Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾ.೨೯ ರಿಂದ ೩೯ನೇ ಶರಣ ಸಂಸ್ಕೃತಿ ಉತ್ಸವ

ರಾಯಬಾಗ: ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ ಮಾ.೨೯ ರಿಂದ ಎ.೨ ರವರೆಗೆ ೩೯ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.

ಮಾ.೨೯ ರಂದು ಮುಂ.೭ ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮಿಜೀಯವರು ಧ್ವಜಾರೋಹಣ ನೆರವೇರಿಸುವರು, ೮ ಗಂಟೆಗೆ ಬುತ್ತಿ ಮೆರವಣಿಗೆ ನಡೆಯುವುದು. ೧೧ ಗಂಟೆಗೆ ನಡೆಯುವ ಕೃಷಿ ಮೇಳವನ್ನು ಅಥಣಿ ಕಾಡಸಿದ್ಧೇಶ್ವರ ಮಠದ ಡಾ.ಕಾಡಯ್ಯ ಸ್ವಾಮಿಜೀ ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ವೀರಭದ್ರ ಸ್ವಾಮಿಜೀಯವರು ವಹಿಸಲಿದ್ದಾರೆ.
ಸಂಜೆ ೪ ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಬಗ್ಗೆ ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮಿಜೀಯವರು ಪ್ರವಚನ ನೀಡಲಿದ್ದಾರೆ. ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ ಹಾಗೂ ವಿಶ್ವ ಹಿಂದೂ ಪರಿಷತ್ತ ಪ್ರಾಂತ ಗೋರಕ್ಷಾ ಪ್ರಮುಖ ವಿಠ್ಠಲಜಿ ಮಾಳಿ ಭಾಷಣ ಮಾಡಲಿದ್ದಾರೆ.
ಮಾ.೩೦ ರಂದು ಮುಂ.೯ ಗಂಟೆಗೆ ಮುಕ್ತ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ ೬ ಗಂಟೆಗೆ ನಡೆಯುವ ಜನಪದ ಜಾತ್ರೆಯಲ್ಲಿ ಜನಪದ ಸಾಹಿತಿ ಶಂಭು ಬಳಿಗಾರ ಭಾಗವಹಿಸಲಿದ್ದಾರೆ.
ಮಾ.೩೧ ರಂದು ವೀರಭದ್ರ ಸ್ವಾಮಿಜೀಯವರ ತುಲಾಭಾರ ನಡೆಯಲಿದ್ದು, ಸಾನ್ನಿಧ್ಯವನ್ನು ಅರಕೇರಿ ಮಠದ ಬ್ರಹ್ಮಲಿಂಗ ಸ್ವಾಮಿಜೀಯವರು ವಹಿಸಲಿದ್ದಾರೆ. ಸಂಜೆ ೪ ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಮೇಖಳಿ ಪರಮೇಶ್ವರ ಗುಡ್ಡದ ರಾಮಲಿಂಗ ಸ್ವಾಮಿಜೀ ಭಾಗವಹಿಸಲಿದ್ದಾರೆ. ಸಂಜೆ ೬ ಗಂಟೆಗೆ ವಿಸ್ಮಯ ಜಾದೂ ಲೋಕ ಕಾರ್ಯಕ್ರಮ ನಡೆಯಲಿದೆ.
ಎ.೧ ರಂದು ಮುಂ.೮ ಗಂಟೆಗೆ ಮಕ್ಕಳಿಂದ ವಚನ ಕಂಠಪಾಠ ಸ್ಪರ್ಧೆ ನಡೆಯಲಿದೆ. ಸಂಜೆ ೪ ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮಿಜೀಯವರು ವಹಿಸಲಿದ್ದಾರೆ. ಸದಲಗಾ ಶಿವಾನಂದ ಮಠದ ಡಾ.ಶ್ರದ್ಧಾನಂದ ಸ್ವಾಮಿಜೀ, ಬೆಳವಿ ಸಿದ್ದಾರೂಢ ಮಠದ ಮೃತ್ಯುಂಜಯ ಸ್ವಾಮಿಜೀ ಭಾಗವಹಿಸಲಿದ್ದಾರೆ. ಸಂಜೆ ೬ ಗಂಟೆಗೆ ದಿಯಾ ಹೆಗ್ಡೆ ಹಾಗೂ ಸುಜಾತಾ ಕಲ್ಮೇಶ ಸಂಗಡಿಗರಿಂದ ಸಂಗೀತ ಜಾತ್ರೆ ನಡೆಯಲಿದೆ.
ಎ.೨ ರಂದು ಮುಂ.೫ ಗಂಟೆಗೆ ಕೋಟಿ ಜಪಯಜ್ಞ, ಮುಂ.೭ ಗಂಟೆಗೆ ಶ್ರೀ ಪಂಕಲಿಂಗಗಳಿಗೆ ರುದ್ರಾಭಿಷೇಕ ನಡೆಯುವುದು.ಮುಂ.೯ ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ವೀರಭದ್ರ ಸ್ವಾಮಿಜೀ ವಹಿಸಲಿದ್ದಾರೆ. ದೋಣವಾಡ ದುರದುಂಡೇಶ್ವರ ಮಠದ ಶಿವಾನಂದ ಸ್ವಾಮಿಜೀ, ವಿಜಯಪುರ ಜಿಲ್ಲೆಯ ಜೈನಾಪುರದ ಸಿದ್ಧಲಿಂಗ ಸ್ವಾಮಿಜೀ, ಕಾಡಾಪೂರ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮಿಜೀ ಭಾಗವಹಿಸಲಿದ್ದಾರೆ.
ಸಂಜೆ ೬ ಗಂಟೆಗೆ ಸಕಲ ಸದ್ಭಕ್ತರಿಂದ ತೇರೋತ್ಸವ ಹಾಗೂ ಸಂಜೆ ೭ ಗಂಟೆಗೆ ದೀಪೋತ್ಸವ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿ ವರೆಗೆ ಮಹಾಪ್ರಸಾದ ವ್ಯವಸ್ಥೆ ಇರುವುದರಿಂದ, ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ನಂದಿಕುರಳಿ ಶ್ರೀ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮಿಜೀಯವರು ತಿಳಿಸಿದ್ದಾರೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*