Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ : ವಿಕ್ರಮ ಕರನಿಂಗ

ಸಂಕೇಶ್ವರ : ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಅವಿಸ್ಮರಣೀಯವಾಗಿದ್ದು, ತಮ್ಮೆಲ್ಲರಿಗೂ ವಿದ್ಯಾಭ್ಯಾಸ, ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ ಎಂದು ನ್ಯಾಯವಾದಿ ವಿಕ್ರಮ ಕರನಿಂಗ ಹೇಳಿದರು.

ಪಟ್ಟಣದ ಭೀಮನಗರದಲ್ಲಿನ ಗೌತಮ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿ.೫ ರಂದು ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು
ನಡೆದಿದ್ದ ಪ್ರಬಂಧ ಸ್ಪರ್ಧೆಯಲ್ಲಿನ ವಿದ್ಯಾರ್ಥಿಗಳಿಗೆ ಭಾನುವಾರ ಪ್ರಶಸ್ತಿಯನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೫ ನೇ ಜಯಂತಿಯ ನಿಮಿತ್ತವಾಗಿ ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ ಭೀಮ ನಗರ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಇಂದಿನ ಮಕ್ಕಳಿಗೆ ಅಂಬೇಡ್ಕರ್ ಅವರ ಹೋರಾಟದ ಜೀವನ, ಶಿಕ್ಷಣ, ಸಂಘಟನೆ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಲು ಈ ಪ್ರಬಂಧ ಸ್ಪರ್ಧೆ ನಡೆದಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಖುಷಿ ನೀಡಿದೆ ಎಂದರು.

ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೀಣ ಖಾತೆದಾರ ಇವರಿಂದ ಸತ್ಕರಿಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿನ ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಯಲ್ಲಿನ ವಿದ್ಯಾರ್ಥಿಗಳಿಗೆ ಪ್ರತೇಕವಾಗಿ ಬಹುಮಾನ ವಿತರಿಸಲಾಯಿತು ಪ್ರಥಮ ಬಹುಮಾನ ೩೦೦೧, ದ್ವೀತಿಯ ಬಹುಮಾನ ೨೦೦೧, ತೃತೀಯ ಬಹುಮಾನ ೧೦೦೧, ರೂ. ನಗದು ಮತ್ತು ಮೊಮೆಂಟೋವನ್ನು ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಅವರಿಂದ ವಿತರಿಸಲಾಯಿತು.

ಪ್ರಾಥಮಿಕ ಶಾಲೆ ಕನ್ನಡ ವಿಭಾಗ : ರಿತೀಕಾ ಪ್ರಭಾಕರ ಪಾಟೀಲ, ಸಂಕೇಶ್ವರ, (ಪ್ರಥಮ ಬಹುಮಾನ) ಲಕ್ಷ್ಮೀ ಮನೋಜ ಬಸಟ್ಟಿ, ಸಂಕೇಶ್ವರ, (ದ್ವೀತಿಯ ಬಹುಮಾನ) ಅನನ್ಯಾ ಪ್ರಕಾಶ ಪೂರ್ವಿ, ಗಳತಗಾ, (ತೃತೀಯ ಬಹುಮಾನ)

ಪ್ರಾಥಮಿಕ ಶಾಲೆ ಇಂಗ್ಲಿಷ್ ವಿಭಾಗ : ಪೃಥ್ವಿ ಶಿವಪ್ಪಾ ಉರಬನಟ್ಟಿ, ಯರಗಟ್ಟಿ,(ಪ್ರಥಮ ಬಹುಮಾನ) ತನುಶ್ರೀ ರಾಜಶೇಖರ ಮಾರಿಹಾಳ, ಸಂಕೇಶ್ವರ (ದ್ವೀತಿಯ ಬಹುಮಾನ) ಅಪೇಕ್ಷಾ ಅಜೀತಕುಮಾರ ಉರಬನಟ್ಟಿ, ಹಿಡಕಲ್ ಡ್ಯಾಂ (ತೃತೀಯ ಬಹುಮಾನ)

ಪ್ರೌಢ ಶಾಲೆ ಕನ್ನಡ ವಿಭಾಗ : ವರ್ಷಿನಿ ಮಲ್ಲಿಕಾರ್ಜುನ ಮಗದುಮ್ಮ, ಯರಗಟ್ಟಿ (ಪ್ರಥಮ ಬಹುಮಾನ) ಶ್ರೀನಿಧಿ ಸಂಜು ಪೂಜಾರಿ (ದ್ವೀತಿಯ ಬಹುಮಾನ) ದೀಪಿಕಾ ಶಿವರುದ್ರ ಮಗದುಮ್ಮ , ನೇರಲಿ, (ತೃತೀಯ ಬಹುಮಾನ)

ಪ್ರೌಢ ಶಾಲೆ ಇಂಗ್ಲಿಷ್ ವಿಭಾಗ: ಅಭಿನವ ರಮೇಶ ನಡುಗೇರಿ, ಅಮ್ಮಣಗಿ (ಪ್ರಥಮ ಬಹುಮಾನ) ಸ್ಪೂರ್ತಿ ಸಂಜೀವಕುಮಾರ ತಳವಾರ ಸಂಕೇಶ್ವರ (ದ್ವೀತಿಯ ಬಹುಮಾನ) ಅವಜೀತ ಶ್ರೀಶೈಲ ಗಳತಗಿ (ತೃತೀಯ ಬಹುಮಾನ)

ಪ್ರೌಢ ಶಾಲಾ ಮರಾಠಿ ವಿಭಾಗ : ವಿಧಿಷಾ ನಾಮದೇವ ಪಾಟೀಲ ಸಂಕೇಶ್ವರ (ಪ್ರಥಮ ಬಹುಮಾನ) ಶ್ರಾವಣಿ ಸಚಿನ ಪಾಟೀಲ, ಸಂಕೇಶ್ವರ (ದ್ವೀತಿಯ ಬಹುಮಾನ) ವೀಣಾ ಬಾಲಕೃಷ್ಣ ಸುತಾರ ಸಂಕೇಶ್ವರ (ತೃತೀಯ ಬಹುಮಾನ) ತಮ್ಮದಾಗಿಸಿಕೊಂಡರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನಿಖಿಲ್ ನವೀನ ಗಂಗರೆಡ್ಡಿ, ಮುಖಂಡರಾದ ಪ್ರಮೋದ್ ಹೊಸಮನಿ, ಗಂಗಾರಾಮ ಭೂಸಗೋಳ, ಡಾ|| ಸುನಿಲ ಕಾಂಬಳೆ ಉಪನ್ಯಾಸಕರು, ಶಿಕ್ಷಕರಾದ ಭರತ್ ಪಾರ್ಥನಳ್ಳಿ, ಬಸವಂತ ಸತ್ಯನಾಯಕ, ಮಂಜುನಾಥ ಸತ್ಯನಾಯಿಕ, ರಾಜು ಸತ್ಯನಾಯಕ, ಪ್ರವೀಣ ಮಾಳಗೆ, ಕಿರಣ ಕಾಂಬಳೆ, ನಾಗರಾಜ ಕರನಿಂಗ, ವಿನಾಯಕ ಮಳನಾಯಿಕ ಸೇರಿದಂತೆ ಅನೇಕರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ