Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟೌನ್ ಪೋಸ್ಟ್ ಮತ್ತೆ ಪುನರಾರಂಭ ಮಾಡುವ ಭರವಸೆ : ಪ್ರತಿಭಟನೆ ಹಿಂದಕ್ಕೆ

ರಾಮದುರ್ಗ: ಪಟ್ಟಣದ ತೇರಬಜಾರನಲ್ಲಿರುವ ಟೌನ್ ಪೋಸ್ಟ್ ಅಂಚೆ ಕಛೇರಿಯನ್ನ ಮುಖ್ಯ ಕಛೇರಿಯ ಜೊತೆ ವೀಲಿನ ಮಾಡುವ ಪ್ರಕ್ರಿಯರ ವಿರೋಧಿಸಿ ಕಳೆದ ಮೂರು ದಿನಗಳಿಂದ ಹೋರಾಟ ನಡೆಸಿದ ವಿಜಯ ಸೇನಾ ಸಮೀತಿ ಹಾಗೂ ಸಾರ್ವಜನಿಕರಿಗೆ ಅಂಚೆ ಇಲಾಖೆ ಅಧಿಕಾರಿಗಳು ಟೌನ್ ಪೋಸ್ಟ್ ಮತ್ತೆ ಪುನರಾರಂಭ ಮಾಡಲು ಭರವಸೆ ನೀಡಿದರು.
ಪಟ್ಟಣ ಮುಖ್ಯ ಅಂಚೆ ಕಛೇರಿ ಎದುರುಗಡೆ ಕಳೆದ ಮೂರು ದಿನಗಳಿಂದ ವೀಲಿನ ಪ್ರಕ್ರಿಯೆಯನ್ನು ವಿರೋಧಿಸಿ ವಿಜಯ ಸೇನಾ ಸಮಿತಿ ಅನಿರ್ಧಿಷ್ಠಾವದಿ ಸತ್ಯಾಗ್ರಹ ನಡೆಸಿತ್ತು. ಮೂರನೇ ದಿನವಾದ ಇಂದು ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಂಚೆ ಅಧಿಕ್ಷಕರಾದ ಬಸವರಾಜ ಅವರು ಪತ್ರದ ಮೂಲಕ ಟೌನ ಕಛೇರಿ ಮತ್ತೆ ಪುನರಾರಂಭ ಮಾಡುವ ಭರವಸೆ ನೀಡಿದ ಹಿನ್ನಲೆ ಇಂದು ವಿಜಯ ಸೇನಾ ಸಮೀತಿ ಪ್ರತಿಭಟನೆಯನ್ನ ಹಿಂಪಡೆದರು.
ಈಗಾಗಲೇ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ವೀಲಿನ ಪ್ರಕ್ರಿಯೆ ನಡೆಸದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಈ ಟೌನ್ ಕಛೇರಿ ಪ್ರಾರಂಭವಾಗುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಮತ್ತೆ ಪ್ರಾರಂಭವಾಗುವ ಲಕ್ಷಣಗಳಿದ್ದು ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾ ನಿರತರಿಗೆ ಅಧಿಕಾರಿಗಳು ಮನವಿ ಮಾಡಿದರು.
ಜೋತೆಗೆ ಈಗಾಗಲೇ ಈ ಅಂಚೆ ಕಛೇರಿ ಮುಖ್ಯ ಅಂಚೆ ಕಛೇರಿಗೆ ವರ್ಗಾವಣೆ ಮಾಡಿದರೆ ವೃದ್ದರಿಗೆ ಅಂಗವಿಕಲರಿಗೆ ತೊಂದರೆಯಾಗುತ್ತೆ ಎಂಬ ಪ್ರತಿಭಟನಾ ನಿರತರ ಭೇಡಿಕೆ ಸ್ಪಂದಿಸಿದ ಅಧಿಕಾರಿಗಳಿಗೆ ಟೌನ್ ಅಂಚೆ ಕಛೇರಿ ಬಳಿ ಒಂದು ಜಾಗ ಗುರುತಿಸಿ ಆ ಸ್ಥಳದಲ್ಲಿ ಹಣ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಹಾಗೂ ಅಂಗವಿಕಲರಿಗೆ ಮನೆಗೆ ತೆರಳಿ ಪೋಸ್ಟಮನ್ ಮೂಲಕ ಹಣ ಕೊಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯ ಸೇನಾ ಸಮೀತಿ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ, ತಾಲೂಕು ಅಧ್ಯಕ್ಷ ಮಾರುತಿ ಮಾದರ, ಪ್ರಶಾಂತ ಅಂಗಡಿ, ಕರವೇ ಶಿವರಾಮೇಗೌಡ ಬಣದ ವಿನಯ ಚಂದರಗಿ, ಸುಭಾಸ ಬಾರ್ಕಿ ಸೇರಿದಂತೆ ಮಹಿಳೆಯರು ವಿಜಯ ಸೇನಾ ಸಮೀತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*