ಯರಗಟ್ಟಿ,ಜು,೦೧ : ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಹೋರಿಗಳನ್ನು ಸಿಂಗರಿಸಿ ಕರಿ ಬಿಡುವ ಮೂಲಕ ರೈತರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕಿನ ತಲ್ಲೂರ ಗ್ರಾಮದ ದೇಸಾಯಿ ಮನೆತನದ ಎತ್ತುಗಳಿಗೆ ಪೂಜೆ ಸಲ್ಲಿಸಿ ಬಜಾರ ರಸ್ತೆ ಮೂಲಕ ಎತ್ತುಗಳನ್ನು ವಿವಿಧ ಬಣ್ಣ ಹಸಿರು ತೋರಣಗಳಿಂದ ಅಲಂಕಾರ ಮಾಡಿ ವಾಧ್ಯಮೇಳದೊಂದಿಗೆ ಮೆರವಣಿಗೆ ಮಾಡಿದರು. ಅಗಸಿ ಬಾಗಿಲದಿಂದ ದೇಸಾಯಿಯವರ ವಾಡೆಯವರೆಗೆ ಜೊಡೆತ್ತುಗಳನ್ನು ಕರಿ ಹರಿದು ಓಡಿಸಲಾಯಿತು.
ಎತ್ತುಗಳ ಓಟ ವೀಕ್ಷಿಸಲು ಜನರು ನೆರದಿದ್ದರು. ಸುತ್ತಮುತ್ತಲಿನ ಮನೆಗಳ ಮತ್ತು ಅಂಗಡಿಗಳ ಮೇಲ್ಛಾವಣಿಯ ಮೇಲೆ ನಿಂತು ರೈತರು ಹಾಗೂ ಗ್ರಾಮದ ಜನರು ಎತ್ತುಗಳ ಓಟ ವೀಕ್ಷಿಸಿದರು. ಮಹಿಳೆಯರು ಕೂಡ ವಟ ಸಾವಿತ್ರಿ ಪೂಜೆ ಮಾಡುವ ಮೂಲಕ ಭಕ್ತಿ ಭಾವ ಮೆರೆದರು.
ಮುಖಂಡ ವಿಕ್ರಮಕುಮಾರ ದೇಸಾಯಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಅನಿಲಕುಮಾರ ದೇಸಾಯಿ, ಮಲ್ಲಿಕಾರ್ಜುನ ಅಣ್ಣಿಗೇರಿ, ಬಸವರಾಜ ಕಾಜಗಾರ, ಹನಮಂತ ಬೊಸಲೆ, ಬಸವರಾಜ ಈಟಿ, ಬಸವರಾಜ ಭೋವಿ, ಪ್ರವೀಣ ಕುಲಮಗೇರಿ, ಶಿವಾಜಿ ಇಂಗಳೆ, ಮಲ್ಲಿಕಾರ್ಜುನ ಉಗರಗೊಳ, ಅಶೋಕ ದುಂಡನಕೊಪ್ಪ, ಬಸವರಾಜ ಬೆನಕಟ್ಟಿ, ಕಾಂತಪ್ಪ ಲಕ್ಕನ್ನವರ ಸೇರಿದಂತೆ ರೈತರು ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.