Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೀವ ಉಳಿಸುವಲ್ಲಿ ಪ್ರಥಮ ಚಿಕಿತ್ಸೆ ಅಗತ್ಯ: ಡಾ. ದೇವೆಗೌಡರು


ಬೆಳಗಾವಿ: ಪ್ರಥಮ ಚಿಕಿತ್ಸೆ ಬಗ್ಗೆ ಎಲ್ಲರೂ ಅರಿತುಕೊಂಡಾದ ಮಾತ್ರ  ಸಮಾಜದಲ್ಲಿ ಆಗುವ ಅಪಘಾತ ಹಾಗೂ   ಮರಣ ಪ್ರಮಾಣ ಕಡಿಮೆ ಮಾಡಬಹುದು ಸಾಧ್ಯವಾಗುವುದು. ಅಪಘಾತವಾದಾಗ ತುರ್ತು ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್ ಸಹಾಯದಿಂದ ಜೀವ ಉಳಿಸುವ ಪ್ರಯತ್ನವನ್ನು ಯುವಕರು  ಮಾಡಬೇಕಿದೆ ಎಂದು ಡಾ. ದೇವೆಗೌಡರು ಸಲಹೆ ನೀಡಿದರು.

ನಗರದ  ಸಂಗೊಳ್ಳಿ ರಾಯಣ್ಣ ಪ್ರತಿಮೆ ದರ್ಜೆ ಕಾಲೇಜದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ  ಪ್ರಥಮ ಚಿಕಿತ್ಸೆ, ರಕ್ತದಾನ, ಕ್ಯಾನ್ಸರ್, ಸಾಂಕ್ರಾಮಿಕ ರೋಗದ ಕುರಿತು ತಿಳುವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ವೈದ್ಯಕೀಯ ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ನೀಡುವಾಗ ರಕ್ತ ಕಂಡು  ಕುಸಿದು ಬೀಳುತ್ತಾರೆ.  ಆದ್ದರಿಂದ , ಯುವಕರು ಅಪಘಾತವಾದಾಗ, ನೀರಿನಲ್ಲಿ ಮುಳುಗಿದಾಗ ಬೇರೆ ಬೇರೆ ಪ್ರಕರಣಗಳಲ್ಲಿ ಧೈರ್ಯದಿಂದ ಮುಂದೆ ಬಂದು ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಬೇಕು.  ಜೀವ ಬದುಕಿಸಿದರೆ ಅದಕ್ಕಿಂತ ದೊಡ್ಡದಾನ ಅಂದರೆ ಜೀವದಾನ ಅಂತಾ ತಿಳಿಸಿದರು.  ಅದೇ ನೀವು ಮಾಡುವ ಸಮಾಜ ಸೇವೆ ಎಂದು ತಿಳಿಸಿದರು.

ಉದಾಹರಣೆ ನಮ್ಮ ಸಂಬಂಧಿಕರು ಗೋವಾಕ್ಕೆ ಪ್ರವಾಸ ಮಾಡಲು ಹೋಗಿದ್ದರು ಅವರಿಗೆ 42  ವರ್ಷ ಅಕಸ್ಮಿಕ ಕುಸಿದು ಕುಳಿತರು ಆದರೆ,  ಅವರಿಗೆ ಪ್ರಥಮ ಚಿಕಿತ್ಸೆ ಬಗ್ಗೆ  ಗುರುತಿಲ್ಲದ ಕಾರಣ ದುಃಖದಲ್ಲಿ ಏನು ಮಾಡಬೇಕು ಎಂದು ತಿಳಿಯದೇ ಅವರನ್ನು ಕಳೆದುಕೊಂಡರು ಆದ್ದರಿಂದ ನೀವೆಲ್ಲರೂ ಪ್ರಥಮ ಚಿಕಿತ್ಸೆ , ರಕ್ತದಾನ, ಕ್ಯಾನ್ಸರ್ ದಂತಹ ತರಬೇತಿಯಲ್ಲಿ ಭಾಗವಹಿಸಿ ಸಮಾಜಕ್ಕೆ ಕೊಡುಗೆಯಾಗಲು  ಕರೆ ಕೊಟ್ಟರು.

ಸಂಗೊಳ್ಳಿ  ರಾಯಣ್ಣ ಮಹಾವಿದ್ಯಾಲಯ   ಪ್ರಾಚಾರ್ಯರಾದ ಎಸ್ ಸಿ. ಪಾಟೀಲ ಮಾತನಾಡಿ , ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳು, ಯುವಕರು  ನೀವೆಲ್ಲರೂ ಕಷ್ಟಕರ ಪರಿಸ್ಥಿತಿಯಲ್ಲಿರುವ ಜನರಿಗೆ ತೊಂದರೆ ಯಾದಾಗ ಏನು ಮಾಡಬೇಕೆಂಬುದರ ಬಗ್ಗೆ ತರಬೇತಿಯನ್ನು ತೆಗೆದುಕೊಂಡು ಸಮಾಜದಲ್ಲಿ ಯಾರಿಗಾದರೂ ತೊಂದರೆಯಾದಲ್ಲಿ ರಕ್ತ ಬೆಡಿಕೆ ಇದ್ದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸಹಾಯ ಮಾಡುವದರ ಜೊತೆಗೆ ಸಮಾಜಕ್ಕೆ ಧೈರ್ಯ ತುಂಬಿ ಅವರಿಗೆ ಸಹಾಯ, ರಕ್ತದಾನ ಮಾಡಿ ಒಂದು ಜೀವ ಉಳಿಸಲು ಮುಂದಾದರೆ ದೇವರಕ್ಕಿಂತ ಜೀವದಾನ ದೊಡ್ಡದು ಅಂತಾ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಡಾ. ವ್ಹಿ .ಡಿ. ಡಾಂಗೆ ಮಾತನಾಡಿ, ಎಸ್ ಡಿ. ರೆಡ್ ಕ್ರಾಸ್ ಸಂಸ್ಥೆ ಬೆಳಗಾವಿ ಜಿಲ್ಲೆಯ ಅಧ್ಯಕ್ಷರು,  ಜಗತ್ತಿನ 2 ನೇಯ ಮಹಾಯುದ್ದ ಸಂದರ್ಭದಲ್ಲಿ ಹೆರ್ನಿಡ್ರೋನಾಂಟ  1864 ದಿಲ್ಲಿ ಸಂಸ್ಥೆ ಸ್ಥಾಪಿಸಿದರು  ಮುಂದೆ ಜಗತ್ತಿನ್ಯಾದ್ಯಾಂತ  ಸಂಸ್ಥೆಗಳು ಸ್ಥಾಪಿಸಿದ್ದಾರೆ  1920 ಜೂನ್ 7 ರಂದು ದೇಶಾದ್ಯಂತ ಸಂಸ್ಥೆಗಳು ಸ್ಥಾಪಿಸಿದ್ದಾರೆ.

ಪ್ರಥಮ ಚಿಕಿತ್ಸೆ ಮುಖ್ಯವಾಗಿರುವುದರಿಂದ ಎಲ್ಲಾ ಯುವಕರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜಕ್ಕೆ ಕೊಡುಗೆಯಾಗಲು ವಿನಂತಿಸಿದರು .

ಚಿಕ್ಕೋಡಿಯಲ್ಲಿ ಡಿ ಎಚ್. ಓ ಆದಾಗ ಚಿಕ್ಕೋಡಿಯ‌ ಸುತ್ತ-ಮುತ್ತ ಕೃಷ್ಣ ನದೀಯ ತೀರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಬಂದಾಗ ನದೀ ತೀರದ ಗ್ರಾಮಗಳಲ್ಲಿರುವ ಜನರ ಆರೋಗ್ಯ ರಕ್ಷಣೆ, ಸ್ಥಳಾಂತರ ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಮಾಡುವುದು ಆರೋಗ್ಯ ಇಲಾಖೆ ಕಂದಾಯ ಉಳಿದ ಇಲಾಖೆ ಅಧಿಕಾರಿಗಳ ಸಹಾಯ ಸಹಕಾರವನ್ನು ನೀಡಿದೆ ರಾಜಕಾರಿಣಿಗಳು ಜನಪ್ರತಿನಿಧಿಗಳ ಸಹಾಯದಿಂದ ಮೇಲ್ವಿಚಾರಣೆ ಯಿಂದ ಯಶಸ್ವಿಯಾಗಿ ನಡೆಯಿತು ಆದ್ದರಿಂದ ಪ್ರಥಮ ಚಿಕಿತ್ಸೆ, ರಕ್ತದಾನ, ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಡಾ. ದೇವತಿ  ಗಸ್ತಿ , ರೆಡ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ  ಅಶೋಕ ಬಾದಾಮಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್  ವಿನೋದಿನಿ ಶರ್ಮಾ, ಪ್ರವೀಣ ಹೀರೇಮಠ, ಎಸ್ ಜಿ ಸಿದ್ನಾಳ, ಡಾ. ಡಿ ಎನ್ . ಮಿಸಾಳೆ, ಮೂಲಿಮನಿ,   ಪ್ರೀಯಾಂಕಾ ಪುರಾಣಿಕ,   ಮಹಾಂತೇಶ ಹಿರೇಮಠ, ಸುನೀಲ್, ಸುನೀತಾ ಮುಡಲಗಿ, ಭುವನೇಶ್ವರಿ ಪಾಟೀಲ,ನೀನಾ ಕಾರಜಗಿ , ಪ್ರವೀಣ ಹೀರೇಮಠ ನಿರೂಪಿಸಿದರು.  ಸುಜಾತಾ ಪೈ ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*