Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ವಿವಿಧ ಕ್ಷೇತ್ರಗಳನ್ನು ಪುನರ್ ರೂಪಿಸುವಲ್ಲಿ ಡಿಜಿಟಲ್ ರೂಪಾಂತರ ಮತ್ತು ಕೃತಕ ಬುದ್ಧಿಮತ್ತೆಯು ಮುಖ್ಯವಾಗಿದೆ"

ಇಂಡಿ : ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಬಹುಶಿಸ್ತಿಯ ವಿಧಾನಗಳ ಪ್ರಾಮುಖ್ಯತೆಯ ಸಮಗ್ರ ಮತ್ತು ಒಳನೋಟಗಳುಳ್ಳ ಅವಲೋಕನವನ್ನು ಮಾಡಬೇಕು.” ಎಂದು ಮುಖ್ಯ ಅತಿಥಿ ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಬಿ.ಬಿ.ಎಸ್.ವ್ಹಿ. ರಮಣಯ್ಯ ಹೇಳಿದರು.
ನಗರದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನದ ರಾಷ್ಟ್ರಮಟ್ಟದ ಬಹುಶಿಸ್ತಿಯ ಆನ್‌ಲೈನ್ ಸಮ್ಮೇಳನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈಗೀನ ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ನಾವಿನ್ಯತೆ, ಸುಸ್ಥಿರ ಅಭಿವೃದ್ಧಿ ಪರಿಣಾಮಕಾರಿ ಸಮಸ್ಯೆ ಪರಿಹಾರಕ್ಕಾಗಿ ವಿವಿಧ ವಿಭಾಗಗಳಲ್ಲಿ ಜ್ಞಾನದ ಏಕೀಕರಣವು ಅತ್ಯಗತ್ಯವಾಗಿದೆ. ಶಿಕ್ಷಣ, ಆಡಳಿತ, ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಂತಹ ವಿವಿಧ ಕ್ಷೇತ್ರಗಳನ್ನು ಪುನರ್ ರೂಪಿಸುವಲ್ಲಿ ತಂತ್ರಜ್ಞಾನ ವಿಶೇಷವಾಗಿ ಡಿಜಿಟಲ್ ರೂಪಾಂತರ ಮತ್ತು ಕೃತಕ ಬುದ್ಧಿಮತ್ತೆಯು ಮುಖ್ಯವಾಗಿದೆ. ವಿವಿಧ ಶೈಕ್ಷಣಿಕ ಕ್ಷೇತ್ರಗಳ ನಡುವಿನ ಸಹಯೋಗವು ಹೆಚ್ಚು ಸಮಗ್ರ ಮತ್ತು ಪರಿಣಾಮಕಾರಿ ಫಲಿತಾಂಶಗಳಿಗೆ ಕಾರಣವಾಗಬಹುದು. ಇದಲ್ಲದೆ, ಬೌದ್ಧಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯನ್ನು ಬೆಳೆಸುವಲ್ಲಿ ಸಂಶೋಧನೆ, ವಿಮರ್ಶಾತ್ಮಕ ಚಿಂತನೆ ಮತ್ತು ಶೈಕ್ಷಣಿಕ ಸಹಯೋಗ ಮಹತ್ವವಾಗಿದೆ.” ಎಂದರು
ಸಂಘದ ಗೌರವ ಕಾರ್ಯದರ್ಶಿ ಬಸವರಾಜ ತಾಂಬೆ , ಉಪಾಧ್ಯಕ್ಷ ಡಾ. ಆದರ್ಶ ಪ್ರಭಾಕರ ಬಗಲಿ ಸಂಶೋಧನಾ ನಿಯತಕಾಲಿಕೆಯನ್ನು ಬಿಡುಗಡೆಗೊಳಿಸಿ ಸಂಶೋಧನೆಯ ವಿಧಿ-ವಿಧಾನಗಳು ಕುರಿತು , ಸಂಘದ ಅಧ್ಯಕ್ಷರು ನೀಲಕಂಠಗೌಡ ಎಸ್. ಪಾಟೀಲ ಮಾತನಾಡಿ “ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಗಳ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಸಮ್ಮೇಳನಗಳು ಇನ್ನು ಹೆಚ್ಚು ಹೆಚ್ಚು ಜರುಗಬೇಕು. ಸಂಶೋಧನಾ ಕಾರ್ಯಗಳು ಚುರುಕುಗೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಗೆ ಆಧ್ಯತೆಯನ್ನು ಕೊಡಲಾಗುವುದು.” ಎಂದರು.
ನಿರ್ದೇಶಕರಾದ ವರ್ಧನ ದೋಶಿ , ಉಪನ್ಯಾಸಕಿ ಶೃತಿ ಪಾಟೀಲ , ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ , ಇಕ್ಯೂಎಸಿ ಸಂಯೋಜಕ ಜಯಪ್ರಸಾದ ಡಿ. ಮಾತನಾಡಿದರು.
ಪ್ರಾಧ್ಯಾಪಕ ಆನಂದ ನಡುವಿನಮನಿ, ವಿಶ್ವಾಸ ಕೋರವಾರ, ಪಿ.ಕೆ.ರಾಠೋಡ, ಸುರೇಂದ್ರ ಕೆ, ಎಸ್.ಬಿ.ಜಾಧವ, ಸಿ.ಎಸ್.ಬಿರಾದಾರ, ಶ್ರೀಕಾಂತ ರಾಠೋಡ, ಎಮ್.ಆರ್ ಕೋಣದೆ, ಆರ್.ಪಿ.ಇಂಗನಾಳ ಮತ್ತಿತರಿದ್ದರು.

 

 

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*