Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏ. ೩೦ ರಿಂದ ಚಿಕ್ಕಮಣೂರ  ಗ್ರಾಮದ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಇಂಡಿ ತಾಲೂಕಿನ ಚಿಕ್ಕಮಣೂರ  ಗ್ರಾಮದ ಭೀಮಾ ನದಿ ಮಧ್ಯದಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಏ. ೩೦ ರಿಂದ ಸಂಬ್ರಮದಿಂದ ಜರುಗಿತು.
೩೦ ರಂದು ಗುರುವಾರ ಯಲ್ಲಮ್ಮ ದೇವಿಗೆ ಬಾಸಿಂಗ ಮೆರವಣೆಗೆ ವಿವಿಧ ವಾದ್ಯ ವೈಭವಗಳೊಂದಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ೯ ಗಂಟೆಗೆ ದೇವಿಯು ಮಂದಿರಕ್ಕೆ ಆಗಮಿಸಿದಳು. ರಾತ್ರಿ  ೧೦.೩೦ ಕ್ಕೆ ಪ್ರೇಮಾ ಅಫಝಲಪೂರ ಹಾಗೂ ಸಂಗಡಿಗರಿಂದ ಚೌಡಕಿ ಆಟ ಹಾಗೂ ಚೌಡಕಿ  ಪದಗಳು ಜರುಗಿದವು. 
ಮೇ ೧ ರಂದು  ಶುಕ್ರವಾರ ಆಗಿ ಹುಣ್ಣಿಮೆಯಂದು ಬೆಳಗ್ಗೆ ೫ ಗಂಟೆಗೆ ಡಾ. ಶಂಬುಲಿಂಗ ಶ್ರೀಗಳಿಂದ   ಪಡಸಾವಳಗಿ ಮತ್ತು ಉದಗಿರಮಠ ಇವರಿಂದ ದೇವಿಯ ರುದ್ರಾಭಿಷೇಕ ಜರುಗಿತು. ೭ ಗಂಟೆಗೆ ದೇವಿಗೆ ವಸ್ತ್ರಾಭರಣ, ೯ ಗಂಟೆಗೆ ದೇವಿಗೆ ನೈವೆಧ್ಯ, ಸಾಯಂಕಾಲ ೪ ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣೆಗೆ ನವಿಲು ಕುಣಿತ ಕರಡಿ ಕುಣಿತ ಕುದರೆ ಕುಣಿತ ಗೊಂಬೆ ಕುಣಿತ ಡೊಳ್ಳಿನ ವಾಲಗ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಭೀಮಾ ನದಿಯಲ್ಲಿರುವ ದೇವಿಯ ಮಂದಿರಕ್ಕೆ ತಲುಪಿತು. ೫ ಗಂಟೆಗೆ ಬಾಸಿಂಗ ಮೆರವಣೆಗೆ ದೇವಿಯ ಪಲ್ಲಕ್ಕಿ  ಸ್ವಾಗತಿಸುವದು ೭ ಗಂಟೆಯಿಂದ ೯ ರ ವರೆಗೆ ಮದ್ದು ಸುಡುವದು  ನಂತರ ಪಲ್ಲಕ್ಕಿ ಮೆರವಣೆಗೆ ಗ್ರಾಮದಲ್ಲಿರುವ ದೇವಿಯ  ಮಂದಿರಕ್ಕೆ ಆಗಮಿಸಿತು. ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಕುರಿಗಳ ಭವ್ಯ ಜಾತ್ರೆ ನಡೆಯಿತು.
  ಮೇ ೨ ರಂದು ಬೆಳಗ್ಗೆ ೯ ಗಂಟೆಗೆ  ವಿದ್ಯಾಶ್ರೀ ಮಸಬಿನಾಳ ಹರದೇಶ ನಾಗೇಶ  ಹಾಗೂ ಮುಕ್ತುಮಸಾಬ ಸೊನ್ನಾಳ ಅವರಿಂದ  ಗೀ ಗೀ ಪದಗಳು ಜರುಗುವವು. ಸಾಯಂಕಾಲ ೫ ಗಂಟೆಯಿಂದ  ೭ ಗಂಟೆಯ ವರೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ  ಕುಸ್ತಿಗಳು ನಡೆದವು.

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST