Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂಡಿ ನಗರದಲ್ಲಿ ಬಡಮಕ್ಕಳಿಗೆ ಉಚಿತ ವಸತಿನಿಲಯ ಹಾಗೂ ದಾಸೋಹ ಮತ್ತು ಶಾಖಾ ಮಠ ನಿರ್ಮಾಣ : 30 ರಂದು ಸಭೆ

ಇಂಡಿ: ಇಂಡಿ ನಗರದಲ್ಲಿ ಪಂಚಮಸಾಲಿ ಸಮಾಜದ ಬಡಮಕ್ಕಳಿಗೆ ಉಚಿತ ವಸತಿನಿಲಯ ಹಾಗೂ ದಾಸೋಹ ಮತ್ತು ಶಾಖಾ ಮಠ ನಿರ್ಮಾಣಕ್ಕೆ ಜಾಗ ನೀಡುವ ಕುರಿತು ಚರ್ಚಿಸಲು ಮಾರ್ಚ ೩೦ ರಂದು ಮದ್ಯಾಹ್ನ ೧೨:೦೦ ಘಂಟೆಗೆ ಇಂಡಿ ನಗರದ ಶಾಂತೇಶ್ವರ ಪ್ರೌಢಶಾಲಾ ಆವರಣದಲ್ಲಿ ಪೂರ್ವಭಾವಿ ಸಭೆ ನಿಗದಿಪಡಿಸಲಾಗಿದ್ದು ಸಮಾಜ ಬಾಂಧವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಮನವಿ ಮಾಡಿದರು.
ಅವರು ನಗರದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂದು ಸಮಾಜದ ಶಾಖಾ ಮಠ , ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಮತ್ತು ಸಮಾಜ ಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲಿದ್ದು, ಯಾರಾದರೂ ದಾನಿಗಳು ಜಾಗ ನೀಡುತ್ತಿದ್ದರೆ ಸಮಾಜ ಮಂದಿರಕ್ಕೆ ಅವರ ಹೆಸರು ಇಡೋಣ. ಪಂಚಮಸಾಲಿ ಸಮಾಜ ೩ ಬಿ ವರ್ಗದಲ್ಲಿ ಬರುತ್ತಿದ್ದು ವಿದ್ಯಾರ್ಥಿನಿಲಯಗಳಲ್ಲಿ ಅವಕಾಶಗಳು ಕಡಿಮೆ ಸಿಗುತ್ತಿವೆ. ಹೀಗಾಗಿ ಸಮಾಜದ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಅತೀ ಅವಶ್ಯವಾಗಿದೆ ಎಂದರು.
ಸಭೆಯಲ್ಲಿ ಇಂಡಿ ತಾಲೂಕಾ ಪಂಚಮಸಾಲಿ ಸಮಾಜ ಅಧ್ಯಕ್ಷ ವಿ.ಎಚ್. ಬಿರಾದಾರ, ಪ್ರ.ಕಾರ್ಯದರ್ಶಿ ಶಿವಾನಂದ ಚಾಳೀಕಾರ, ಉಮೇಶ ಬಳಬಟ್ಟಿ, ಸುಧಾಕರಗೌಡ ಬಿರಾದಾರ, ಶಿವು ದೇವರ, ಭೀಮಾಶಂಕರ ಮುರಗುಂಡಿ, ಪರಮೇಶ್ವರ ಪತಂಗೆ, ಶ್ರೀಕಾಂತ ಕೂಡಿಗನೂರ, ಮಂಜುನಾಥ ಕಾಮಗೊಂಡ, ಶಾಂತುಗೌಡ ಬಿರಾದಾರ, ರಮೇಶ ಬಿರಾದಾರ, ಅನೀಲ ತೆನ್ನೆಳ್ಳಿ, ವಿನೋದ ಪಾಟೀಲ, ಈರನಗೌಡ ಪಾಟೀಲ, ಅಶೋಕ ಬಳಬಟ್ಟಿ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ ಸೇರಿದಂತೆ ಮತ್ತಿತರರಿದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*