Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಪ್ರತಿಭಾ ಕಾರಂಜಿಯಲ್ಲಿ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ಮಿಣಜಗಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳ ಗಳಿಕೆ



ತಾಳಿಕೋಟೆ,  ಮಿಣಜಗಿ ಗ್ರಾಮದಲ್ಲಿ ನಡೆದ ಮಿಣಜಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಶ್ರೀ ಘನಮಠೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
        ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಸಜ್ಜನ ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಸಮಯ ನಿರ್ವಹಣೆ, ವೇದಿಕೆ ಭಯ ನಿವಾರಣೆ, ಸಹಕಾರದ ಗುಣ ಹಾಗೂ ಉತ್ಸಾಹದಿಂದ ಭಾಗವಹಿಸುವ ಮನೋಭಾವ ಬೆಳೆಯುತ್ತದೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಉತ್ತಮ ವೇದಿಕೆಯಾಗಿವೆ ಎಂದರು.

ಪ್ರಥಮ ಸ್ಥಾನ ಪಡೆದವರು: ದಾನೇಶ್ವರಿ ಬಡಿಗೇರ (ಪ್ರಬಂಧ), ರೇವಣಸಿದ್ದ ಮೇಲಸಕ್ರೀ ಮತ್ತು ಶರತ್ ನರಸಣಗಿ (ರಸಪ್ರಶ್ನೆ), ಚೈತ್ರಾ ಸಜ್ಜನ (ಚರ್ಚಾಸ್ಪರ್ಧೆ), ಶ್ರೇಯಾ ಪೂಜಾರಿ (ಜಾನಪದ ಗೀತೆ ಮತ್ತು ಭಾವಗೀತೆ), ಅದಿತಿ ಸಾವರದ (ಭರತನಾಟ್ಯ), ಮಂಜುನಾಥ ಸಜ್ಜನ (ಮಿಮಿಕ್ರಿ), ಕಾಶಿಂಬಿ ಬಿರಾದಾರ (ಅರೇಬಿಕ್ ಧಾರ್ಮಿಕ ಪಠಣ), ಸಾನ್ವಿ ಪಾಟೀಲ (ಭಾಷಣ).

ದ್ವಿತೀಯ ಸ್ಥಾನ ಪಡೆದವರು: ಸೃಷ್ಟಿ ಸಜ್ಜನ (ಧಾರ್ಮಿಕ ಪಠಣ), ಸುನೀತಾ ಕುಂಬಾರ (ಭಾವಗೀತೆ), ಕಾಶೀಬಾಯಿ ಹಳ್ಳೂರ (ಭರತನಾಟ್ಯ), ದಾನೇಶ್ವರಿ ಬಡಿಗೇರ ಮತ್ತು ಲಕ್ಷ್ಮೀ ಬಂಟನೂರ (ರಸಪ್ರಶ್ನೆ), ಅದಿತಿ ಸಾವರದ (ಧಾರ್ಮಿಕ ಪಠಣ), ಸೃಷ್ಟಿ ಅಸ್ಕಿ ಮತ್ತು ಸಂಗಡಿಗರು (ಜಾನಪದ ನೃತ್ಯ), ಮೊಹಮ್ಮದ್ ಆತೀಫ್ ಮತ್ತು ಸಂಗಡಿಗರು (ಕವ್ವಾಲಿ).

ತೃತೀಯ ಸ್ಥಾನ ಪಡೆದವರು: ರಾಜೇಶ್ವರಿ ಹಿರೇಮಠ (ಕವನ), ಅರ್ಚನಾ ಬಿರಾದಾರ (ಮಿಮಿಕ್ರಿ), ಭವಾನಿ ಬೋನಾಳ (ಪ್ರಬಂಧ), ಚಿನ್ಮಯಿ ಹಿರೇಮಠ (ಧಾರ್ಮಿಕ ಪಠಣ).
      ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆಗೈದು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಎಸ್.ಎಂ. ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ. ಸಜ್ಜನ, ಆರ್.ಎಸ್. ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಎನ್.ಎಂ. ಕೊಣ್ಣೂರ, ಪಿಯು ಕಾಲೇಜಿನ ಪ್ರಾಚಾರ್ಯ ಎಂ. ಮರೇಣ್ಣಾ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ಅಥಣಿ ಜೆ.ಎ. ಕಾಲೇಜಿಗೆ ದ್ವಿಪ್ರಥಮ/ ಬಾಲಕ ಮತ್ತು ಬಾಲಕಿಯರ ತಂಡ ರಾಜ್ಯಮಟ್ಟಕ್ಕೆ ಆಯ್ಕೆಸನ್ಮಾರ್ಗ ಕಾಲೇಜಿನ ಫುಟ್‌ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆನಾಗರಮಡುವು ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗೆ ಜಿಲ್ಲಾ ಹಾಗೂ ತಾಲೂಕು ಐಇಸಿ ಸಂಯೋಜಕರ ಭೇಟಿ, ಪರಿಶೀಲನೆನ.೨೨ರಂದು ಸಂಗಮ ಸಿರಿ ಪ್ರಶಸ್ತಿ ಪ್ರದಾನ ಸರ್ಕಾರ ಕೈಬಿಟ್ಟರೂ ರೈತರ ಬೆನ್ನಿಗೆ ನಿಂತ ಚಿನ್ನು ಪೂಜಾರಿ: ಕರವೇ ಮುಖಂಡ ಪ್ರಕಾಶಗೌಡ ಪಾಟೀಲ ಮೆಚ್ಚುಗೆವಿಭಾಗೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ರನ್ನರ್‌ಅಪ್ ಪ್ರಶಸ್ತಿಇಂಡಿಯ ಪತ್ರಕರ್ತ ಸದ್ದಾಂ ಹುಸೇನ್ ಜಮಾದಾರ್‌ಗೆ “ರಾಜ್ಯಮಟ್ಟದ ಸಿರಿಗನ್ನಡ ಸಾಧಕ” ಪ್ರಶಸ್ತಿ ಗರಿ! ಪಲ್ಲಕ್ಕಿ ಉತ್ಸವ, ಕುಂಭಮೇಳ, ಕಳಸಾರೋಹಣ ಹಾಗೂ ಭಂಡಾರ ತುಲಾಭಾರ ಕಾರ್ಯಕ್ರಮರಾಣಿ ಚನ್ನಮ್ಮನವರನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಲು ಕೇಂದ್ರಕ್ಕೆ ಮನವಿತಾಂಬಾ: ಮಕ್ಕಳಲ್ಲಿನ ವಿಶೇಷ ಪ್ರತಿಭೆ ಪ್ರೋತ್ಸಾಹಿಸಲು ಪಾಲಕರು, ಶಿಕ್ಷಕರ ಪಾತ್ರ ಮುಖ್ಯ - ಬಿಇಒ ಸುರೇಂದ್ರ ಕಾಂಬಳೆ