Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆಗೆ ಸಮೀತಿಗಳ ರಚನೆ : ಎಸಿ ಶ್ವೇತಾ ಬೀಡಿಕರ


ಹಸಿರು ಕ್ರಾಂತಿ ವರದಿ, ಜಮಖಂಡಿ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಶೈಕ್ಷಣಿಕ ಜಾತಿಗಣತಿಗೆ ಉಪವಿಭಾಗ ಮಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ತಾಲೂಕು ಮಟ್ಟದ ಸಮೀತಿಗಳನ್ನು ರಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಿಭಾಗ ವ್ಯಾಪ್ತಿಯ ಜಮಖಂಡಿ, ರಬಕವಿ ಬನಹಟ್ಟಿ. ಮುಧೋಳ ಹಾಗೂ ಬೀಳಗಿ ತಾಲೂಕುಗಳಲ್ಲಿ ಸಮೀತಿಗಳನ್ನು ರಚಿಸಲಾಗಿದೆ. ೧೫೦ ಮನೆಗಳಿಗೆ ಒಬ್ಬರಂತೆ ಪ್ರಾಥಮಿಕ ಶಾಲಾಶಿಕ್ಷಕರನ್ನು ಸಮೀಕ್ಷಾ ದಾರರನ್ನಾಗಿ ನಿಯಮಿಸಲಾಗಿದೆ.  ಮುಧೋಳ ತಾಲೂಕಿನಲ್ಲಿ ೫೯೦ ಸಮೀಕ್ಷಾದಾರರ ಅವಶ್ಯಕತೆ ಇದೆ. ಆಮಖಂಡಿ, ಹಾಗೂ ರಬಕವಿ ಬನಹಟ್ಟಿ ಎರಡು ತಾಲೂಕು ಸೇರಿಸಿ ೮೪೦ ಮತ್ತು ಬೀಳಗಿಯಲ್ಲಿ ೨೪೩ ಸಮೀಕ್ಷಾದಾರರು ಬೇಕಾಗುತ್ತದೆ. ೪೫ ಮಾಷ್ಟರ್ ಟ್ರೇನರ್‌ಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಸ್ಥಳೀಯ ಸಮೀಕ್ಷಾದಾರರಿಗೂ ನಿನ್ನೆಯ ವರೆಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.


ಉಪವಿಭಾಗದಲ್ಲಿ ೩೦೦೦ ಗಣತಿದಾರರು ಕಾರ್ಯನಿರ್ವಹಿಸಲಿದ್ದಾರೆ. ಇಡಿಸಿಎಸ್ ಕಂಪನಿಯಿAದ ಸಿದ್ಧಪಡಿಸಿದ ತಂತ್ರಾAಶದ ಸಹಾಯ ದಿಂದ ಗಣತಿ ಕಾರ್ಯ ನಡೆಯಲಿದೆ.  ಸೆ.೨೨ ರಿಂದ ಗಣತಿ ಕಾರ್ಯ ಪ್ರಾರಂಭವಾಗಲಿದೆ. ೧೫ ದಿನಗಳವರೆಗೆ ಗಣತಿ ಕಾರ್ಯನಡೆಯಲಿದ್ದು ನಂತರ ದತ್ತಾಂಶವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕು ಇದು ಜಾತಿ ಗಣತಿ ಅಲ್ಲ ಸಾಮಾಜಿಕ ಶೈಕ್ಷಣಿಕ ಗಣತಿಯಾಗಿದ್ದು ಇದರಿಂದ ಮಟ್ಟ ಗುರುತಿಸಲು ಸಹಕಾರಿ ಯಾಗಲಿದೆ. ಯಾವ ಕ್ಷೇತ್ರಗಳಲ್ಲಿ ಯಾವ ಅಭಿವೃದ್ಧಿ ಮಾಡಬೇಕು ಎಂಬುದು ಗೊತ್ತಾಗಲಿದೆ. ಒಂದು ಮನೆಗೆ ಗಣತಿದಾರರು ಭೇಟಿ ನೀಡಿದಾಗ ೬೦ ಪ್ರಶ್ನೆಗಳನ್ನು ಕೇಳುತ್ತಾರೆ. ಸಾರ್ವಜನಿಕರೆಲ್ಲರೂ ತಮಗೆ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಬೇಕು, ಯಾವುದೇ ಹಿಂಜರಿಕೆ ಪಡುವ ಅವಶ್ಯಕತೆಇಲ್ಲ ವಾಸ್ತವ ಅಂಶಗಳನ್ನು ಉತ್ತರಿಸುವದರಿಂದ ಸರ್ಕಾರಕ್ಕೆ ಖಚಿತವಾದ ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.


ಕೆಇಬಿಯವರು ನೀಡಿರುವ ಆರ್‌ಆರ್ ಕೊಡ್‌ನಿಂದ ಮನೆಯ ಮಾಹಿತಿ ದೊರೆಯುತ್ತದೆ. ಹೊರತು ಅದರಿಂದ ವಿದ್ಯುತ್ ಬಿಲ್ ಬರುವದಿಲ್ಲ ಆದ್ದರಿಂದ ಸಾರ್ವಜನಿಕರು ಚೀಟಿಗಳನ್ನು ಕಿತ್ತಿಹಾಕುವ ಅವಶ್ಯಕತೆ ಇರುವದಿಲ್ಲ. ಗಾಬರಿ ಪಡಬೇಕಿಲ್ಲ ಎಂದು ಹೇಳಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ