Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಬಾಸಾಹೇಬರ ೧೨೫ನೇ ಜಯಂತಿ : ಸಕಲ ಸಿದ್ದತೆಗೆ ಸೂಚನೆ

ಇಂಡಿ : ಬಾಬಾಸಾಹೇಬರು ದೇಶದ ಮಹಾನ ವ್ಯಕ್ತಿಗಳಲ್ಲಿ ಒಬ್ಬರು, ಇವರು ಸಂವಿಧಾನ ಶಿಲ್ಪಿ ಇಂತಹ ವ್ಯಕ್ತಿಗಳ ದಿನಾಚರಣೆಯ ಸಮಯದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಬೇಕು ಅಂದಾಗ ಮಾತ್ರ ಎಲ್ಲ ರೀತಿಯ ವಿಚಾರಗಳನ್ನು ವಿಚಾರ ನಡೆಸಬಹುದು ಮತ್ತು ಆಗುವಂತಹ ತೊಂದರೆಗಳು, ಅನಾನುಕೂಲತೆಗಳು ಎಲ್ಲವು ತಿಳಿಯಲು ಸಾಧ್ಯ ಎಂದು ಡಿ. ಎಸ್. ಎಸ್. ಮುಖಂಡರು ಸಭೆಯಲ್ಲಿ ಮಾತನಾಡಿದರು.
ಏಪ್ರಿಲ್ ೧೪ ರಂದು ನಡೆಯಲಿರುವ ಬಾಬಾಸಾಹೇಬರ ೧೨೫ನೇ ಜಯಂತಿ ನಿಮಿತ್ಯ ಇಂಡಿ ತಹಸೀಲ್ದಾರ ವಿಜಯ ಕಡಕಭಾವಿ ಇವರ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ನಡೆಸಲಾಯಿತು.
ಇಂಡಿ ತಾಲೂಕು ತಹಸೀಲ್ದಾರ/ದಂಡಾಧಿಕಾರಿಗಳು ಮಾತನಾಡಿ ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ತಿಳಿಸಿ, ಪ್ರತಿ ಗ್ರಾಮದ ಗ್ರಾಮ ಪಂಚಾಯತ ಹದ್ದೆಯಲ್ಲಿ ಬರುವಂತಹ ಅಂಬೇಡ್ಕರ್ ವೃತ್ತವನ್ನು ಸ್ವಚ್ಛತೆ ಗೊಳಿಸಿ, ಅಲ್ಲಿನ ವಾತಾವರಣ ಸರಿಯಾಗಿ ನೋಡಿಕೊಳ್ಳುವದು ಗ್ರಾಮ ಪಂಚಾಯತ್ ಇಲಾಖೆಗೆ ಅದೇಶಿಸಿದರು.
ಎಲ್ಲ ಇಲಾಖೆಯ ಕಚೇರಿಗಳಲ್ಲಿ ಯಾವುದೆ ಜಯಂತಿ, ಆಚರಣೆಗಳಾಗಲಿ ಎಲ್ಲರ ಸಮ್ಮುಖದಲ್ಲಿ, ಎಲ್ಲರಿಗೆ ಕಾಣುವಂತೆ ಆಚರಣೆ ಮಾಡಬೇಕು, ಎಲ್ಲ ಸಂಘ ಸೌಂಸ್ಥೆಗಳ ಸಹಕಾರದೊಂದಿಗೆ ಆಚರಣೆ ಮಾಡಬೇಕು, ಯಾವುದೆ ತರನಾದ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದರು.
ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ ಅವರ ೧೩೫ನೇ ಜಯಂತಿ ಆಚರಣೆಯನ್ನು ದಿನಾಂಕ ೧೪/೦೪/೨೦೨೬ರಂದು ಆಚರಣೆ ಮಾಡುವದು ಎಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಆಚರಣೆ ಮಾಡಿ ೯=೦೦ಗಂಟೆಗೆ ತಹಶೀಲ್ದಾರ್ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮ ನಂತರ ೯=೩೦ಕ್ಕೆ ಪ್ರವಾಸಿ ಮಂದಿರದಿಂದ ಭಾವಚಿತ್ರದ ಮೆರವಣೆಗೆ ಯಲ್ಲಿ ಕಲಾತಂಡ ಕರೆಯುವುದು ಶಿಸ್ತಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸುವುದು ಪರಿಶಿಷ್ಟ ಜಾತಿಯ ತಾಲೂಕಿನ ಅತಿ ಹೆಚ್ಚು ಅಂಕ ಪಡೆದ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಪರಿಶಿಷ್ಟ ಜಾತಿಯ ಉನ್ನತ ಹುದ್ದೆಯನ್ನು ಪಡೆದ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಲ್ಲ ಗ್ರಾಮಗಳ ಮುಖಂಡರಾದ ವಿನಾಯಕ ಗುಣಸಾಗರ, ಸುರೇಶ ನಡಗಡ್ಡಿ, ಭೀಮಾಶಂಕರ್ ತಳವಾರ, ನಿಂಗಪ್ಪ ಶರ್ಮಾ,ಬಾಬು ಗುಡಮಿ, ಚಂದ್ರಶೇಖರ ಹೊಸಮನಿ, ಪೀರಪ್ಪ ಕಟ್ಟಿಮನಿ, ಲಷ್ಮಿಕಾಂತ ಏಳಗಿ, ಶಿವಾನಂದ್ ಬಾಗಲಕೋಟ, ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ