Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಪರಿಸರದಿಂದ ಅತ್ಯುತ್ತಮ ಜೀವನ ಸಾಧ್ಯ: ಶಿವಲಿಂಗ ಸಿದ್ನಾಳ

ಮಹಾಲಿಂಗಪುರ: ನಮ್ಮ ಸುತ್ತಲಿನ ಪರಿಸರ ಉತ್ತಮವಾಗಿದ್ದರೆ ಜೀವನ ಕೂಡ ಅತ್ಯುತ್ತಮವಾಗಿರುತ್ತದೆ ಎಂದು ಮಹಾಲಿಂಗಪುರ ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಜೀವನದ ಮೇಲೆ ಸುತ್ತಲಿನ ನೈಸರ್ಗಿಕ ಪರಿಸರ ಮತ್ತು ಸಾಮಾಜಿಕ ಪರಿಸರ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಮಕ್ಕಳು ಗಿಡ ಮರ ಬೆಳೆಸಿ, ನದಿ ತೊರೆ ಉಳಿಸುವ ಮೂಲಕ ನೈಸರ್ಗಿಕ ಪರಿಸರವನ್ನು ಹಾಗೂ ಉತ್ತಮರ ಸ್ನೇಹ, ಸಹವಾಸ ಮಾಡುವ ಮೂಲಕ ಸಾಮಾಜಿಕ ಪರಿಸರ ಉತ್ತಮವಾಗಿರಿಸಿಕೊಳ್ಳಬೇಕು ಎಂದರು.
ಹಿರಿಯ ಶಿಕ್ಷಕ ವಿ.ಡಿ.ಬಂಡಿ ಮಾತನಾಡಿ, ತೋಟದ ಶಾಲೆಯಾದರೂ ಯಾವುದೇ ಕೊರತೆ ಇಲ್ಲದಂತೆ ಕಂಗೊಳಿಸುತ್ತಿರುವ ಶಾಲೆಯಲ್ಲಿ ಮಕ್ಕಳ ಕೈದೋಟ ಮತ್ತು ಉದ್ಯಾನ ಮತ್ತಷ್ಟು ಮೆರಗು ತಂದಿದ್ದು, ಇಲ್ಲಿನ ಪರಿಸರ ಪ್ರೇಮಕ್ಕೆ ನಿದರ್ಶನವಾಗಿದೆ ಎಂದರು.
ಹಿರಿಯರಾದ ಮುತ್ತಪ್ಪಜ್ಜ ಒಡೆಯರ, ಯಮನಪ್ಪ ನಾಗರಾಳ, ಎಸ್‌ಡಿಎಂಸಿ ಅಧ್ಯಕ್ಷ ಹನಮಂತ ಒಡೆಯರ, ಗ್ರಾಪಂ ಸದಸ್ಯ ಮಲ್ಲು ಜಗದಾಳ, ಹಿರಿಯ ಶಿಕ್ಷಕ ವಿ.ಡಿ.ಬಂಡಿ, ಸಹಶಿಕ್ಷಕ ಪಿ.ಆರ್.ಮಲ್ಲಾರಿ, ಮುಖ್ಯ ಶಿಕ್ಷಕ ಜಯಪ್ರಕಾಶ ಆನೂರ, ಪಿಡಿಒ ರಂಜಿತಾ ಹತ್ತಿ ಇದ್ದರು.
೬ ಎಂಎಲ್‌ಪಿ ೧
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಶಿವಲಿಂಗ ಸಿದ್ನಾಳ ಮಾತನಾಡಿದರು.
೬ ಎಂಎಲ್‌ಪಿ ೧ಎ
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದ ಬನದವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಮಕ್ಕಳು ಸಿದ್ದಗೊಳಿಸಿದ ಕೈದೋಟ ಮತ್ತು ಉದ್ಯಾನ ಗಮನ ಸೆಳೆಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ