Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮ







ಬಳ್ಳಾರಿ,ಮಾ.17..: ಸರಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಗಣಿತ ಕಲಿಕೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಮೂಲಕ ೪ರಿಂದ ೮ನೇ ತರಗತಿಗಳ ಮಕ್ಕಳ ಗಣಿತ ಚಟುವಟಿಕೆ ಆಧಾರಿತ ಮೂಲಕ ಗಣಿತದ ಪರಿಕಲ್ಪನೆಗಳನ್ನು ಸಿಆರ್‌ಎ ವಿಧಾನ ಮೂರ್ತ ರೂಪದಲ್ಲಿ ಬಲಪಡಿಸುವ ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನಾಧಿಕಾರಿಗಳ ಕೆಲಸ ನಿರ್ವಹಣೆಯನ್ನು ಡಯಟ್ ಪ್ರಾಂಶುಪಾಲ ಡಾ.ಜೆ.ಎಂ.ತಿಪ್ಪೇಸ್ವಾಮಿ ಅಭಿನಂದಿಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಂತದ ಮಕ್ಕಳ ಗಣಿತ ಸ್ಪರ್ಧೆಯ ವರದಿ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ವರದಿ ಮಾಹಿತಿ ಹಂಚಿಕೊAಡು ಇಲಾಖೆಯ ಎಲ್ಲಾ ಶಾಲೆಗಳಲ್ಲಿ ಕಿಡ್ ಬಳಕೆಯೊಂದಿಗೆ ಗಣಿತ ಶಿಕ್ಷಕರು ಮಕ್ಕಳ ಕಲಿಕಾ ಮಟ್ಟ ವೃದ್ಧಿಸಲು ಆಸಕ್ತಿಯಿಂದ ನಿರ್ವಹಿಸಲು  ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ  ಮಾತನಾಡಿ, ಗಣಿತಕಲಿಕಾ ಆಂದೋಲನ ಕಿಟ್ ಎಲ್ಲಾ ಶಾಲೆಗಳಲ್ಲಿ ಬಳಸುವಂತಹಾಗಬೇಕು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿ ಪಾಠ ವೀಕ್ಷಣೆ  ಮಾಡುವ ಮೂಲಕಎಲ್ಲಾ ಶಿಕ್ಷಕರಿಗೆ ತರಬೇತಿ ಪೂರ್ಣಗೊಳಿಸಿ ಮಕ್ಕಳ ಗಣಿತ ಕಲಿಕಾ ಮಟ್ಟವನ್ನು ಹೆಚ್ಚಿಸಲು ಎಲ್ಲಾ  ಅನುಷ್ಠಾನ ಅಧಿಕಾರಿಗಳುಹಾಗೂ ಶಿಕ್ಷಕರುಆಸಕ್ತಿವಹಿಸಬೇಕು.ಪಾಠೋಪಕರಣಗಳಬಳಕೆಯಿಂದಚಟುವಟಿಕೆ ಆಧಾರಿತವಾಗಿ ಮಕ್ಕಳಿಗೆಕಲಿಸಲು ಗಣಿತ ಗುಣಮಟ್ಟದ ಕಲಿಕೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.

ಅಕ್ಷರ ಫೌಂಡೇಶನ್ ಪ್ರೋಗ್ರಾಮ್ ಮ್ಯಾನೇಜರ್ ಹನುಮಂತರಾಯ ಬಿ ಕಣ್ಣಿ ಇವರು ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮಗಳನ್ನು ಪರಿಚಯಿಸಿ ಗಣಿತ ಕಿಟ್ ಬಳಕೆ,ತರಬೇತಿ, ಗಣಿತ ಸ್ಪರ್ಧೆಗಳ ಮಾಹಿತಿ ಹಂಚಿಕೊAಡರು ಜಿಲ್ಲಾ ವರದಿ ವಿಶ್ಲೇಷಿಸಿ,ಸರಳ ಮತ್ತು ಕಠಿಣ ಪರಿಕಲ್ಪನೆಗಳ ವ್ಯತ್ಯಾಸವನ್ನುವಿವರಿಸಿದರು.ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಇಲಾಖೆ ಮತ್ತು ಸಮುದಾಯದ ಸಹಕಾರದಿಂದ ಸರಕಾರಿ ಶಾಲೆಗಳನ್ನು ಬಲಪಡಿಸಲು ಸಾಧ್ಯ,ಗಣಿತ ಸ್ಪರ್ಧೆಯ ವರದಿ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಿಟ್ಟ್ ಬಳಕೆ ಮೂಲಕ ಶಿಕ್ಷಕರು ಚಟುವಟಿಕೆ ಆಧಾರಿತವಾಗಿ ಕಲಿಸಲು ಸಮಯದ ಕೊಡಬೇಕು ಎಂದರು.

ಹಿರಿಯ ಜಿಲ್ಲಾ ಕ್ಷೇತ್ರ ಸಂಯೋಜಕ ಅಡಿವೇಶಪ್ಪ ಮಾತನಾಡಿ, ಗಣಿತ ಕಿಟ್ ಪರಿಚಯ,ತರಬೇತಿ ಸಂಪನ್ಮೂಲಗಳು,ಗಣಿತ ಸ್ಪರ್ಧೆಯ ವರದಿಯ ಅನುಸಾರ ಎಲ್ಲಾ ಅನುಷ್ಠಾನ ಅಧಿಕಾರಿಗಳು ಹಾಗೂ ಶಿಕ್ಷಕರು ಆಸಕ್ತಿ ವಹಿಸಿ ಕಾರ್ಯಕ್ರಮಗಳು ಮಕ್ಕಳಿಗೆ ತಲುಪಿಸಲು ತಿಳಿಸಿದರು.

ಸರಕಾರಿ ಪ್ರಾಥಮಿಕ ಶಾಲೆಗಳ ೪ರಿಂದ ೮ನೇ ತರಗತಿಯ ಮಕ್ಕಳಲ್ಲಿ ನಿರಂತರವಾಗಿ ಗಣಿತ ಕಲಿಕೆಯ ಕೌಶಲ್ಯ ಹಾಗೂ ಜ್ಞಾನ ಬೆಳೆಸಲುಸಹಕಾರಿಯಾಗಿದೆ.ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಅವರ ಪ್ರತಿಭೆಯನ್ನು ಗುರುತಿಸಲು ಗಣಿತ ಸಾಧನಾ ಸ್ಪರ್ಧೆ ನಡೆಸುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ೨೫ ಉತ್ತಮಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಎಸ್ಡಿ ಎಂ ಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಇದಕ್ಕೆ ಪೂರಕವಾಗಿ ಸಹಕರಿಸಿದ ಉತ್ತಮ೨೫ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳನ್ನು ಡಯಟ್ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುರೇಶ್ ಬಾಬು,  ಗೀತಾ, ವಿಜಯರಂಗಾರೆಡ್ಡಿ, ಮಯೂರ ಗದುಗಿನ ಜಿ ಕೆ ಎ ಜಿಲ್ಲಾ ನೋಡಲ್ ಅಧಿಕಾರಿಗಳು, ನಿಂಗಪ್ಪ, ಡಿಡಿಪಿಐ ಕಚೇರಿಯ ಶ್ರೀಕಾಂತ ರೆಡ್ಡಿ, ತಾಲೂಕ ಜಿಕೆಎ ನೋಡಲ್ ಅಧಿಕಾರಿ  ಸಿದ್ದಲಿಂಗಪ್ಪ ಎಸ್ ಬಳ್ಳಾರಿ ಪೂರ್ವ, ಗಜೇಂದ್ರ ಸಿರುಗುಪ್ಪ, ಅನ್ನಪೂರ್ಣಸಂಡೂರ್  ಸೇರಿದಂತೆ ಮತ್ತಿತರರು ಇದ್ದರು.











One attachment  •  Scanned by Gmail
















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ