Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

೭.೨೦ ಕೋಟಿ ರೂ.ಗಳ ವೆಚ್ಚದ ಕಾಮಗಾಗಳಿಗೆ ಶಾಸಕ ಮೇಟಿ ಚಾಲನೆ

ಬಾಗಲಕೋಟೆ, ಜೂನ್ ೨೬ : ಕಳೆದ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿ ೭.೨೦ ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಬಾಗಲಕೋಟೆ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು.
ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ೧೦೦ ಲಕ್ಷ ರೂ.ಗಳ ವೆಚ್ಚದ ತಾಲೂಕಿನ ಕಿರಸೂರದಿಂದ ಮುಗಳೊಳ್ಳಿ ಪು.ಕೇಂದ್ರ, ಕಡ್ಲಿಮಟ್ಟಿ ರೇಲ್ವೆ ಸ್ಟೇಶನ್ ಬೆನ್ನೂರ ಪು.ಕೆ ರಸ್ತೆತಿಂದ ೪.೫೦ ಕಿಮೀವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, ೧೦೦ ಲಕ್ಷರೂ.ಗಳ ವೆಚ್ಚದ ಮುಚಖಂಡಿ ಕ್ರಾಸ್ ರಸ್ತೆಯಿಂದ ವ್ಯಾಯಾ ಹರಣ ಶಿಕಾರಿ ಕಾಲೋನಿ ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಮಾರ್ಗವಾಗಿ ಎನ್.ಎಚ್-೩೬೭ಗೆ ಹೊಂದಿಕೊಳ್ಳುವ ಬಸವೇಶ್ವರ ಸರ್ಕಲ್‌ವರೆಗೆ ೨.೨೦ ಕಿಮೀ ರಸ್ತೆ ಸುಧಾರಣೆಗೆ ಚಾಲನೆ ನೀಡಲಾಯಿತು.
ಅದೇ ರೀತಿ ೪೦೦ ಲಕ್ಷ ರೂ.ಗಳ ವೆಚ್ಚದ ಬಿಳಿಗಿರಿರಂಗನಬೆಟ್ಟ ರಾಹೆ-೫೭ಕ್ಕೆ ಕೂಡುವ ಸಿಕ್ಕೇರಿ ಹತ್ತಿರದ ಕೆ.ಎಚ್.ಬಿ ಬಡಾವಣೆಯಲ್ಲಿ ಆಂತರಿಕ ರಸ್ತೆಗಳ ಸುಧಾರಣೆ ಹಾಗೂ ೧೨೦ ಲಕ್ಷ ರೂ,ಗಳ ವೆಚ್ಚದ ಮತಕ್ಷೇತ್ರ ವ್ಯಾಪ್ತಿಯ ಕಮಗತಿ ಗ್ರಾಮದ ವಿಠೋಬಾ ದೇವಾಲಯದಿಂದ ಸೇವಾಲಾಲ್ ಶಾಲೆ ಮಾರ್ಗವಾಗಿ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ-೪೪ಕ್ಕೆ ಕೂಡುವ ೧ ಕಿಮೀ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಹಾಗೂ ಶಿರೂರ ಗ್ರಾಮದ ಹತ್ತಿರ ಇರುವ ಹೇಮರೆಡ್ಡಿ ಮಲ್ಲಮ್ಮ ದೇವಾಲಯದಿಂದ ರಾಜ್ಯ ಹೆದ್ದಾರಿ-೩೬೭ಕ್ಕೆ ಕೂಡುವ ೨೨೦ ಮೀಟರ ರಸ್ತೆಯನ್ನು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 
ಗ್ರಾಮೀಣ ಹಾಗೂ ನಗರ ಭಾಗದ ಜನರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಕಾರ್ಯ ಕೈಗೊಳ್ಳಲಾಗಿದೆ. ಉತ್ತಮ ರಸ್ತೆ ವ್ಯವಸ್ಥೆಯು ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ಸರಕಾರದ ಬದ್ದತೆಯಾಗಿದೆ ಎಂದು ತಿಳಿಸಿದರು. ಗುತ್ತಿಗೆದಾರರು ಗುಣಮಟ್ಟದ ರಸ್ತೆ ಮಾಡುವುದರ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಗರಸಭೆ ಸದಸ್ಯೆ ಲಕ್ಷ್ಮೀ ಚೌಹಾನ್, ಬಾಗಲಕೋಟೆ ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಸಮಿತಿಯ ಅಧ್ಯಕ್ಷ ಎಸ್.ಎಂ.ರಾಂಪೂರ ಸೇರಿದಂತೆ ಪ್ರಮುಖರಾದ ನಾಗರಾಜ ಹದ್ಲಿ, ಬಲರಾಮ ಪವಾರ್, ಲಕ್ಷ್ಮಣ ದಡ್ಡಿ, ನಿಂಗಪ್ಪ ಕೋಟಿ, ಸಿದ್ದಪ್ಪ ಸುನಗದ, ಸಿದ್ದಪ್ಪ ಕೋಟೆಕಲ್, ರಂಗಪ್ಪ ಮಳ್ಳಿ, ಎಸ್.ಬಿ.ಮಾಚಾ, ಮಂಜು ಮುಚಖಂಡಿ ಹಾಗೂ ಇತರರು ಉಪಸ್ಥಿತರಿದ್ದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ