ನೇಸರಗಿ. ಸಮೀಪದ ವನ್ನೂರ ಗ್ರಾಮದ ಶ್ರೀ ಸಂಕಲ್ಪ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಕಲಾ ತಂಡದ ಸದಸ್ಯರ ನಡೆಸಿಕೊಡುವ ನಾಟಕ ಕಾರ್ಯಕ್ರಮವನ್ನು ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಕಲಾ ತಂಡದವರಿಂದ ಸ್ವಚ್ಚತೆ ,ಪರಿಸರ ರಕ್ಷಣೆ ,ಶಿಕ್ಷಣದ ಬಗ್ಗೆ ,ಹೆಣ್ಣು ಗಂಡು ತಾರತಮ್ಯ ,ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನ ದೀಪ ಶಿಕ್ಷಕರ ವದಗನೆ ,ವಾತ್ಸಲ್ಯ ಕಾರ್ಯಕ್ರಮ, ವರದಕ್ಷಿಣೆ ಕಿರುಕುಳ ಮುಂತಾದ ಯೋಜನೆಯ ಹಲವಾರು ಕಾರ್ಯ ಕ್ರಮಗಳ ಬಗ್ಗೆ ಬಾಲ್ಯ ವಿವಾಹ,ಹಾಗೂ ಶೌಚಾಲಯ ಬಳಕೆ ಬಗ್ಗೆ ನಾಟಕದ ಮುಖಾಂತರ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ಮಂಜುಳಾ ಪಾಟೀಲ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಈರಪ್ಪ ದೇಮಟ್ಟಿ,
ಸರಕಾರಿ ವೈದ್ಯಾಧಿಕಾರಿಗಳಾದ ಎಂ ಎನ್ ಫಿರಜಾದೆ,ತಾಲೂಕಿನ ಜ್ಞಾನವಿಕಾಸ ಸಮನ್ವದಿಕಾರಿ ಶ್ರೀಮತಿ ಶೈಲಾ ಜೆಕ್ಕಣ್ಣವರ,
ವಲಯದ ಮೇಲ್ವಿಚಾರಕರಾದ ಪರಶುರಾಮ, ಕಲಾ ತಂಡದ ಅಧ್ಯಕ್ಷರಾದ ಎಸ್ ಎಸ್ ಹಿರೇಮಠ ,,,ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಕಲಾ ತಂಡದ ಸದಸ್ಯರು ,ಸೇವಾ ಪ್ರತಿನಿಧಿ ಆಶಾ ಸತ್ಯಮ್ಮ ,ವಿ ಎಲ್ ಇ ಮೀನಾಕ್ಷಿ ಹಾಗೂ ಕೇಂದ್ರದ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
