Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೇಕಡಾ ಒಂದು ಮೀಸಲಾತಿ ನೀಡಿ ಇಲ್ಲವೇ ಬಿಕ್ಷಾಟನೆಗೆ ಅನುಮತಿ ನೀಡಿ : ಅಲೆಮಾರಿ ಒಕ್ಕೂಟ 

 ಬಳ್ಳಾರಿ :01. ಒಳ ಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಿವೃತ್ತಿ ನ್ಯಾಯಮೂರ್ತಿ ನಾಗಮೋಹನ್ ದಾಸ್  ಅವರ ಏಕ ಸದಸ್ಯ ಆಯೋಗವನ್ನು ರಚಿಸಿತು, ನಾಗಮೋಹನ್ ದಾಸ್ ಅಲೆಮಾರಿ ಜನಾಂಗಕ್ಕೆ ಶೇಕಡ ಒಂದು ಮೀಸಲಾತಿಯನ್ನು ನೀಡುವಂತೆ  ಸರ್ಕಾರಕ್ಕೆ  ವೈಜ್ಞಾನಿಕ ವರದಿಯನ್ನು ಸಹ ಸಲ್ಲಿಸಿದರು. ಆದರೆ ಸರ್ಕಾರ ಆಗಸ್ಟ್ 19ರಂದು ಸಭೆಯನ್ನು ನಡೆಸಿ ಅಲೆಮಾರಿ ಸಮುದಾಯವನ್ನು ಎ ಗ್ರೂಪ್ ನಿಂದ ಹೊರಗಿಡಲು ತೀರ್ಮಾನಿಸಿದ್ದಾರೆ ಇದರಿಂದ ಸಮಾಜದಲ್ಲಿ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಅಲೆಮಾರಿ ಜನಾಂಗಕ್ಕೆ ಅನ್ಯಾಯ ಮಾಡಿದರು, ಸರ್ಕಾರದ ಈ ಕ್ರಮವನ್ನು ಖಂಡಿಸಿ ಸೆಪ್ಟೆಂಬರ್ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸುಮಾರು 20 ಸಾವಿರ ಅಲೆಮಾರಿ ಜನರೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾವಕ್ಕೂಟದ ಮುಖಂಡ ಹಾಗೂ ಅಲೆಮಾರಿ ಅರೆ ಅಲೆಮಾರಿ ಸಂಘಟನೆಗಳ ಅಧ್ಯಕ್ಷ ವೈ ಶಿವಕುಮಾರ್ ತಿಳಿಸಿದರು.

 ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳೇ ನೀವು ಅಹಿಂದಪರ   ದಲಿತರ ಪರ ಎಂದು ಎಲ್ಲಾ ಸಭೆಗಳನ್ನು ಹೇಳುತ್ತೀರಿ  ಸಮಾಜದ ಅತ್ಯಂತ ಕಟ್ಟಕಡೆಯ ಜಾತಿಯಾದ ಅಲಮಾರಿ ಸಮುದಾಯಕ್ಕೆ ಅನ್ಯಾಯವನ್ನು ಮಾಡಿದ್ದೀರಿ ಕೂಡಲೇ ನಮಗೆ ಶೇಕಡ ಒಂದು ಮೀಸಲಾತಿಯನ್ನು ನೀಡಿ ಇಲ್ಲವೇ ನಮ್ಮ ಜನಾಂಗಕ್ಕೆ ಬಿಕ್ಷಾಟನೆಗೆ ಅನುಮತಿ ನೀಡಿ, ನಮ್ಮ ಸಮುದಾಯದ ಮತ ಬೇಕು ನಮ್ಮ ಹಿತ ಬೇಡವೇ  ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

 ಅಲೆಮಾರಿ ಜನಾಂಗವನ್ನು ಗ್ರೂಪ್ ಸಿ ನಿಂದ ಹೊರಗಿಟ್ಟು ಎ ಗ್ರೂಪ್ ನಲ್ಲಿ ಸೇರಿಸಿ, ನಮಗೆ ಭೋವಿ ಲಂಬಾಣಿ ಜನಾಂಗದ ಜೊತೆ ಹೋರಾಡಲು ಆಗುವುದಿಲ್ಲ ನಮ್ಮನ್ನು ಈ ಗ್ರೂಪ್ನಲ್ಲಿ ಸೇರಿಸಿ ಜಗಳ ಒಂದನ್ನು ಮೀಸಲಾತಿ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

 ಪ್ರಜಾ ಪರಿವರ್ತನಾ ವೇದಿಕೆಯ ಅನಂದ್ ಕುಮಾರ್ ಸಿ ಮಾತನಾಡಿ, ಸರಿಯಾದ ಸೂರು ಆಹಾರವಿಲ್ಲದೆ ಅಲೆಮಾರಿಗಳು ಊರೂರು ತಿರುಗಿ ತಮ್ಮ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ, ಇವರಿಗೆ ಒಳ ಮೀಸಲಾತಿಯಲ್ಲಿ ಶೇಕಡ ಒಂದರಷ್ಟು ಮೀಸಲಾತಿಯನ್ನು ನೀಡಲೇಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

 ಫ್ರೀಡಂ ಪಾರ್ಕ್ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯಿಂದ 3000 ಜನ ಭಾಗಿಯಾಗುವ ನಿರೀಕ್ಷೆ ಇದೆ  ಸೆಪ್ಟೆಂಬರ್ 4ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅಲೆಮಾರಿ ಸಮುದಾಯಗಳ ಮೀಸಲಾತಿ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ