮ ದುರಾಶೆಯನ್ನಲ್ಲ” ಎಂದು ಹೇಳಿ ವಂದಿಸಿದರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಯೊಂದು ಜೀವ ಸಂಕುಲ ಪರಿಸರವನ್ನು ಅವಲಂಬಿಸಿದೆ : ಜೈವರ್ಧನ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾತಂಗಿ ಸಮಾಜದಿಂದ ವಿಶೇಷ ಪೂಜೆ, ಸರ್ಕಾರಕ್ಕೆ ಮನವಿಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಅರಣ್ಯ ನಾಶದಿಂದ ಪ್ರಕೃತಿಯ ಸಮತೋಲನ ಹಾಳಾಗುತ್ತಿದೆ : ಶ್ರೀಶೈಲ ಗುಡಮೆ ಪ್ರಕಾಶ ಕೆಳಗೇರಿ ವೇಯ್ಟ ಲಿಫ್ಟಿoಗ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ವಿಶ್ವ ಪರಿಸರ ದಿನಾಚರಣೆ: ಬಳ್ಳಾರಿಯಲ್ಲಿ 5,000 ಸಸಿ ನೆಡುವ ಕಾರ್ಯಕ್ರಮಕ್ಕೆ ಡಿಸಿ ನಾಗೇಂದ್ರ ಪ್ರಸಾದ್.ಕೆ ಚಾಲನೆಪ್ಲಾಸ್ಟಿಕ ಮುಕ್ತ ಜೀವನ ಶೈಲಿ ಅಲವಡಿಸಕೊಳ್ಳಿ: ಸದಾಶಿವ ಮಕ್ಕೋಜಿವಿಕ್ರಮಪೂರ ಶಾಲೆಯಲ್ಲಿ ಸಡಗರದ ವಿಶ್ವ ಪರಿಸರ ದಿನಾಚರಣೆ:*ಡಿಸಿಎಂ ಸ್ಥಾನಕ್ಕಾಗಿ ಮಸೀದಿ ದರ್ಗಾದಲ್ಲಿ ಪ್ರಾರ್ಥನೆ; ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದ ಸಂದೇಶ*