Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶೇಷಚೇತನ ವೈದ್ಯಕೀಯ ವಿದ್ಯಾರ್ಥಿನಿ ಈಗ ಚಿನ್ನದ ಹುಡುಗಿ

ಬೆಳಗಾವಿ, ಅ. 28: ಅಂಗವೈಕಲ್ಯ ಒಂದು ಸಾಮಾಜಿಕ ಪಿಡುಗು ಎಂದು ಗೊಣಗುತ್ತಿರುವವರಿಗೆ ನಾನೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತನ್ನ ವಿಶೇಷ ಶಕ್ತಿಯಿಂದ ತೋರಿಸಿ ಎಲ್ಲ ವಿಕಲಚೇತನ ಮಕ್ಕಳಿಗೆ ಮಾದರಿಯಾದ ಬಿಮ್ಸ್ ಸಂಸ್ಥೆಯ ಹೆಮ್ಮೆಯ ವೈದ್ಯಕೀಯ ವಿದ್ಯಾರ್ಥಿನಿಯೇ ಕುಮಾರಿ ಪಂಕಜಾ ರೇವಣಕರ. ಇವಳು ದ್ವಿತಿಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಇವಳಿಗೆ ಬಲಗಾಲಿನಲ್ಲಿ ನಡೆಯಲು ಆಗದೇ ಇರುವ ಸ್ಥಿತಿಯಿಂದ ಸ್ಪ್ಲೆ‌ಂಟ್ ಸಹಾಯದಿಂದ ನಡೆಯುತ್ತಾಳೆ. ತನ್ನ ಎಲ್ಲ ನಿತ್ಯ ಚಟುವಟಿಕೆಗಳನ್ನು ಎಡಗಾಲಿನಿಂದ ಮಾತ್ರ ಮಾಡುತ್ತಾಳೆ. ಕೈ ಇದ್ದರೂ ಒಂದು ಕೈ ಸ್ವಾದೀನದಲ್ಲಿ ಇಲ್ಲ. ಕೇವಲ ಒಂದು ಕೈಯಿಂದ ಮಾತ್ರ ತನ್ನ ಇನ್ನೀತರ ಕೆಲಸಗಳನ್ನ ನಿರ್ವಹಿಸುತ್ತಾಳೆ. ಅಂಗವಿಕಲರ ಬಗ್ಗೆ ಅನುಕಂಪ ಬೇಡ ಅವಕಾಶ ಕೊಡಿ ಎಂದು ದಿಟ್ಟವಾಗಿ ಮಾತನಾಡುತ್ತಾಳೆ.

ಇತ್ತೀಚಿಗೆ ಬಿಮ್ಸ್ ಸಂಸ್ಥೆಯ ಗಣಪತಿ ಉತ್ಸವದ ಸಾಂಸಕೃತಿಕ ಕಾರ್ಯಕ್ರಮದಲ್ಲಿ, ಶಾರೀರಕವಾಗಿ ಎಲ್ಲ ಅವಯವಗಳೊಂದಿಗೆ ಸದೃಢವಾಗಿರುವ ಗೆಳತಿಯೊಂದಿಗೆ ಭರತ ನಾಟ್ಯವನ್ನು ಸರಿಸಮಾನಾಗಿ ಮಾಡಿ ಇಡೀ ಸಂಸ್ಥೆಯ ಎಲ್ಲ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಕೇವಲ ಒಂದು ಕಾಲಿನಿಂದ ಹಾಗೂ ಒಂದು ಕೈಯಿಂದ ಯಾರಿಗೂ ಕಡಿಮೆ ಇಲ್ಲದಂತೆ ನಮ್ಮ ನಾಡಿನ ಹೆಮ್ಮೆಯ ನಾಟ್ಯವನ್ನು ಮಾಡಿ ತನ್ನ ಕಲೆಯನ್ನು ಇಡೀ ಬಿಮ್ಸ್ ಸಂಸ್ಥೆಗೆ ಪ್ರದರ್ಶಿಸಿ ಎಲ್ಲ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಳು.

ಈ ವಿಶೇಷಚೇತನ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಈಜು ಕ್ರೀಡೆಯಲ್ಲಿ ಅದ್ಭುತ ಸಾಧಕಿಯಾಗಿದ್ದಾಳೆ. ಈ ಸಾಧನೆ ಬಿಮ್ಸ್ ಸಂಸ್ಥೆಗೆ ಮತ್ತೊಂದು ಗರಿ ಮೂಡಿಸಿದೆ. ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನ ಮೂರು ವಿಭಾಗಗಳಲ್ಲಿ ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಪಡೆದ ಬಿಮ್ಸ್ ಸಂಸ್ಥೆಯ ಹೆಮ್ಮೆಯ ಚಿನ್ನದ ಹುಡುಗಿ. ಇತ್ತೀಚಿಗೆ ಗೋವಾದಲ್ಲಿ ಜರುಗಿದ ರಾಷ್ಟç ಮಟ್ಟದ ಭಾರತದ ಪ್ಯಾರಾ ಓಲಂಪಿಕ್ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಒಟ್ಟು ಮೂರು ವಿಭಾಗಗಳಲ್ಲಿ ಭಾಗವಹಿಸಿ ಮೂರೂ ವಿಭಾಗಗಳಲ್ಲಿ ಪದಕಗಳನ್ನು ಪಡೆದ ಹೆಮ್ಮೆ ಇವಳದು.

ತಂದೆ ಖಾಸಗಿಯಾಗಿ ಕೆಲಸ ಮಾಡುತ್ತಾರೆ. ತಾಯಿ ಶಿಕ್ಷಕರು. ಇಬ್ಬರೂ ಈ ಮಗುವಿನ ಸಾಧನೆಯನ್ನು ನೋಡಿ ಭಾವುಕರಾಗುತ್ತಾರೆ. ಅವಳು ಜನ್ಮಜಾತ ಅಂಗವಿಕಲೆಯಾಗಿರಬಹುದು. ಆದರೆ ನಮ್ಮ ಮನೆಯ ಮಾಣಿಕ್ಯವೆಂದು ಮಗಳ ಸಾಧನೆಯನ್ನು ಕಂಡು ತಂದೆ ತಾಯಿ ಪುಳಕಿತರಾಗುತ್ತಾರೆ. ಮಗಳು ಅಂಗವಿಕಲೆಯಾಗಿ ಹುಟ್ಟಿದಳು ಎಂಬ ದುಃಖವಿಲ್ಲ; ಬದಲಾಗಿ ಅವಳ ಕಾರ್ಯವೈಖರಿ ನೋಡಿ ನಮಗೆ ಹೆಮ್ಮೆಯುಂಟಾಗುತ್ತದೆ ಎಂದು ಮಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾರೆ.

ಅವಳ ಈ ಅದ್ಭುತ ಸಾಧನೆ ಬಿಮ್ಸ್ ಸಂಸ್ಥೆಗೆ ಹೆಮ್ಮೆ ತಂದಿದೆ. ಎಲ್ಲ ವಿದ್ಯಾರ್ಥಿನಿಯರಿಗೆ ಪಂಕಜಾ ಮಾದರಿಯಾಗಿದ್ದಾಳೆ. ಅವಳನ್ನು ನೋಡಿ ಉಳಿದ ವಿದ್ಯಾರ್ಥಿನಿಯರು ಕಲಿಯುವುದು ಬಹಳಷ್ಟಿದೆ ಎಂದು ಬಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಹೇಳಿ ಅಭಿನಂದಿಸಿದರು. ಅವಳ ಈ ಸಾಧನೆಗೆ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಹಪಾಠಿಗಳು ಹರ್ಷವನ್ನು ವ್ಯಕ್ತಪಡಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ