ರನ್ನ ಬೆಳಗಲಿ:ಮಾ.೦೩., ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಶ್ರೀ ಮಾಧವಾನಂದ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಜರಗಿತು.
ಈರಣ್ಣ ಅರಗಂಜಿ ಸಂಸ್ಥೆಯ ಕಾರ್ಯದರ್ಶಿ ಮಾತನಾಡಿ ಶಿಕ್ಷಣ ದಿಂದ ಉತ್ತಮ ಬದುಕು ಸಾಧ್ಯವಾಗುತ್ತೆ,ಆದರಿಂದ ಶಿಕ್ಷಣವನ್ನು ಮಧ್ಯದಲ್ಲಿ ಬಿಟ್ಟು ಅಮೂಲ್ಯವಾದ ಶೈಕ್ಷಣಿಕ ಬದುಕನ್ನ ಹಾಳು ಮಾಡಿಕೊಳ್ಳಬೇಡಿ.ಎಲ್ಲಾ ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಸಂಸ್ಕಾರ ಪಡೆದು ಉತ್ತಮ
ನಾಗರಿಕರಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಆರ್ ಟಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು.ಮುಖ್ಯಶಿಕ್ಷಕ ಅಶೋಕ ಯಡಹಳ್ಳಿ, ಶ್ರೀಶೈಲಗೌಡ ಪಾಟೀಲ ಕಾರ್ಯಕ್ರಮ ಕುರಿತು ಮಾತನಾಡಿದರು.
ಕೆ ಎ ಹೊಸಮನಿ,ಜಿ ಆರ್ ನೇಸೂರ,ಜಿ ಆರ್ ಹಾದಿಮನಿ, ವಿ ಎಮ್ ಕಾಂಬಳೆ,ಎಮ್ ಬಿ ಹಸಬಿ,ಆರ್ ಜಿ ಮಾದರ, ವೀಣಾ ಕೋಲಾರ,ಕೆ ಎಸ್ ಸರಸ್ವತಿ, ಗೀತಾ ಗೋಕಾಕ, ಕೆ ಎಲ್ ನ್ಯಾಮಗೌಡರ ಮತ್ತು ಪಾಲಕ ಪೋಷಕರು, ವಿದ್ಯಾರ್ಥಿಗಳು,ಶಾಲಾ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.